ಲೋಕಾಯುಕ್ತರಿಂದ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ ಸೆ.21ರಿಂದ

0
251

ಬಳ್ಳಾರಿ,ಸೆ.19: ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರಾದ ಕೆ.ರಾಮರಾವ್ ಮತ್ತು ಪೊಲೀಸ್ ನಿರೀಕ್ಷಕ ಮಹ್ಮದ್ ರಫಿ ಅವರು ಬಳ್ಳಾರಿ ಜಿಲ್ಲೆಯ ವಿವಿಧೆಡೆ ಸಾರ್ವಜನಿಕರಿಂದ ಕುಂದುಕೊರತೆಗಳ ಅಹವಾಲುಗಳ ಸ್ವೀಕಾರ ಸೆ.21ರಿಂದ 29ರವರೆಗೆ ನಡೆಯಲಿದೆ ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಲೋಕಾಯುಕ್ತರ ಪೊಲೀಸ್ ಉಪಾಧೀಕ್ಷಕರು ಮತ್ತು ಪೊಲೀಸ್ ನಿರೀಕ್ಷಕರು ಕುರುಗೋಡು, ಕಂಪ್ಲಿ, ಬಳ್ಳಾರಿ,ಸಂಡೂರು ಮತ್ತು ಸಿರಗುಪ್ಪ ತಾಲೂಕು ಕೇಂದ್ರಗಳಲ್ಲಿ ನಿಗದಿಪಡಿಸಿದ ಸ್ಥಳಗಳಲ್ಲಿ ಸಾರ್ವಜನಿಕರಿಂದ ಕುಂದುಕೊರತೆಗಳ ಅಹವಾಲುಗಳ ಅರ್ಜಿಗಳ ಸ್ವೀಕರಿಸಿ,ವಿಚಾರಿಸಲಾಗುತ್ತದೆ.
ಸಾರ್ವಜನಿಕರಿಗೆ ತಮ್ಮ ಅರ್ಜಿಗಳ ವಿಚಾರಣೆ ಸಲುವಾಗಿ ಕರ್ನಾಟಕ ಲೋಕಾಯುಕ್ತದ ಗೌರವಾನ್ವಿತ ಲೋಕಾಯುಕ್ತರಿಗೆ ಅರ್ಜಿಗಳನ್ನು ಸಲ್ಲಿಸಲು ಫಾರಂ ನಂ:01 ಮತ್ತು ಫಾರಂ:02 ಅನ್ನು ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಸೆ.21ರಂದು ಬೆಳಗ್ಗೆ 10:30ರಿಂದ ಮಧ್ಯಾಹ್ನ 1ರವರೆಗೆ ಕುರುಗೋಡು ತಹಸೀಲ್ದಾರ್ ಕಚೇರಿ ಸಭಾಂಗಣ ಮತ್ತು ಅದೇ ದಿನ ಮಧ್ಯಾಹ್ನ 2:30ರಿಂದ ಸಂಜೆ 5ರವರೆಗೆ ಕಂಪ್ಲಿಯ ಸರಕಾರಿ ಅತಿಥಿಗೃಹ, ಸೆ.23ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 1ರವರೆಗೆ ಬಳ್ಳಾರಿಯಲ್ಲಿ ಬಳ್ಳಾರಿಯ ಸರಕಾರಿ ಅತಿಥಿಗೃಹ. ಸೆ.27ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 1ರವರೆಗೆ ಸಂಡೂರು ತಾಲೂಕಿನಲ್ಲಿ ಸಂಡೂರು ಸರಕಾರಿ ಅತಿಥಿಗೃಹ. ಸೆ.29ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 1ರವರೆಗೆ ಸಿರಗುಪ್ಪದ ಸರಕಾರಿ ಅತಿಥಿಗೃಹ.ಆದ್ದರಿಂದ ಕುಂದುಕೊರತೆಗಳಿರುವ ಸಾರ್ವಜನಿಕರು ನಿಗದಿಪಡಿಸಿದ ದಿನಾಂಕ ಮತ್ತು ಸ್ಥಳಗಳಲ್ಲಿ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

LEAVE A REPLY

Please enter your comment!
Please enter your name here