ಹಸಿರು ಕ್ರಾಂತಿಯ ಹರಿಕಾರ ಬಾಬುಜಗಜೀವನ ರಾಮ್- ಎನ್.ಕೆ. ವೆಂಕಟೇಶ್

0
15

ಸಂಡೂರು : ಮೇ: 6: ಸಂಡೂರು: ಈ ದೇಶದ ಹಸಿರು ಕ್ರಾಂತಿಯ ಹರಿಕಾರ, ಕಾರ್ಮಿಕರ ರಕ್ಷಕ ಎಂದೇ ಖ್ಯಾತಿಯಾದ ಬಾಬು ಜಗಜೀವನ್ ರಾಂ ಅವರ ಕೊಡುಗೆ ಅಪಾರವಾದುದು ಅವರ ಜಯಂತಿಯನ್ನು ಆಚರಿಸುವ ಮೂಲಕ ಅವರ ತತ್ವಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳೋಣ ಎಂದು ರಾಷ್ಟ್ರೀಯ ಹಬ್ಬಗಳ ಅಧ್ಯಕ್ಷರು, ತಹಶೀಲ್ದಾರ್ ಅನಿಲ್ ಕುಮಾರ್ ತಿಳಿಸಿದರು.

ಅವರು ಪಟ್ಟಣದ ತಾಲೂಕು ಪಂಚಾಯಿತಿ ಅವರಣದಲ್ಲಿ ಹಮ್ಮಿಕೊಂಡಿದ್ದ ಬಾಬು ಜಗಜೀವನ್ ರಾಂ ಅವರ ಜಯಂತಿಯನ್ನು ಉದ್ದೇಶಿಸಿ ಮಾತನಾಡಿ ಭಾರತ ಕಂಡ ಅತಿ ಶ್ರೇಷ್ಠ ಕಾರ್ಮಿಕ ಸಚಿವರಲ್ಲಿ ಅವರೂ ಒಬ್ಬರೂ ಕಾರ್ಮಿಕರಿಗೆ ಸರಿಯಾದ ಕೂಲಿ ಸಿಗದೇ ಇದ್ದ ಸಂದರ್ಭದಲ್ಲಿ, ಅವರಿಗೆ ಭದ್ರತೆ ಇಲ್ಲದ ಸಂದರ್ಭದಲ್ಲಿ ವಿಶೇಷ ಕಾಯಿದೆಯನ್ನು ಜಾರಿಗೆ ತರುವ ಮೂಲಕ ಕಾರ್ಮಿಕರ ರಕ್ಷಣೆಯನ್ನು ಮಾಡುವಂತಹ ಮಹತ್ತರ ಕಾರ್ಯವನ್ನು ಮಾಡಿದರು ಅವರ ಜಯಂತಿಯನ್ನು ಆಚರಿಸುವ ಮೂಲಕ ಅವರ ತತ್ವಗಳನ್ನು ಅಳವಡಿಸಿಕೊಳ್ಳೋಣ ಎಂದರು.

ಈ ಸಂದರ್ಭದಲ್ಲಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಎನ್.ಕೆ. ವೆಂಕಟೇಶ್ ಅವರು ಮಾತನಾಡಿ ಬಾಬು ಜಗಜೀವನರಾಮ್ ಅವರು ಈ ದೇಶದ ಅನ್ನದಾತರ ಪರವಾಗಿ ನಿರಂತರವಾಗಿ ಶ್ರಮಿಸಿದರು, ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಸಿರು ಕ್ರಾಂತಿಯನ್ನು ಮಾಡುವ ಮೂಲಕ ರೈತರ ಅದಾಯ ಹೆಚ್ಚುವಂತೆ ಮಾಡಿದ್ದಲ್ಲದೆ ದೇಶದ ಆರ್ಥಿಕತೆಯನ್ನು ಸುಧಾರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಬಡವರ ಪರವಾಗಿ ಶ್ರಮಿಸಿದ ಇವರು ದೇಶಕ್ಕಾಗಿ ತನುಮನ ದನಗಳನ್ನು ಅರ್ಪಿಸಿದವರು ಅವರ ತತ್ವಗಳು ಇಂದಿಗೂ ಪ್ರಸ್ತುತ ಎಂದರು.

ಕಾರ್ಯಕ್ರಮದಲ್ಲಿ ಪುರಸಭೆಯ ಮಾಜಿ ಅಧ್ಯಕ್ಷ, ಸದಸ್ಯ ಎಲ್.ಹೆಚ್. ಶಿವಕುಮಾರ ಶಿವಲಿಂಗಪ್ಪ, ಇತರ ಗಣ್ಯರು, ತಾಲೂಕಿನ ಇಲಾಖಾ ಅಧಿಕಾರಿಗಳು ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here