ಅನಿಮಿಯ ಮುಕ್ತ ಭಾರತ ರೂಪಿಸಲು “ಸ್ಪಿರುಲಿನಾ ಚಿಕ್ಕಿ ಕಾರ್ಯಕ್ರಮ”ಕುರಿತು ಜಾಗೃತಿ,

0
584

ಸಂಡೂರು:ಆಗಸ್ಟ್ :24:- ಮಕ್ಕಳು ವೈಯಕ್ತಿಕ ಸ್ವಚ್ಚತೆ ಮತ್ತು ಪೌಷ್ಟಿಕ ಆಹಾರ ಸೇವನೆಗೆ ಹೆಚ್ಚು ಗಮನ ಕೊಡಬೇಕು: ಶಾಲೆಯ ಮುಖ್ಯ ಶಿಕ್ಷಕ ಹೆಚ್.ತಿಪ್ಪಯ್ಯ ಹೇಳಿದರು

ತಾಲೂಕಿನ ತೋರಣಗಲ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅನಿಮಿಯ ಮುಕ್ತ ಭಾರತ ಅಭಿಯಾನ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಮಕ್ಕಳು ಮದುವೆ ವಯಸ್ಸಿಗೆ ಬರುವುದರೊಳಗೆ ರಕ್ತಹೀನತೆಯಿಂದ ಬಳಲಬಾರದು, ಸಂಪೂರ್ಣ ಆರೋಗ್ಯವಂತರಾಗಲು ಪ್ರತಿದಿನ ಪೌಷ್ಟಿಕಾಂಶ ಉಳ್ಳ ಆಹಾರ ಸೇವಿಸ ಬೇಕು ಹಾಗೆ ವೈಯಕ್ತಿಕ ಆರೋಗ್ಯವನ್ನು ಸುಸ್ಥಿರವಾಗಿಟ್ಟುಕೊಳ್ಳ ಬೇಕು ಎಂದು ಅವರು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಇಲಾಖೆಯ ಮತ್ತೊಂದು ಮಹತ್ವಾಕಾಂಕ್ಷೆಯ “ಸ್ಪಿರುಲಿನಾ ಚಿಕ್ಕಿ” ಕಾರ್ಯಕ್ರಮವನ್ನು ಪರಿಚಯಿಸುತ್ತಿದೆ, ಈ ಕಾರ್ಯಕ್ರಮದ ಅಂಗವಾಗಿ 11 ರಿಂದ18 ವರ್ಷದ ಶಾಲಾ ಹೆಣ್ಣು ಮಕ್ಕಳ ರಕ್ತದ ಹೆಚ್.ಬಿ ಅಂಶ ಪತ್ತೆ ಹಚ್ಚುವ ಕಾರ್ಯಕ್ರಮವನ್ನು ಇಲಾಖೆ ಹಮ್ಮಿಕೊಂಡಿದ್ದು, ರಕ್ತಹೀನತೆ ಅಥವಾ ಅನಿಮಿಯಾ ಮುಕ್ತ ಮಾಡಲು ಮಧ್ಯಾಹ್ನದ ಬಿಸಿ ಊಟ, ಬೆಳಗಿನ ಕ್ಷೀರ ಭಾಗ್ಯ ಯೋಜನೆಯನ್ನು ಉಪಯೋಗಿಸಿಕೊಂಡು ಇದಕ್ಕೆ ಪೂರಕವಾಗಿ ಆರು ತಿಂಗಳಿಗೊಮ್ಮೆ ಜಂತುಹುಳು ನಿವಾರಣೆ ಮಾತ್ರೆ ನೀಡಿ, ಪ್ರತಿ ಸೋಮವಾರ ಒಂದು ಐ.ಎಫ್. ಎ ಮಾತ್ರೆ ನೀಡಲಾಗುತ್ತಿದೆ, ಆದಾಗ್ಯೂ ಮಕ್ಕಳಲ್ಲಿ ರಕ್ತಹೀನತೆ ಸಾಮಾನ್ಯವಾಗಿದೆ, 2016 ರಲ್ಲಿ ಶೇಕಡ 53% ರಷ್ಟು ಕಿಶೋರಿಯರಲ್ಲಿ ರಕ್ತಹೀನತೆ ಕಂಡು ಬಂದಿದ್ದು ಇದರ ಅಂತರವನ್ನು 2022 ಕ್ಕೆ ಶೇಕಡ 36 ಕ್ಕೆ ಇಳಿಸುವ ಗುರಿಯನ್ನು ಇಟ್ಟುಕೊಂಡು ಕ್ರಮಗಳನ್ನು ಕೈಗೊಳ್ಳಲಾಗಿತ್ತು, ಸಧ್ಯ ಮಕ್ಕಳಲ್ಲಿ ರಕ್ತಹೀನತೆ ಕಡಿಮೆ ಯಾಗಿರಬಹುದಾ ಎಂಬುದನ್ನು ಪತ್ತೆ ಹಚ್ಚಲು ರಕ್ತದ ಪರೀಕ್ಷೆಯನ್ನು ಮಾಡಲಾಗುತ್ತಿದೆ, ಇದರ ಫಲಿತಾಂಶದ ಆಧಾರದ ಮೇಲೆ ರಕ್ತಹೀನತೆ ಇನ್ನೂ ಇದೆ ಎಂದು ಕಂಡು ಬಂದರೆ,ಮುಂದಿನ ದಿನಗಳಲ್ಲಿ ಸರ್ಕಾರವು ರಕ್ತಹೀನತೆಗೆ ಉತ್ತಮವೆಂದು ಗುರುತಿಸಲ್ಪಟ್ಟಿರುವ ಸ್ಪಿರುಲಿನಾ ಮತ್ತು ಹೆಚ್ಚು ಕಬ್ಬಿಣಾಂಶ ಹೊಂದಿರುವ ಚಿಕ್ಕಿ ಕೊಡುವ ವ್ಯವಸ್ಥೆಯನ್ನು ಜಾರಿಗೊಳಿಸ ಬಹುದು, ಪರೀಕ್ಷೆಯಲ್ಲಿ ರಕ್ತಹೀನತೆ ಇರುವ ಕಿಶೋರಿಯರಿಗೆ ಉನ್ನತ ಚಿಕಿತ್ಸೆ ನೀಡಲಾಗುತ್ತದೆ, ರಕ್ತಹೀನತೆ ನಿವಾರಿಸುವ ಕಾರಣಕ್ಕಾಗಿ ಸ್ಪಿರುಲಿನಾ ಚಿಕ್ಕಿ ಕಾರ್ಯಕ್ರಮವನ್ನು ಪರಿಚಯಿಸುತ್ತಿದೆ, ಮಕ್ಕಳು ಸ್ಪಿರುಲಿನಾ ಮತ್ತು ಚಿಕ್ಕಿ ಸೇವಿಸುವುದರಿಂದ ರಕ್ತಹೀನತೆ ಕಡಿಮೆಯಾಗಬಹುದು, ಅನಿಮಿಯ ಮುಕ್ತ ಭಾರತ ರೂಪಿಸಲು ಸಹಕಾರಿಯಾಗಬಹುದು ಎಂದು ಅವರು ತಿಳಿಸಿದರು,

ಆರ್.ಕೆ.ಎಸ್.ಕೆ ಕೌನ್ಸಿಲರ್ ಪ್ರಶಾಂತ್ ಸ್ವಾಗತ ಕೋರಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು, ನಂತರ ಶಾಲೆಯ ಮಕ್ಕಳ ಸಂಖ್ಯೆಗೆ ಅನುಗುಣವಾಗಿ 20 ವಾರಗಳಿಗೆ ಸರಿಯಾಗುವಷ್ಟು 7000 ಐ.ಎಫ್.ಎ ಮಾತ್ರೆಗಳನ್ನು ನೀಡಲಾಯಿತು,

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಹೆಚ್.ತಿಪ್ಪಯ್ಯ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆರ್.ಕೆ.ಎಸ್.ಕೆ ಕೌನ್ಸಿಲರ್ ಪ್ರಶಾಂತ್, ಸಹ ಶಿಕ್ಷಕರಾದ ಎಸ್.ಪಾರ್ವತಿ, ಅನುಷಾ, ದ್ರಾಕ್ಷಾಯಣಿ, ಉಷಾ,ವಿಜಯಲಕ್ಷ್ಮಿ, ಸುಶೀಲಾ, ಸುನಿತಾ,ಚನ್ನಪ್ಪ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here