ಜಲಾವೃತ್ತಗೊಂಡ ಬೆಳೆಗಳು ಆತಂಕದಲ್ಲಿ ರೈತರು,ಮಳೆಗೆ ಕಪ್ಪಾದ ಜೋಳದ ತೆನೆ ಸೂರ್ಯಕಾಂತಿ ಜೊಲ್ಲು

0
215

ಕೊಟ್ಟೂರು:ಸೆ:11:- ತಾಲೂಕಿನಯಾದ್ಯಂತ ಸತತವಾಗಿ ಹತ್ತರಿಂದ ಹದಿನೈದು ದಿನಗಳಿಂದ ಮಳೆ ಸುರಿಯುತ್ತಿದೆ, ಬಹುತೇಕ ಕಡೆ ಬೆಳೆಗಳು ಸಂಪೂರ್ಣ ಜಲಾವೃತಗೊಂಡು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ. ಒಮ್ಮೆ ಅತಿವೃಷ್ಟಿ ಇನ್ನೊಮ್ಮೆ ಅನಾವೃಷ್ಟಿಗೆ ಸಿಕ್ಕಿ ರೈತನ ಬದುಕು ಈ ಬಾರಿ ಮೂರಾಬಟ್ಟೆಯಾಗಿದೆ.

ನಿರಂತರ ಮಳೆಗೆ ರೈತರು ತತ್ತರಿಸಿ ಹೋಗಿದ್ದಾರೆ ಈ ಬಾರಿ ಮುಂಗಾರು ಬೆಳೆಗಳು ಸಕಾಲಕ್ಕೆ ಆಗಿದೆ ಆದರಿಂದ ಬೆಳೆಗಳೆಲ್ಲವೂ ಹಸಿರಿನಿಂದ ನಳನಳ ಸುತ್ತಿದ್ದು. ರೈತನ ಸಂತಸ ಹೆಚ್ಚಿತು ಆದರೆ ಕೊಯ್ಯಲು ಬಂದ ಜೋಳದ ತೆನೆಗಳೆಲ್ಲ ಕಪ್ಪಾಗಿವೆ ಕೆಲವರು ಕೊಯ್ಯಲು ಮಾಡಿದ ಜೋಳದ ತೆನೆಗಳನ್ನು ಒಕ್ಕಲುತನ ಮಾಡಲು ಮಳೆರಾಯ ಬಿಡುತ್ತಿಲ್ಲ ತೆನೆಗಳ ರಾಶಿಯನ್ನು ರೈತರು ಕಣ ರಸ್ತೆ ಬಂಡೆಗಳ ಮೇಲೆ ಹಾಕಿದ್ದಾರೆ ತೆನೆಗಳು ಒಣಗಲು ಬಿಸಿಲಿಲ್ಲ ಸ್ವಲ್ಪ ಹೊತ್ತು ಬಿಸಿಲು ಕಾದರೆ ಮತ್ತೆ ಮಳೆ. ತೇವಾಂಶದ ಕಾರಣ ತೆನೆಗಳಲ್ಲಿ ಮೊಳಕೆ ಒಡೆದು ಬೆಳೆ ನಾಶವಾಗುವ ಆತಂಕ, ರೈತರದ್ದು ಕೊಯ್ಯಲು ಬಂದ ಜೋಳದ ಹೊಲದ ತುಂಬೆಲ್ಲ ನೀರು ನಿಂತು ತೆನೆ ಕೊಯ್ಯಲು ಮಾಡದ ಹಾಗೆ ಕೆಸರುಗದ್ದೆಯಾಗಿದೆ. ಹೀಗೆ ಮುಂದುವರೆದರೆ ಜೋಳದ ಬೆಳೆ ಕೈ ತಪ್ಪಲಿದೆ ಎಂಬುದು ಅನ್ನದಾತನ ಗೋಳಾಗಿದೆ .

ಇದರ ಜೊತೆಗೆ ಮೆಕ್ಕೆಜೋಳ ಸೂರ್ಯಕಾಂತಿ ಈರುಳ್ಳಿ ಹೊಲದಲ್ಲಿ ನೀರು ನಿಂತು ಕೊಳೆತು ಹೋಗುತ್ತಿದೆ ಎಡಬಿಡದೆ ಸುರುತ್ತಿರುವುದು ಕೊಟ್ಟೂರು ತಾಲೂಕಿನ ಅತ್ಯಂತ ಸಂಗಮೇಶ್ವರ, ಕುಡುತಿನ ಮಗ್ಗಿ, ಅಂಬಳಿ, ಬೇವೂರು, ರಾಂಪುರ, ಹಗರಿ ಗಜಾಪುರ ಬಳಿಗನೂರು ಇನ್ನೂ ಹಲವು ಗ್ರಾಮದ ರೈತರ ಅಳಲಾಗಿದೆ.

ಮುಂಗಾರು ಮಳೆ ಉತ್ತಮವಾಗಿ ಆರಂಭಗೊಂಡು ರೈತರು ಖುಷಿಯಲ್ಲಿದ್ದರೂ. ಬಿತ್ತನೆಯ ಸಮಯದಲ್ಲಿ ಕಾಲಕಾಲಕ್ಕೆ ಮಳೆಯಾಗಿ ಒಳ್ಳೆಯ ಬೆಳೆ ಬಂದಿದೆ ಕಟಾವು ಮಾಡುವ ಹಂತದಲ್ಲಿ ಮಳೆಯೂ ಸುರುದರಿಂದ ತೆನೆ ಕೊಯ್ಯಲು ಆಗುತ್ತಿಲ್ಲ ಇದರಿಂದ ಜೋಳದ ತೆನೆಯಲ್ಲ ಕಪ್ಪಾಗಿ ಹೋಗಿ ಬೆಲೆ ಕುಸಿಯುತ್ತಿದೆ ಸರ್ಕಾರವು ಮತ್ತು ಸಂಬಂಧಪಟ್ಟ ಕೃಷಿ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

-ಗುಂಡ್ಗತ್ತಿ ಮಂಜುನಾಥ
ರೈತ ಸಂಗಮೇಶ್ವರ ಗ್ರಾಮ.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here