ಕೊಟ್ಟೂರು: ಪೊಲೀಸ್‌ ಠಾಣೆಯಲ್ಲಿ ಸಂಭ್ರಮದ ಆಯುಧ ಪೂಜೆ

0
103

ಕೊಟ್ಟೂರು: ರಾಜ್ಯದ ವಿವಿದಡೆ ದಸರಾ ಸಂಭ್ರಮ ಕೆಳಗಟ್ಟಿದ್ದು, ನಿನ್ನೆ ರಾಜ್ಯದ ತುಂಬೆಲ್ಲ ಆಯುಧ ಪೂಜೆಯ ಸಡಗರ ಮೇಳೈಸಿದೆ. ಅದೇ ರೀತಿಯಲ್ಲಿ ಕೊಟ್ಟೂರಿನ ಠಾಣೆಯಲ್ಲಿ ದಸರಾ ಹಬ್ಬಕೆಂದೆ ಠಾಣೆಯನ್ನು ವಿವಿಧ ಅಲಂಕಾರದೊಂದಿಗೆ ಠಾಣೆಯನ್ನು ಕಂಗೊಳಿಸುವಂತೆ ಅಂಲಕರಿಸಿ, ಸಿ.ಪಿ.ಐ ಹಾಗೂ ಪಿಎಸ್.ಐ ರವರ ನೇತೃತ್ವದಲ್ಲಿ ದಸರಾ ಹಬ್ಬದ ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಪೊಲೀಸರಿಗೆ ಪ್ರತಿದಿನ ಖಾಕಿ ಬಟ್ಟೆಗಳೇ ಅವರಿಗೆ ಸಂಗಾತಿ. ಅವರ ವೃತ್ತಿ ಜೀವನದಲ್ಲಿ ಬಹುತೇಕ ಬಣ್ಣ ಬಣ್ಣದ ಬಟ್ಟೆ ಧರಿಸುವುದು ಆಗೊಮ್ಮೆ, ಹೀಗೊಮ್ಮೆ ಬಿಟ್ಟರೆ ಬೇರೆ ದಿನಗಳಲ್ಲಿ ಕನಸಿನ ಮಾತೇ ಸರಿ. ಕಷ್ಟ ಸುಖವು ಬಂದಿದ್ದೆಲ್ಲ ಬರಲಿ ಎಂದು ಚಳಿ , ಮಳಿ , ಗಾಳಿಗೆ ಮೈಯೋಡುತ್ತಾ, ದಿನನಿತ್ಯ ‘ಡ್ಯೂಟಿ’ ಎಂಬ ಜಂಜಾಟದಲ್ಲಿ ಒದ್ದಾಡುತ್ತಿರುತ್ತಾರೆ. ಅಂತಹ ಪೊಲೀಸರಿಗೆ ರಿಲ್ಯಾಕ್ಸ್ ಸಿಕ್ಕಿದರೆ ಹೇಗಿರುತ್ತದೆ ಎನ್ನುವುದಕ್ಕೆ ನಮ್ಮ ಕೊಟ್ಟೂರು ಪೊಲೀಸ್ ಠಾಣೆ ಸಾಕ್ಷಿಯಾಯಿತು.

ನಾಡಿನೆಲ್ಲಡೆ ಇಂದು ಸಂಭ್ರಮದ ಆಯುಧ ಪೂಜೆ ನಡೆಯುತ್ತದೆ. ಕೊಟ್ಟೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಿಧ ರೀತಿಯ ಆಯುಧ ಪೂಜೆ ನಡೆಯಿತು. ದಿನಂಪ್ರತಿ ಖಾಕಿ ಬಟ್ಟೆಯಲ್ಲಿ ಪೊಲೀಸರು ಜಬರ್ದಸ್ತ್ ಆಗಿ ಕಾಣುತ್ತಿದ್ದ ಇವರು, ಸಾಂಪ್ರದಾಯಿಕ ಶೈಲಿಯ ಬಿಳಿ ಅಂಗಿ ಪಂಚೆಯನ್ನು ತೊಟ್ಟು ಕಂಗೊಳಿಸುತ್ತಿದ್ದರು.

ಠಾಣೆಯಲ್ಲಿ ಆಯುಧಗಳಿಗೆ ಪೂಜೆ ಸಲ್ಲಿಸಿದರು. ವಾಹನಗಳು, ರಿವಾಲ್ವಾರ್​, ಬಂದೂಕುಗಳನ್ನು ಅಲಂಕಾರಗೊಳಿಸಿ ಪೂಜಾ ಮಂತ್ರ ಪಠನೆಯ ಮೂಲಕ ನೆರವೇರಿಸಿದರು. ಪೂಜೆಯ ಬಳಿಕ ಸಿಬ್ಬಂದಿ ಸಿಹಿ ಹಂಚಿ ಶುಭಾಶಯ ವಿನಿಮಯ ಮಾಡಿಕೊಂಡರು.

ಈ ಸಂದರ್ಭದಲ್ಲಿ ಪೊಲೀಸ್ ಠಾಣೆಯ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದು, ಪೂಜಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

LEAVE A REPLY

Please enter your comment!
Please enter your name here