ಕರ್ನಾಟಕ ರಕ್ಷಣಾ ವೇದಿಕೆಯ ನೂತನ ಕಚೇರಿ ಉದ್ಘಾಟನೆ ಕಾರ್ಯಕ್ರಮ

0
334

ವರದಿ: ಶಿವರಾಜ್ ಕನ್ನಡಿಗ
ಕೊಟ್ಟೂರು: ಕನ್ನಡ ನುಡಿ, ಭಾಷೆ ಸಂಸ್ಕೃತಿ, ಪರಂಪರೆ ಕನ್ನಡ ಭಾಷೆಗೆ ತನ್ನದೇ ಆದ ಮಹತ್ವ ಹೊಂದಿ ಸುಮಾರು 4000 ವರ್ಷಗಳ ಇತಿಹಾಸ ಹೊಂದಿದ ಭಾಷೆ ಇದ್ದರೆ ಅದು ನಮ್ಮ ಕನ್ನಡ ಭಾಷೆ ಮಾತ್ರ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ.

ಪಟ್ಟಣದ ಶ್ರೀ ಗುರು ಕೊಟ್ಟೂರೇಶ್ವರ ದೇವಸ್ಥಾನದ, ಮೂಲಕ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆ ನಡೆಸಲಾಯಿತು ನಂತರ ನೂತನ ಕರ್ನಾಟಕ ರಕ್ಷಣಾ ವೇದಿಕೆಯ ಕಚೇರಿಯನ್ನು ಉದ್ಘಾಟಿಸಿದ ವಿಜಯನಗರ ಜಿಲ್ಲೆಯ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾದ ತಾರಿಹಳ್ಳಿ ಹನುಮಂತಪ್ಪ ಉದ್ಘಾಟನೆಯನ್ನು ನೆರವೇರಿಸಿದರು ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ಸಂಘಟನೆವು ನಮ್ಮ ನುಡಿ ಭಾಷೆ ಸಂಸ್ಕೃತಿ ಪರಂಪರೆ ಮತ್ತು ಅತಿ ಹೆಚ್ಚು ಕನ್ನಡಕ್ಕೆ ಮಹತ್ವ ನೀಡಬೇಕು ಅತಿ ಹೆಚ್ಚು ಜ್ಞಾನಪೀಠ ಪಡೆದ ಭಾಷೆವೆಂದರೆ ಅದು ಕನ್ನಡ ಭಾಷೆಗೆ ಒಟ್ಟು 9 ಜ್ಞಾನಪೀಠ ಪ್ರಶಸ್ತಿ ದೊರಕಿದೆ.

ನಮ್ಮ ಸಂಘಟನೆಯು ಸ್ಥಳೀಯ ಸಮಸ್ಯೆಗಳಿಗೆ ಮತ್ತು ಅನ್ಯಾಯ ಒಳಗಾದರೂ ಪರವಾಗಿ ನಿಂತು ನ್ಯಾಯ ದೊರಕಿಸುವುದೇ ನಮ್ಮ ಸಂಘಟನೆಯ ಮುಖ್ಯ ಉದ್ದೇಶವಾಗಿದೆ, ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಕನ್ನಡಿಗನೇ ರಾಜ ಕನ್ನಡಿಗೆನೆ ಮುಖ್ಯ ಎಂದು ಹೇಳಿದರು.

ನಂತರ ಕೊಟ್ಟೂರು ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಶ್ರೀನಿವಾಸ್ ರವರು ಮಾತನಾಡಿ ಈ ಸಂಘಟನೆಯು ಬಲಪಡಿಸಿ ವಿಜಯನಗರ ಜಿಲ್ಲೆಯ ಮಾದರಿ ತಾಲೂಕು ಸಂಘಟನೆ ಮಾಡುವುದು ನನ್ನ ಮುಖ್ಯ ಗುರಿ ಆಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲೆಯ ಕ. ರ. ವೇ. ಜಿಲ್ಲಾಧ್ಯಕ್ಷರಾದ ತಾರಿಹಳ್ಳಿ ಹನುಮಂತಪ್ಪ , ಕೂಡ್ಲಿಗಿ ತಾ. ಅಧ್ಯಕ್ಷರಾದ ಹಾಲೇಶ್ ಕೊಟ್ಟೂರು ತಾ. ಅಧ್ಯಕ್ಷರಾದ ಶ್ರೀನಿವಾಸ್, ಮರಮನಹಳ್ಳಿ ಹೋ. ಘಟಕದ ಅಧ್ಯಕ್ಷರಾದ ರಮೇಶ್, ಕೊಟ್ಟೂರು ತಾ. ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ, ಮತ್ತು ವಕೀಲರಾದ ಟಿ ಹನುಮಂತಪ್ಪ ಕರ್ನಾಟಕ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಎನ್ ಭರಮಪ್ಪ, ಹಾಗೂ ಚಿರಿಬಿ ಕೊಟ್ರೇಶ್ ಪ. ಪಂ. ಮಾಜಿ ಸದಸ್ಯರು,ವಕೀಲರಾದ ಗುರು ಬಸವರಾಜ, ಕೊಟ್ಟೂರು ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಮತ್ತು ಸದಸ್ಯರು ಸಾರ್ವಜನಿಕರು ಉಪಸ್ಥಿರಿದ್ದರು.

LEAVE A REPLY

Please enter your comment!
Please enter your name here