75ನೇ ಸ್ವಾತಂತ್ರೋತ್ಸವ “ಹರ್ ಘರ್ ತಿರಂಗ” ಕಾರ್ಯಕ್ರಮ ಯಶ್ವಸಿಗೊಳಿಸಿ; ತಹಶೀಲ್ದಾರ್ ಕೆ.ಎಂ. ಗುರುಬಸವರಾಜ್ ಮನವಿ.

0
211

ಸಂಡೂರು:ಆಗಸ್ಟ್:12:-ಪಟ್ಟಣದಲ್ಲಿ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ “ಹರ್ ಘರ್ ತಿರಂಗ ಕಾರ್ಯಕ್ರಮವು ದಿನಾಂಕ:13.08.2022 ರಿಂದ 15.08.2022 ರವರೆಗೆ ನಡೆಯಲಿರುವ ಕಾರ್ಯಕ್ರಮಗಳಿಗೆ ತಾಲೂಕಿನ ಎಲ್ಲಾ ಸಂಘಸಂಸ್ಥೆಗಳಿಗೆ ಆಹ್ವಾನಿಸುವ ಕುರಿತಂತೆ ಮಾನ್ಯ ಸಂಡೂರು ತಹಶೀಲ್ದಾರ್ ಕೆ.ಎಂ.ಗುರುಬಸವರಾಜ್ ರವರು

ಸರ್ಕಾರದ ಆದೇಶ ಮೇರೆಗೆ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ಬಳ್ಳಾರಿ ಇವರು ದಿನಾಂಕ 08.08.2022 ರಂದು ನಡೆದ ವಿಡಿಯೋ ಸಂವಾದದಲ್ಲಿ ನೀಡಿದ ನಿರ್ದೇಶನದ ಪ್ರಕಾರ,

ಸರ್ಕಾರದ ಆದೇಶ ಮೇರೆಗೆ, ಮಾನ್ಯ ಜಿಲ್ಲಾಧಿಕಾರಿಗಳು ರಾಷ್ಟ್ರದ ಕಾರ್ಯಕ್ರಮವನ್ನು ಯಾವುದೇ ಲೋಪದೋಷವಿಲ್ಲದೇ ಮಾಡುವಂತೆ ಮತ್ತು ಪ್ರತಿ ಮನೆಯ ಮೇಲೆ ರಾಷ್ಟ್ರಧ್ವಜ ಹಾರಿಸುವ ಬಗ್ಗೆ ಕ್ರಮ ವಹಿಸುವಂತೆ ಸೂಚಿಸಿರುತ್ತಾರೆ. ಆದ್ದರಿಂದ ಸಂಡೂರು ತಾಲ್ಲೂಕಿನಲ್ಲಿ ಈ ಕೆಳಕಂಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿರುತ್ತದೆ.

13.08.2022 ರಂದು ಬೆಳಿಗ್ಗೆ 07.30ಕ್ಕೆ ರಾಷ್ಟ್ರಧ್ವಜಾರೋಹಣ ಮುಗಿಸಿಕೊಂಡು ನಂತರ ಸಂಡೂರು ತಾಲೂಕಿನ ಎಲ್ಲಾ ಸಂಘ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು, ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಂದ ಪಥಸಂಚಲನ ತಾಲ್ಲೂಕು ಕಛೇರಿಯಿಂದ ವಿಜಯ ಸರ್ಕಲ್ ಮಾರ್ಗವಾಗಿ ಧರ್ಮಪುರ ದಿಂದ SEE SEPTEMBER IN SANDUR
ಸ್ಥಳದಲ್ಲಿ ಮಹಾತ್ಮ ಗಾಂಧೀ ಪ್ರತಿಮೆಗೆ ಮಾಲಾರ್ಪಣೆ ಧ್ವಜಾರೋಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

14.08.2022 ರಂದು ಬೆಳಿಗ್ಗೆ 07.30ಕ್ಕೆ ರಾಷ್ಟ್ರಧ್ವಜಾರೋಹಣ ಮುಗಿಸಿಕೊಂಡು ನಂತರ ಸಂಡೂರು ತಾಲೂಕಿನ ಎಲ್ಲಾ ಸಂಘ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು, ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಂದ ಪಥಸಂಚಲನೆ ಪಟ್ಟಣ ಪ್ರದೇಶದಲ್ಲಿ ತಾಲ್ಲೂಕು ಕಛೇರಿಯಿಂದ ವಿಜಯ ಸರ್ಕಲ್ ಮಾರ್ಗವಾಗಿ ಹಳೇ ಬಸ್‌ ನಿಲ್ದಾಣ, ವಿರಕ್ತಮಠ, ಮೇನ್ ಬಜಾರ್, ವಾಲ್ಮೀಕಿ ಸರ್ಕಲ್‌, ಕೆ.ಇ.ಬಿ.ಸರ್ಕಲ್‌, ವಿಜಯ್‌ ಸರ್ಕಲ್ ಮುಕ್ತಾಯ.

15.08.2022 ರಂದು ಬೆಳಿಗ್ಗೆ 7.30ಕ್ಕೆ ರಾಷ್ಟ್ರ ಧ್ವಜಾರೋಹಣ ಮುಗಿಸಿಕೊಂಡು ನಂತರ ಸಂಡೂರು ತಾಲೂಕಿನ ಎಲ್ಲಾ ಸಂಘ ಸಂಸ್ಥೆಯ ಅಧ್ಯಕ್ಷರು/ಪದಾಧಿಕಾರಿಗಳು, ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಂದ ವಿವಿಧ ಇಲಾಖೆ ಮತ್ತು ಶಾಲಾಮಕ್ಕಳಿಂದ ವೇಶಭೂಷಣ ಹಾಗೂ ಸ್ತಬ್ಧಚಿತ್ರಗಳ ಮೆರವಣಿಗೆ ಕಾರ್ಯಕ್ರಮವನ್ನು ತಾಲ್ಲೂಕು ಕಛೇರಿಯಿಂದ ವಿಜಯ ಸರ್ಕಲ್ ಮಾರ್ಗವಾಗಿ ಶ್ರೀ ಛತ್ರಪತಿ ಶಿವಾಜಿ ವಿದ್ಯಾಮಂದಿರ ಶಾಲೆಗೆ ಆಗಮಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಕೋರಲಾಗಿದೆ ಎಂದು ಮಾನ್ಯ ಸಂಡೂರು ತಹಶೀಲ್ದಾರ್ ಹಾಗೂ ರಾಷ್ಟ್ರೀಯ ಹಬ್ಬಗಳ ಅಧ್ಯಕ್ಷರಾದ ಕೆ.ಎಂ.ಗುರುಬಸವರಾಜ್ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here