ಕೊಟ್ಟೂರು: ಇದ್ದೂ ಇಲ್ಲದಂತ್ತಾಗಿರುವ ಬಸ್ ತಂಗುದಾಣ ಸಾರ್ವಜನಿಕರ ಅಸಮಾಧಾನ.!

0
435

ಕೊಟ್ಟೂರು:ಸೆ:10:- ಪಟ್ಟಣದ ಉಜ್ಜಿನಿ ರಸ್ತೆ ಮಾರ್ಗದಲ್ಲಿರುವ ವಿದ್ಯಾನಗರ ಬಳಿ ಪ್ರಯಾಣಿಕರಿಗೋಸ್ಕರ ಸಾರಿಗೆ ಇಲಾಖೆಯಿಂದ ನಿರ್ಮಿಸಿದ ಬಸ್ ತಂಗುದಾಣದಲ್ಲಿ ಪ್ರಯಾಣಿಕರಿಗೆ ಕೂತುಕೊಳ್ಳಲು ಹಾಕಿದ ಕುರ್ಜಿಗಳೇ ಇಲ್ಲ ಕಿಡಿಗೇಡಿಗಳು ಮುರಿದು ಹಾಕಿದ್ದಾರೆ ತಂಗುದಾಣದಲ್ಲಿ ಸ್ವಚ್ಛತೆ ಮಾಯವಾಗಿ ಧೂಳು ಕೂತಿರುವುದರಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಸಪೇಟೆ ವಿಭಾಗ ವಸತಿಯಿಂದ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಯೋಜನೆಯಡಿಯಲ್ಲಿ ನಿರ್ಮಿಸಿದ್ದು ಈ ಬಸ್ ತಂಗುದಾಣದಲ್ಲಿ, ರಾತ್ರಿ ಆದರೆ ಸಾಕು ಪೋಲಿ ಪುಂಡರು, ಕುಡುಕರ ತಾಣವಾಗಿ ಮಾರ್ಪಟ್ಟಿದೆ.

ಈ ಬಸ್ ನಿಲ್ದಾಣವು ಸುಮಾರು ಆರು ವರ್ಷದ ಹಿಂದೆ ಈ ಬಸ್ ನಿಲ್ದಾಣ ನಿರ್ಮಾಣವಾಗಿತ್ತು ಈಗ ದುರಸ್ತಿ ಬಂದಿದೆ ಈ ನಿಲ್ದಾಣಕ್ಕೆ ಕನಿಷ್ಠ ಸೌಕರ್ಯಗಳನ್ನು ನೀಡಬೇಕಾದ ಸಾರಿಗೆ ಸಂಸ್ಥೆ ಮತ್ತು ಇದಕ್ಕೆ ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳು ಯಾರೊಬ್ಬರೂ ಗಮನ ಹರಿಸುತ್ತಿಲ್ಲ ಇದರಿಂದ ಸ್ಥಳೀಯ , ಪ್ರಯಾಣಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತುಂಬಾ ಸಮಸ್ಯೆಯಾಗಿದೆ. ಕೊಟ್ಟೂರು ಪಟ್ಟಣಕ್ಕೆ ಪ್ರತಿನಿತ್ಯ ಜೋಳದ ಕೂಡ್ಲಿಗಿ,ನಾಗರಕಟ್ಟೆ ,ಹನುಮನಹಳ್ಳಿ ,ಉಜ್ಜಿನಿ, ಜಗಳೂರು , ಚಿತ್ರದುರ್ಗ, ಈ ಮಾರ್ಗದ ಊರುಗಳು ಜನರಿಗೆ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳ ಈ ಬಸ್ಸು ತಂಗುದಾಣ ಆಸರೆಯಾಗಿದೆ ಎಲ್ಲಾ ಬಸ್ಸುಗಳು ಇಲ್ಲೇ ನಿಲ್ಲುತ್ತವೆ ಆದರೆ ಕೂತುಕೊಳ್ಳಲು ಆಸನಗಳಿಲ್ಲದೆ ರಸ್ತೆ ಅಕ್ಕ ಪಕ್ಕದಲ್ಲಿರುವ ಮರಗಳ ನೆರಳು ನಿಂತು ತಮ್ಮ ಊರುಗಳಿಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ .

ಸ್ಥಳೀಯ ನಿವಾಸಿಗಳು ಮತ್ತು ಪ್ರಯಾಣಿಕರ ಒತ್ತಾಯದ ಮೇರೆಗೆ ಸಾರಿಗೆ ಇಲಾಖೆ ಸುಸಜ್ಜಿತವಾದ ಬಸ್ , ತಂಗುದಾಣ ನಿರ್ಮಾಣ ಆದರೆ ಹಲವು ವರ್ಷಗಳ ಹಿಂದೆ ಕಿಡಿಗೇಡಿಗಳು ಕುರ್ಚಿಗಳನ್ನು ಮತ್ತು ವಿದ್ಯುತ್ ದೀಪ ಒಡೆದು ಹಾಕಿದ್ದಾರೆ ಕೂಡಲೇ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹೊಸ ಆಸನಗಳು ವಿದ್ಯು ತ್ ದ್ವೀಪ ವ್ಯವಸ್ಥೆ ಕಲ್ಪಿಸಬೇಕೆಂದು ಪ್ರಯಾಣಿಕರು ಮತ್ತು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸರ್ಕಾರವು ನಮ್ಮ ತೆರಿಗೆ ದುಡ್ಡನ್ನು ಸುಮ್ಮನೆ ವ್ಯರ್ಥ ಮಾಡುತ್ತಿದೆ ಸರಿಯಾಗಿ ಒಂದು ಬಸ್ಸು ನಿಲ್ದಾಣ ವ್ಯವಸ್ಥೆ ಮಾಡದೆ ಕಾಟಾಚಾರಕ್ಕೆ ನಿರ್ಮಾಣವಾಗಿದೆ ಈ ಬಸ್ ನಿಲ್ದಾಣವನ್ನು ದುರಸ್ತಿ ಮಾಡಿ ಒಂದು ಬಸ್ ನಿಲ್ದಾಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

  • ಸಿರಿಬಿ. ಪ್ರಕಾಶ್ (ಕೊಟ್ಟೂರು)

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here