ಐತಿಹಾಸಿಕ ಕುಮಾರಸ್ವಾಮಿ ದೇವಸ್ಥಾನದ ಬಳಿಯ ನಂದಿ ಮೈನ್ಸ್ ಗೆ ವೈಜ್ಞಾನಿಕವಾಗಿ ಗಣಿಗಾರಿಕೆ ನಡೆಸಲು 20 ಸಂಘ ಸಂಸ್ಥೆಗಳಿಂದ ಮನವಿ

0
183

ಸಂಡೂರು:ಆಗಸ್ಟ್:18: ಸಂಡೂರು ತಾಲೂಕಿನ ಸ್ವಾಮಿಮಲೈ ಅರಣ್ಯದಲ್ಲಿನ ಐತಿಹಾಸಿಕ
ಶ್ರೀ ಕುಮಾರಸ್ವಾಮಿ ದೇವಸ್ಥಾನದ ಸಮೀಪದ ನಂದಿ ಗಣಿಗಾರಿಕೆ ಪ್ರದೇಶದಲ್ಲಿ ಗಣಿ ಕಂಪನಿಯ ವಾರ್ಷಿಕ ಉತ್ಪಾದನೆ ಸಾಮರ್ಥ್ಯವನ್ನು 0.4 ಲಕ್ಷ ಮಿಲಿಯನ್ ಟನ್ ನಿಂದ 0.8 ಲಕ್ಷ ಮಿಲಿಯನ್ ಟನ್ ಗೆ ಹೆಚ್ಚಿಸಲು ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ನೇತೃತ್ವದಲ್ಲಿ ಪರಿಸರ ಸಾರ್ವಜನಿಕ ಅಹವಾಲು ಸಭೆಯನ್ನು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಯೋಜನಾ ಪ್ರದೇಶ ನಂದಿ ಐರನ್ ಒರ್ ಮೈನ್ಸ್, ಗಣಿ ಗುತ್ತಿಗೆ ಸಂಖ್ಯೆ: 0005 ಮಲ್ಲಗೋಲ್ಲ ಗ್ರಾಮ. 17.08.2021 ರಂದು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು

ಅಹವಾಲು ಸಭೆಯಲ್ಲಿ ತಾಲೂಕಿನ 20 ಸಂಘಸಂಸ್ಥೆಗಳು ಮಾನ್ಯ ಜಿಲ್ಲಾಧಿಕಾರಿಯವರಿಗೆ ಮನವಿಪತ್ರಗಳನ್ನು ನೀಡಿ ಮಾತನಾಡುತ್ತಾ..ಸಂಡೂರು ತಾಲೂಕಿನ ವ್ಯಾಪ್ತಿಯಲ್ಲಿ ಬರುವ ನಂದಿ ಮೈನ್ಸ್ ಗಣಿಗಾರಿಕೆಯ ಪ್ರಸ್ತುತ ಉತ್ಪಾದನಾ ಮಿತಿಯನ್ನು ವಾರ್ಷಿಕ 0.4 ಮಿಲಿಯನ್ ಟನ್ ನಿಂದ 0.8 ಮಿಲಿಯನ್ ಟನ್ ಗೆ ಹೆಚ್ಚಿಸಲು ಇಚ್ಛಿಸಿದ್ದು, ಇದಕ್ಕೆ ನಮ್ಮ ಸಂಪೂರ್ಣ ಸಹಮತಿ ಇರುತ್ತದೆ ಮತ್ತು ಯಾವುದೇ ಆಕ್ಷೇಪಣೆ ಇರುವುದಿಲ್ಲ.

ಗಣಿಗಾರಿಕೆಯು ಸಾವಿರಾರು ಕುಟುಂಬದ ಜೀವಗಳ ಜೀವನೋಪಾಯಕ್ಕೆ ಅಸರೆಯಾಗಿದೆ,ರೈತರ,ಕಾರ್ಮಿಕರ ಬದುಕಿಗೆ ಬೆಳಕಾಗಿದ್ದು, ಗಣಿಗಾರಿಕೆ ಇಲ್ಲದ ಸಂಧರ್ಭದ ದಿನಗಳಲ್ಲಿ ದೂರದ ಮಂಡ್ಯ, ಮೈಸೂರು ಜಿಲ್ಲೆಗಳ ಕಡೆಗೆ ಕಬ್ಬುಕಡಿಯಲು ಯುವಕರು ಬೆಂಗಳೂರು ಇನ್ನಿತರ ಕಡೆಗೆ ಬೆಲ್ದಾರ್/ಗೋಡೆಕಟ್ಟುವ ಕೆಲಸಗಳಿಗೆ ಮತ್ತು ಕೆಲ ಕುಟುಂಬಗಳು ಮಲೆನಾಡಿನ ಕಾಪಿಸೀಮೆಗಳಿಗೆ ಕಾಪಿ ಎಸ್ಟೇಟ್ ತೋಟಗಳಿಗೆ ಚಿಕ್ಕ ಚಿಕ್ಕ ಮಕ್ಕಳನ್ನು ಕಟ್ಟಿಕೊಂಡು ಕೂಲಿ ಅರಸಿ ಕೆಲಸಕ್ಕೆ ಹೋಗುತ್ತಿದ್ದರು,ಗಣಿಗಾರಿಕೆ ಆರಂಭವಾದಗಿನಿಂದ ಇಂತಹ ಹಲವಾರು ಕುಟುಂಬಗಳ ಬದುಕಿಗೆ ಅಸರೆಯಾಗಿವೇ

ಐತಿಹಾಸಿಕ ಕುಮಾರಸ್ವಾಮಿ ದೇಗುಲಕ್ಕೆ ದಕ್ಕೆಯಾಗುವಂತೆ ಗಣಿಗಾರಿಕೆ ಮಾಡಿಕೊಳ್ಳಿ ಎಂದು ನಾವುಗಳು ಬಯಸುವುದಿಲ್ಲ, ಆದರೆ ವೈಜ್ಞಾನಿಕವಾಗಿ ಗಣಿಗಾರಿಕೆ ನಡೆಸಿ ನಿರಾಶ್ರಿತರ ಬದುಕಿಗೆ ಅಸರೆಯಾಗಲಿ ಎಂಬುದೇ ನಮ್ಮಗಳ ಉದ್ದೇಶ ಎಂದು 20 ಸಂಘಸಂಸ್ಥೆಗಳ ಪದಾಧಿಕಾರಿಗಳ ಮನವಿಯಾಗಿತ್ತು

ಅಲ್ಲದೇ ನಂದಿಹಳ್ಳಿ- ಸುಬ್ಬರಾಯನಹಳ್ಳಿ- ಕುಮಾರಸ್ವಾಮಿ ಕ್ಯಾಂಪ್-ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಗ್ರಾಮಗಳ ಜನರಿಗೆ ಮೂಲಭೂತ ಸೌಕರ್ಯ ಸೌಲಭ್ಯಗಳನ್ನು ಒದಗಿಸುಬೇಕೆಂದು ಸಂಘಟನೆಗಳ ಒಕ್ಕೊರಲಿನ ಅಭಿಪ್ರಾಯವಾಗಿದೆ

ಗಣಿಗಾರಿಕೆಯು ಸ್ಥಳೀಯ ಜನರ ಜೀವನೋಪಾಯಕ್ಕಾಗಿ ಅಗತ್ಯವಾಗಿದ್ದು, ಸಾವಿರಾರು ಸ್ಥಳೀಯ ಕುಶಲ ಮತ್ತು ಅಕುಶಲ ಕಾರ್ಮಿಕರು,ಅದಿರು ಸಾಗಣೆ ಲಾರಿಗಳು, ಇತರ ವ್ಯಾಪಾರದ ಸ್ಥಳೀಯ ಮಾರುಕಟ್ಟೆಗಳು ಗಣಿಗಾರಿಕೆಯನ್ನು ಅವಲಂಬಿಸಿರುತ್ತೇವೆ, ಶಾಸನಬದ್ದ ಗಣಿಗಾರಿಕೆಯು ರಾಜ್ಯದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿಗಳನ್ನು ತೆರಿಗೆ ಆದಾಯದ ಮೂಲವಾಗಿದೆ. ಜೊತೆಗೆ ಗಣಿಬಾಧಿತ ಪ್ರದೇಶದ ಅಭಿವೃದ್ಧಿಗೆ ಮೀಸಲಿಟ್ಟ DMF ಮತ್ತು KMERC ನಿಧಿಗೆ ನೂರಾರು ಕೋಟಿ ತೆರಿಗೆ ಪಾವತಿಸುತ್ತಿದೆ. ಸಂಡೂರಿನ ಆರಾಧ್ಯ ದೈವ ಶ್ರೀ ಕುಮಾರಸ್ವಾಮಿ ದೇವಸ್ಥಾನಕ್ಕೆ ದಕ್ಕೆ ಉಂಟಾಗದ ರೀತಿಯಲ್ಲಿ ವೈಜ್ಞಾನಿಕವಾಗಿ ಗಣಿಗಾರಿಕೆ ಮಾಡಬೇಕಾಗುತ್ತದೆ.

ಜೆ ಎಸ್ ಡಬ್ಲ್ಯೂ ಸಂಸ್ಥೆಯು ಸರಕಾರಕ್ಕೆ ನೂರಾರು ಕೋಟಿ ತೆರಿಗೆ ಪಾವತಿಸಿ ಶಾಸನಬದ್ದ ಗಣಿಗಾರಿಕೆ ನಡೆಸುವ ವಿಶೇಷ ನೈಪುಣ್ಯತೆ ಹೊಂದಿದ್ದು ಸರ್ಕಾರದ ಎಲ್ಲಾ ನಿಯಾಮವಳಿ ಅನುಸಾರವಾಗಿ ಹೆಚ್ಚಿನ ಪ್ರಮಾಣದಲ್ಲಿ ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಕೈಗೊಂಡು ಸುತ್ತಮುತ್ತಲಿನ ಪರಿಸರ, ಜನರು, ಜಾನುವಾರು, ರೈತರಿಗೆ ತೊಂದರೆಯಾಗದಂತೆ ಗಣಿಗಾರಿಕೆ ನಡೆಸಬೇಕೆಂದು ಬಯಸುತ್ತೇವೆ

ಹಾಗೆಯೇ ಗಣಿಗಾರಿಕೆಯಲ್ಲಿ ಉತ್ಪಾದನೆ ಹೆಚ್ಚಳ ಅದನಂತರ ನಮ್ಮ ಬೇಡಿಕೆಗಳನ್ನು ಜೆ ಎಸ್ ಡಬ್ಲ್ಯೂ ಸಂಸ್ಥೆಯ ವತಿಯಿಂದ ಈಡೇರಿಸಬೇಕೆಂದು ವಿನಂತಿಸಿಕೊಂಡರು..

ಬೇಡಿಕೆಗಳು ಈಗಿವೆ:-
*ಸ್ಥಳೀಯ ಯುವಕ/ಯುವತಿಯರಿಗೆ ಉದ್ಯೋಗ ಕಲ್ಪಿಸಿಕೊಡುವುದು
*ಗ್ರಾಮಗಳಲ್ಲಿ ಶಾಲೆ/ಶೋಚಲಯ/ಸಮುದಾಯ ಭವನ ನಿರ್ಮಾಣ
*ಸ್ಥಳೀಯ ಕೃಷಿಕರಿಗೆ ಸಾವಯುವ ಕೃಷಿ ತರಬೇತಿಯನ್ನು ನೀಡುವುದು
*ಕೃಷಿ ಹೊಂಡ/ಇಂಗು ಗುಂಡಿಗಳ ನಿರ್ಮಾಣ ಮಾಡುವುದು
*ಸ್ವ ಉದ್ಯೋಗ ಹೊಂದಲು ಹೊಲಿಗೆ ಯಂತ್ರ, ಕಂಪ್ಯೂಟರ್,ಆಟೋಮೊಬೈಲ್ ತರಬೇತಿ
*ಸಮುದಾಯ ಆರೋಗ್ಯ ಕೇಂದ್ರ/ಸಂಚಾರಿ ಆರೋಗ್ಯ ಕೇಂದ್ರ ಸ್ಥಾಪನೆ.
*ಈ ಹಿಂದೆ ನಂದಿ ಮೈನ್ಸ್ (ಹೆಚ್.ಟಿ)ನಲ್ಲಿ ಕೆಲಸ ಕಳೆದುಕೊಂಡ ನಿರುದ್ಯೋಗಿಗಳಿಗೆ ಮರುನೇಮಕ ಮಾಡೋಕೊಳ್ಳಬೇಕೆಂದು

ಈ ಸಂಧರ್ಭದಲ್ಲಿ ಪ್ರಾದೇಶಿಕ ಪರಿಸರ ಅಧಿಕಾರಿ ಉದಯಶಂಕರ್, ಉಪ ಪ್ರಾದೇಶಿಕ ಅಧಿಕಾರಿ ರಾಜು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಡಿಡಿ ಮಹಾವೀರ ತಹಶೀಲ್ದಾರ್ ಹೆಚ್.ಜೆ.ರಶ್ಮಿ , ಲಕ್ಷ್ಮೀಪುರದ ಪುರಸಭೆಯ 21ನೇ ವಾರ್ಡ್ ನ ಸದಸ್ಯೆ ತಿಪ್ಪಮ್ಮ ,ಸ್ಥಳೀಯ ಸಂಘ ಸಂಸ್ಥೆಗಳಾದ ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ರಿಪಬ್ಲಿಕನ್ ಸೇನಾ, ಬಳ್ಳಾರಿ ಜಿಲ್ಲಾ ಗಣಿ ಕಾರ್ಮಿಕ ಸಂಘ, ಡಾ!!ಬಿ.ಆರ್.ಅಂಬೇಡ್ಕರ್ ಸಂಘ, ಕನ್ನಡ ಕರ್ನಾಟಕ ರಕ್ಷಣಾ ವೇದಿಕೆ, ಜೈ ಹಿಂದ್ ಲಾರಿ ಮಾಲೀಕರ ಸಂಘ, ಕೃಷ್ಣಾನಗರ.ಸೇರಿದಂತೆ 20 ಸಂಘ ಸಂಸ್ಥೆಗಳು ವೈಜ್ಞಾನಿಕವಾಗಿ ಗಣಿಗಾರಿಕೆ ನಡೆಸಿ ಸ್ಥಳೀಯ ಜನರ ಜೀವನಕ್ಕೆ ಗಣಿಗಾರಿಕೆ ಬೇಕು ಎಂದು ಮನವಿಪತ್ರಗಳನ್ನು ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿದರು

LEAVE A REPLY

Please enter your comment!
Please enter your name here