ಪಿಡಿಓ ಬರೆದ ಎರಡು ಪತ್ರದಲ್ಲಿ ಸತ್ಯಯಾವುದು.? ನರಸಿಂಗಾಪುರ ಗ್ರಾಪಂನ ಪತ್ರ ಅವಾಂತರ.!

0
294

ಸಂಡೂರು:ಸೆ:15:-ತಾಲೂಕಿನ ನರಸಿಂಗಾಪುರ ಗ್ರಾಪಂ ಅಧ್ಯಕ್ಷೆ ಶ್ರೀಮತಿ ಸುಶೀಲಾ ಓಬಳೇಶ್ ಅವರ ಪತಿ ಓಬಳೇಶ್ ಅವರು ಗ್ರಾಪಂಗೆ ಸಂಬಂಧಿಸಿದ ವಾರ್ಡಗಳ ಸದಸ್ಯರ ಗಮನಕ್ಕೂ ಹಾಗೂ ಪಂಚಾಯತ್ ಅಭಿವೃದ್ಧಿಯ ಅಧಿಕಾರಿಯಾದ ನನ್ನ ಗಮನಕ್ಕೂ ತರದೇ 15ನೇ ಹಣಕಾಸು ಯೋಜನೆಯ ಕೈ ಬೋರ್ ಗಳ ಕಾಮಗಾರಿಯನ್ನು ನರಸಿಂಗಾಪುರ ಗ್ರಾಮದಲ್ಲಿ ಮಾಡಿಸುವುದರ ಮೂಲಕ ಶ್ರೀಮತಿ ಸುಶೀಲಾ ಓಬಳೇಶ್ ಅವರ ಗಂಡನಾದ ಓಬಳೇಶ್ ಗ್ರಾಪಂ ಅಧಿಕಾರದ ವ್ಯಾಪ್ತಿಯಲ್ಲಿ ಹಸ್ತಕ್ಷೇಪ ಮಾಡಿರುತ್ತಾರೆ ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ತಾಪಂ. ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ದಿನಾಂಕ:12.09.2022 ರಂದು ಪತ್ರ ಬರೆಯುವುದರ ಮೂಲಕ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡಲು ಸೂಕ್ತ ವಾತಾವರಣವಿಲ್ಲ ಎಂದು ಪತ್ರದಲ್ಲಿ ದೂರಿದ್ದಾರಲ್ಲದೇ

ಮರುದಿನ ಇನ್ನೊಂದು ಪತ್ರದಲ್ಲಿ ಸುಶೀಲಾ ಓಬಳೇಶ್ ಅವರ ಪತಿಯಾದ ಓಬಳೇಶ್ ಅವರು ಗ್ರಾಪಂ ಕಾಮಗಾರಿಗಳ ವಿಷಯದಲ್ಲಿ ಯಾವುದೇ ಹಸ್ತಕ್ಷೇಪ ಮಾಡಿರುವುದಿಲ್ಲ ನರಸಿಂಗಾಪುರ ಗ್ರಾಪಂ ಸದಸ್ಯೆ ಸರಸ್ವತಿ ಇವರು ಅಧ್ಯಕ್ಷರು ಹಾಗೂ ಅವರ ಪತಿಯ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ಪತ್ರ ಬರೆಯಿಸಿಕೊಂಡು ನನಗೆ ಸಹಿ ಮಾಡಲು ಬಲವಂತಪಡಿಸಿ ಸಹಿ ಮಾಡದಿದ್ದ ಪಕ್ಷದಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವುದಾಗಿ ಬೆದರಿಸಿ ಬ್ಲಾಕ್ಮೇಲ್ ಮಾಡುತ್ತಿದ್ದಾರೆ ಎಂದು ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ದಿನಾಂಕ:13.09.2022 ರಂದು
ಪತ್ರ ಬರೆಯುವುದರ ಮೂಲಕ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಖಾಸಗಿ ವ್ಯಕ್ತಿಗಳ ಕೈಗೊಂಬೆಯಾಗಿದ್ದಾರೆಯೇ ಎಂಬ ಸಂಶಯಕ್ಕೆ ಕಾರಣವಾಗಿದೆ.?


ನನ್ನ ಗಂಡ ಗ್ರಾಮ ಪಂಚಾಯಿತಿಯ ಯಾವುದೇ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡಿಲ್ಲ ಸದಸ್ಯರೊಬ್ಬರು ಪೆಟ್ರೋಲ್ ಬಾಟಲ್ ಹಿಡಿದುಕೊಂಡು ಬಂದು ಅಧಿಕಾರಿಗಳಿಗೆ ಎದುರಿಸಿ ಈ ರೀತಿ ಪತ್ರ ಬರೆಸಿಕೊಂಡಿದ್ದಾರೆ ಈ ಪತ್ರದಲ್ಲಿ ಯಾವುದೇ ಸತ್ಯಾಂಶವಿಲ್ಲ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು

-ಸುಶೀಲಾ ಓಬಳೇಶ್
ಗ್ರಾಪಂ ಅಧ್ಯಕ್ಷರು
ನರಸಿಂಗಾಪುರ


ನಮ್ಮ ವಾರ್ಡ್ನಲ್ಲಿ ಕೈ ಬೋರ್ ಗಳ ದುರಸ್ತಿ ಕ್ರಮಕ್ಕೆ ಗ್ರಾಮ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಮಾಡಿದ್ದೆವು ಆದರೆ ವಾರ್ಡ್ ನ ಸದಸ್ಯರ ಗಮನಕ್ಕೂ ತರದೆ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೂ ತರದೇ ಅಧ್ಯಕ್ಷರ ಪತಿ ಕಾಮಗಾರಿಯನ್ನು ಮಾಡಿರುವುದು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993.43 ಎ. (V) ರ ಉಲ್ಲಂಘನೆಯಾಗಿದೆ ಈ ಬಗ್ಗೆ ಎಲ್ಲಾ ದಾಖಲಾತಿಗಳನ್ನು ತಾಪಂ ಅಧಿಕಾರಿಗಳಿಗೆ ಹಾಗೂ ಜಿಪಂ ಅಧಿಕಾರಿಗಳಿಗೆ ನೀಡಿ ಗಮನಕ್ಕೆ ತರಲಾಗಿದೆ. ಅಧ್ಯಕ್ಷರನ್ನು ಅಧಿಕಾರದಿಂದ ಕೆಳಗಿಳಿಸಿ, ಸದಸ್ಯತ್ವವನ್ನು ರದ್ದುಗೊಳಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.

ಸರಸ್ವತಿ
ಗ್ರಾಪಂ ಸದಸ್ಯೆ
ನರಸಿಂಗಾಪುರ

LEAVE A REPLY

Please enter your comment!
Please enter your name here