ಅಂಚೆ ಕಚೇರಿಯಿಂದ ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ ಬಗ್ಗೆ ಮಾಹಿತಿ

0
194

ಕೊಟ್ಟೂರು ಅಂಚೆ ಕಚೇರಿಯ ಮುಂಭಾಗದಲ್ಲಿ ಭಾನುವಾರದಂದು ಕಚೇರಿಯ ಸಿಬ್ಬಂದಿಗಳು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರದ ಯೋಜನೆಯ ಬಗ್ಗೆ ಮಾಡಲಾಯಿತು.

ಅಂಚೆ ಇಲಾಖೆಯ ಮಹಿಳಾ ಸಮ್ಮಾನ್ ಉಳಿತಾಯ ಯೋಜನೆಯಲ್ಲಿ ಹಣ ಹೂಡಿಕೆ ಮಾಡಲು ಒಂದು ಸುವರ್ಣ ಅವಕಾಶ ಎಂದು ಅಂಚೆ ಕಚೇರಿಯ ಅಧಿಕಾರಿಯ ತಿಳಿಯಪಡಿಸಿದ್ದರು.

ಯೋಜನೆಯ ಪ್ರಮುಖ ವೈಶಿಷ್ಟಗಳು:
◆ಕನಿಷ್ಠ ಠೇವಣಿ ರೂ1000/-ಗರಿಷ್ಠ ರೂ 2.00.000/-ಅವಧಿ ಎರಡು ವರ್ಷಗಳು
◆ಬಡ್ಡಿದರ ವಾರ್ಷಿಕ 7.5% ಪರ್ಸೆಂಟ್ ಬಡ್ಡಿಯನ್ನು ತ್ರೈಮಾಸಿಕ ಆಧಾರದ ಮೇಲೆ ನೀಡಲಾಗುತ್ತದೆ.
◆ದಿನಾಂಕ 1 .4.2023ರಿಂದ 31.03.2025ವರಗೆ ಈ ಖಾತೆಯನ್ನು ತೆರೆಯಬಹುದು.
◆ಅಸ್ತಿತ್ವದಲ್ಲಿ ಖಾತೆ ಹಾಗೂ ಇನ್ನೊಂದು ಖಾತೆಯನ್ನು ತೆರೆಯುವ ನಡುವೆ ಮೂರು ತಿಂಗಳ ಸಮಯದ ಅಂತರ ಇರಬೇಕು.
◆ಈ ಠೇವಣಿಯ ತೆರೆದ ದಿನಾಂಕದಿಂದ ಎರಡು ವರ್ಷಗಳು ಪೂರ್ಣಗೊಂಡ ನಂತರ ಪಕ್ವವಾಗುತ್ತದೆ.
◆ಖಾತೆದಾರರು ಖಾತೆಯನ್ನು ತೆರೆದ ದಿನಾಂಕ ದಿಂದ ಒಂದು ವರ್ಷದ ಅವಧಿ ಮುಗಿದ ನಂತರ ಆದರೆ ಖಾತೆಯ ಮುಕ್ತಾಯದ ಮೊದಲು ಅರ್ಹ ಬ್ಯಾಲೆನ್ಸಿನ ಗರಿಷ್ಠ ನಲವತ್ತು ಪ್ರತಿಶತದವರಿಗೆ ಒಂದು ಬಾರಿ ಹಿಂಪಡೆಯಲು ಅರ್ಯರಾಗಿರುತ್ತಾರೆ.
◆ಖಾತೆದಾರರ ಮರಣದ ನಂತರ ಅಥವಾ ಗಾರಡಯನ್ನು ಮರಣದಂತಹ ಸಂದರ್ಭಗಳಲ್ಲಿ ಹಾಗೂ ಖಾತೆದಾರರ.
◆ಮರಣಾಂತಿಕ ಕಾಯಿಲೆಗಳ ಸಂದರ್ಭದಲ್ಲಿ ವೈದ್ಯಕೀಯ ನೆರವಿಗಾಗಿ ಈ ಖಾತೆಯನ್ನು ಅಕಾಲಿಕವಾಗಿ ಮುಚ್ಚಬಹುದು.
◆ಖಾತೆಯನ್ನು ಅಕಾಲಿಕವಾಗಿ ಈ ಮೇಲಿನ ಕಾರಣಕ್ಕಾಗಿ ಮುಚ್ಚಿದರೆ, ಅಸಲು ಮೊತ್ತದ ಮೇಲಿನ ಬಡ್ಡಿಯನ್ನು ಈ ಯೋಜನೆಗೆ ಅನ್ವಯಿಸುವ ದರದಲ್ಲಿ ಪಾವತಿಸಲಾಗುವುದು.
◆ಖಾತೆಯನ್ನು ಅಕಾಲಿಕವಾಗಿ ಈ ಮೇಲಿನ ಕಾರಣಕ್ಕಾಗಿ ಮುಚ್ಚಿದರೆ. ಅಸಲು ಮೊತ್ತದ ಮೇಲಿನ ಬಡ್ಡಿಯನ್ನು ಈ ಯೋಜನೆಗೆ ಅನ್ವಯಿಸುವ ದರದಲ್ಲಿ ಪಾವತಿಸಲಾಗುವುದು.
◆ಈ ಮೇಲಿನ ಕಾರಣ ಹೊರತುಪಡಿಸಿ ಬೇರೆ ಯಾವುದೇ ಕಾರಣಕ್ಕಾಗಿ ಖಾತೆಯನ್ನು ತೆರೆದ ದಿನಾಂಕ ದಿಂದ ಆರು ತಿಂಗಳ ಪೂರ್ಣಗೊಂಡ ನಂತರ ಯಾವುದೇ ಸಮಯದಲ್ಲಿ ಖಾತೆಯನ್ನು ಅಕಾಲಿಕವಾಗಿ ಮುಚ್ಚಬಹುದು ಅ ಸಂದರ್ಭದಲ್ಲಿ ಈ ಯೋಜನೆಯಲ್ಲಿ ನಿರ್ದಿಷ್ಟ ಪಡಿಸಿದ ಬಡ್ಡಿ ದರದಲ್ಲಿ ಶೇಕಡಾ ಎರಡರಷ್ಟು ಕಡಿತಗೊಳಿಸಲಾಗುವುದು.ಎಂದು ಅಂಚೆ ಕಚೇರಿಯ ಮುಖ್ಯ ಅಧಿಕಾರಿಗಳು ಗ್ರಾಹಕರಿಗೆ ತಿಳಿಯಪಡಿಸಿದರು.

ಈ ಸಂದರ್ಭದಲ್ಲಿ ಅಂಚೆ ಕಚೇರಿ ಸಿಬ್ಬಂದಿ ಹಾಗೂ ಮಹಿಳಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here