ನಗರಸಭೆಯ ನಿರ್ಲಕ್ಷ್ಯ,ಫಾರಂ ನಂಬರ್ -3, ನೋಂದವರಿಂದ ಮತದಾನ ಬಹಿಷ್ಕಾರ

0
60

ವಿಶೇಷ ವರದಿ: ಶ್ರೀ ಸೋಮಶೇಖರಯ್ಯ ಹಿರೇಮಠ

ಹೊಸಪೇಟೆ:’ಜನಸೇವೆಯೇ ಜನಾರ್ದನ ಸೇವೆ ಎಂಬ ತತ್ವದಡಿ ಕಾರ್ಯ ನಿರ್ವಹಿಸ ಬೇಕಾದ ಸರ್ಕಾರಿ ಕಚೇರಿಗಳು ಇತ್ತೀಚಿನ ದಿನಗಳಲ್ಲಿ ಕೆಲವು ಭ್ರಷ್ಟ ಅಧಿಕಾರಿಗಳ ದುರ್ನಡತೆ ವರ್ತನೆಯಿಂದ ನಗರಸಭೆಯಲ್ಲಿ ಜನಸಾಮಾನ್ಯರಿಗೆ ಒಳ್ಳೆಯ ಸೇವೆ ನೀಡಲು ಎಲ್ಲಾ ಸವಲತ್ತುಗಳು ಲಭ್ಯವಿದ್ದರೂ ಸಕಾಲದಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡದೆ ವಿಳಂಬ ನೀತಿ ಅನುಸರಿಸುವುದು ಫಾರಂ ನಂಬರ್-3 ಪಡೆಯಲು ಅಲೆದಾಟ,ಲಂಚಾವತಾರ ಹಲವು ವರ್ಷಗಳಿಂದ ತಪ್ಪಿಲ್ಲದಿರುವುದು ನಿಜಕ್ಕೂ ವಿಪರ್ಯಾಸ.

ಶಿವ ಜ್ಯೋತಿ ಬಡಾವಣೆ ಹೊಸಪೇಟೆ ನಗರ ಅಭಿವೃದ್ಧಿ ಪ್ರಾಧಿಕಾರವು ಸರ್ಕಾರಿ ನಿಯಮನುಸಾರ ಷರತ್ತುಗಳೊಂದಿಗೆ ಲೇ-ಔಟ್ ಮಾಲೀಕರಿಗೆ ವಸತಿ ವಿನ್ಯಾಸಕ್ಕೆ ಅನುಮೋದನೆ ನೀಡಿ. ಪ್ಲಾಟುಗಳನ್ನು ಮಾರಾಟ ಮಾಡಲು ಬಿಡುಗಡೆಯ ಪ್ರಮಾಣ ಪತ್ರ ನೀಡಿರುತ್ತಾರೆ. ಹೊಸಪೇಟೆ ನಗರಸಭೆಯಲ್ಲಿ ನಿರಂತರವಾಗಿ
ಫಾರಂ ನಂಬರ್ -3 ನೀಡುತ್ತಾ ಬಂದಿದ್ದು ಸಾರ್ವಜನಿಕರು ನಿವೇಶನ ಮತ್ತು ಪ್ಲಾಟುಗಳನ್ನು ಖರೀದಿ ಮಾಡಿ ಉಪ-ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಂಡಿರುತ್ತಾರೆ.

ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ಹೊಸಪೇಟೆ ಇವರು ಶಿವಜ್ಯೋತಿ ಬಡಾವಣೆ ಲೇ-ಔಟ್ ಮಾಲೀಕರು ಷರತ್ತುಗಳನ್ನು ಉಲ್ಲಂಘಿಸಿ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿ ಮಾಡಿರುವುದಿಲ್ಲ ಎಂದು ತಿಳಿಸಿರುತ್ತಾರೆ. ಆದ್ದರಿಂದ ಹಂಪಿ ಪ್ರಾಧಿಕಾರಕ್ಕೆ ಸುಮಾರು 150 ನಿವೇಶನದಾರರು ಅಭಿವೃದ್ಧಿ ಶುಲ್ಕ ಪಾವತಿ ಮಾಡಿ.ಪರವಾನಿಗೆ ಪಡೆದು ಮನೆಗಳನ್ನು ಕಟ್ಟಿಕೊಂಡಿರುತ್ತಾರೆ.

ಶಿವ ಜ್ಯೋತಿ ಬಡಾವಣೆ.ಶಿಕ್ಷಕರ ಬಡಾವಣೆ.ಕಿರಣ್ ಕೃಷ್ಣ ಈ ಬಡಾವಣೆಗಳ ನಿವಾಸಿಗಳು ಈಗಲೂ ಹೊಸಪೇಟೆ ನಗರ ಸಭೆಗೆ 15 ವರ್ಷಗಳಿಂದ ತೆರಿಗೆಯನ್ನು ಪಾವತಿ ಮಾಡುತ್ತಿದ್ದಾರೆ. 2020 ನೇ ಸಾಲಿನವರೆಗೆ ನಗರಸಭೆ ಫಾರಂ ನಂಬರ್ 3 ವಿತರಣೆ ಮಾಡಿರುತ್ತದೆ.ಈಗ ದ್ವಂದ್ವ ನೀತಿಗಳಿಂದ ತಡೆಹಿಡಿದಿದ್ದಾರೆ.

ಸರ್ಕಾರದ ಯಾವುದೇ ಆದೇಶವಿಲ್ಲದೆ ಮಾರ್ಚ್ 2023 ರಿಂದ ನಗರಸಭೆ ನಿವೇಶನಗಳಿಗೆ ಫಾರಂ ನಂಬರ್ 3 ನೀಡುವುದು ತಡೆ ಹಿಡಿದಿರುತ್ತಾರೆ. ಜಿಲ್ಲಾಧಿಕಾರಿಗಳನ್ನು ನಿವಾಸಿಗಳು ಹಾಗೂ ಖರೀದಿದಾರರು ವಿಚಾರಿಸಿದಾಗ ಬಡಾವಣೆಯಲ್ಲಿ ಅಭಿವೃದ್ಧಿ ಕಾಮಗಾರಿ ಆಗಿರುವುದಿಲ್ಲ ಆದ್ದರಿಂದ ತಡೆ ಹಿಡಿಯಲಾಗಿದೆ ಎಂದು ಸಭೆಯ ನಡವಳಿಕೆಯ ಮೂಲಕ
ದಿನಾಂಕ :11.03.2022 ರಂದು ಅರ್ಜಿದಾರರಿಗೆ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳು ದಿನಾಂಕ: 20.03.2023 ರಂದು ಅಧಿಕೃತ ಜ್ಞಾಪಕನ ಮೂಲಕ ಕಮಿಟಿ ರಚನೆ ಮಾಡಿ ಕಮಿಟಿಯ ಖಾತೆಗೆ ನಿವೇಶನದಾರರಿಂದ ಅಭಿವೃದ್ಧಿ ಶುಲ್ಕ ಕಟ್ಟಿಸಿಕೊಂಡು ಆರು ತಿಂಗಳ ಒಳಗಾಗಿ ಲೇ-ಔಟ್ ಅಭಿವೃದ್ಧಿ ಕೈಗೊಂಡು ಪಾಲನಾ ವರದಿ ಸಲ್ಲಿಸಲು ಆದೇಶ ಮಾಡಿದ್ದು ಆದರೆ ಕಮಿಟಿಯು ಜಿಲ್ಲಾಧಿಕಾರಿ ಆದೇಶವನ್ನು ಉಲ್ಲಂಘಿಸಿ ಪಾಲನೆ ಮಾಡದೆ ದಿಕ್ಕರಿಸಿದ್ದಾರೆ.

ನಗರಸಭೆ ವ್ಯಾಪ್ತಿಯಲ್ಲಿ ಅಂತಿಮ ಅನುಮೋದನೆ ಆಗದೆ ಇರುವ ಬಡಾವಣೆಗಳು ಮಾನ್ಯ ಜಿಲ್ಲಾಧಿಕಾರಿಗಳಿಂದ ಹಸ್ತಾಂತರ ಅನುಮತಿ ಪಡೆದು. ನಿವೇಶನದ ಮಾಲೀಕರಿಂದ ಕಾಮಗಾರಿ ಅಭಿವೃದ್ಧಿ ಶುಲ್ಕ ಕಟ್ಟಿಸಿಕೊಂಡು ಹಾಗೂ ನಗರ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರಸಭೆ ಜಂಟಿಯಾಗಿ ಅಭಿವೃದ್ಧಿ ಪಡಿಸಲು ಸಾರ್ವಜನಿಕ ಹಿತ ದೃಷ್ಟಿಯಿಂದ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನ ಮಾಡಿ.
ದಿನಾಂಕ: 24.07.2023ರಂದು ಹೊಸಪೇಟೆ ನಗರ ಸಭೆ ಸಾಮಾನ್ಯ ಸಭೆಯಲ್ಲಿ ಠರಾವು ಹೊರಡಿಸಿರುತ್ತಾರೆ. ಜಿಲ್ಲಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ ಮಾಡುತ್ತಿದ್ದಾರೆ ಎಂದು ನಿವಾಸಿಗಳ ಗೋಳಾಟ.

ಮಾನವನ ಮೂಲಭೂತ ಸೌಕರ್ಯ ಹಕ್ಕುಗಳು ಪಡೆಯಲು.ಆಸ್ತಿ ಮಾರಾಟ ಮಕ್ಕಳ ವಿದ್ಯಾಭ್ಯಾಸ ಮತ್ತು ಮಕ್ಕಳ ಮದುವೆಗಳಿಗೆ ಸಾಲ ಸೌಲಭ್ಯ ಪಡೆಯಲು ಆಗುವುದಿಲ್ಲ ಸಾರ್ವಜನಿಕರು ಸೌಲಭ್ಯಗಳಿಂದ ವಂಚಿತರಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಕ್ರಮ ಕೈಗೊಂಡು. ಫಾರಂ ನಂಬರ್-3 ನೀಡದಿದ್ದರೆ. ಈ ಎಲ್ಲಾ ಬಡಾವಣೆಯ ನಿವಾಸಿಗಳು ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುತ್ತೇವೆಂದು ನೊಂದವರ ನೋವಿನ ಮಾತು.

■ಫಾರಂ ನಂಬರ್ -3 ವಿತರಿಸಲು. ಒಂದು ವರ್ಷದಲ್ಲಿ 11 ಮನವಿ ಪತ್ರಗಳನ್ನು ಸಲ್ಲಿಸಿದರು ಸ್ಪಂದಿಸದೆ ಸಾರ್ವಜನಿಕ ಹಿತದೃಷ್ಟಿಯಿಂದ ಕ್ರಮ ಕೈಗೊಳ್ಳದೆ ಇರುವುದು ಜಿಲ್ಲಾಡಳಿತ ವೈಫಲ್ಯ.
——ಯು.ಆಂಜನೇಯಲು
ಅಧ್ಯಕ್ಷರು
ಶಿವಜ್ಯೋತಿ ಬಡಾವಣೆ ಕ್ಷೇಮಾಭಿವೃದ್ಧಿ ಸಂಘ.

LEAVE A REPLY

Please enter your comment!
Please enter your name here