ರೂ.41ಲಕ್ಷ ವೆಚ್ಚದಲ್ಲಿ ಉನ್ನತೀಕರಣ ವಿಮ್ಸ್‍ನ ಅರಿವಳಿಕೆ ವಿಭಾಗದ ಉನ್ನತೀಕರಣಕ್ಕೆ ಇಸಿಪಿಎಲ್ ಕಂಪನಿ ಮತ್ತು ವಿಮ್ಸ್ ಕಂಪನಿ ಮಧ್ಯೆ ಒಪ್ಪಂದ

0
99

ಬಳ್ಳಾರಿ,ಸೆ.20 : ರೂ.41 ಲಕ್ಷ ವೆಚ್ಚದಲ್ಲಿ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ(ವಿಮ್ಸ್)ನ ಅರಿವಳಿಕೆ ವಿಭಾಗದ ಉನ್ನತೀಕರಣಕ್ಕೆ ಸಂಬಂಧಿಸಿದಂತೆ ವಿಮ್ಸ್ ಮತ್ತು ಇಸಿಪಿಎಲ್ ಕಂಪನಿ ಮಧ್ಯೆ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಒಪ್ಪಂದ ಮಾಡಿಕೊಳ್ಳಲಾಯಿತು.
ಕಾರ್ಪೋರೆಟ್ ಎನ್ವರ್‍ಮೆಂಟ್ ರಿಸ್ಪಾನ್ಸಿಬಾಲಿಟಿ(ಸಿಇಆರ್) ಚಟುವಟಿಕೆಗಳಡಿ ಇದನ್ನು ಕೈಗೆತ್ತಿಕೊಳ್ಳಲಾಗಿದೆ.
ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಇಸಿಪಿಎಲ್ ನಿರ್ದೇಶಕ ವಿನೋದ್ ಅಂಡಾ ಹಾಗೂ ವಿಮ್ಸ್ ನಿರ್ದೇಶಕ ಗಂಗಾಧರಗೌಡ ಅವರ ಪರವಾಗಿ ಸಭೆಗೆ ಆಗಮಿಸಿದ್ದ ವಿಮ್ಸ್‍ನ ಮೈಕ್ರೋಬಯಾಲಜಿ ವಿಭಾಗದ ಡಾ.ಕೃಷ್ಣ ಅವರು ಒಪ್ಪಂದಕ್ಕೆ ಸಹಿ ಹಾಕಿದ ಪತ್ರವನ್ನು ವಿನಿಮಯ ಮಾಡಿಕೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ವಿಮ್ಸ್ ಮೆಡಿಕಲ್ ಕಾಲೇಜಿನ ಅನಸ್ತೇಶಿಯಾ ವಿಭಾಗÀಕ್ಕೆ ಬೇಕಾದ ಸೌಲಭ್ಯಗಳನ್ನು ಇಸಿಪಿಎಲ್ ಕಂಪನಿಯಿಂದ ನೀಡಲಾಗುತ್ತಿದ್ದು, ಅದಕ್ಕೆ ಸಂಬಂಧಿಸಿದಂತೆ ಸಹಿ ಮಾಡಲಾಗಿದೆ ಎಂದರು.
ಇಸಿಪಿಎಲ್ ಕಂಪನಿಯಿಂದ ರೂ.41 ಲಕ್ಷ ವೆಚ್ಚದಲ್ಲಿ ವಿಮ್ಸ್ ಮೆಡಿಕಲ್ ಕಾಲೇಜಿನ ಅನಸ್ತೇಶಿಯಾ ವಿಭಾಗಕ್ಕೆ ಅಗತ್ಯವಿರುವ ಸೌಲಭ್ಯ ಒದಗಿಸಲಾಗುತ್ತದೆ. ಈ ಹಿಂದೆ ಜಿಲ್ಲಾಸ್ಪತ್ರೆಗೆ ಇಸಿಪಿಎಲ್ ಕಂಪನಿಯವರು ಆಪ್ತಮಾಲಜಿಗೆ ಬೇಕಾದ ಸೌಲಭ್ಯ ನೀಡಿದ್ದಾರೆ. ಇದು ಕಣ್ಣಿನ ತಪಾಸಣೆಗೆ ನೆರವಾಗುತ್ತಿದೆ. ತಮ್ಮ ಕಂಪನಿಯ ವ್ಯಾಪ್ತಿಯಲ್ಲಿ ಚೆಕ್ ಡ್ಯಾಂ ನಿರ್ಮಿಸುವ ಮೂಲಕ ನೀರಿನ ಸಂಗ್ರಹಣೆ ಮಾಡುವ ಉದ್ದೇಶ ಹೊಂದಿದ್ದಾರೆ ಎಂದು ಅವರು ತಿಳಿಸಿದರು.
ರೂ.2.5 ಕೋಟಿ ವೆಚ್ಚದಲ್ಲಿ ವೇಣಿ ವೀರಾಪುರ, ಕುಡುತಿನಿ ವ್ಯಾಪ್ತಿಯಲ್ಲಿ ಕಸವಿಲೇವಾರಿ ಘಟಕ ನಿರ್ಮಾಣ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ತಗಲುವ ವೆಚ್ಚದಲ್ಲಿ ರೂ.80ಲಕ್ಷ ಹಣವನ್ನು ಕಂಪನಿ ನೀಡಲಿದೆ. ಉಳಿದ ಹಣವನ್ನು ರಾಜ್ಯ ಸರ್ಕಾರದಿಂದ ಭರಿಸಲಾಗುವುದು ಎಂದು ತಿಳಿಸಿದ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಕಸವಿಲೇವಾರಿ ಘಟಕದ ಮೂಲಕ ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿ ತಯಾರಾಗುವ ಕಸವನ್ನು ವಿಲೇವಾರಿ ಮಾಡಲಾಗುತ್ತದೆ. ಈ ಮೂಲಕ ಗ್ರಾಪಂಗೆ ವಾಣಿಜ್ಯವಾಗಿ ಲಾಭದಾಯಕವೂ ಆಗಲಿದೆ. ಈಗಾಗಲೇ ಜಿಪಂ ವತಿಯಿಂದ ತಾಳೂರಿನಲ್ಲಿ ಇಂತಹ ಒಂದು ಘಟಕ ಶುರು ಮಾಡಲಾಗಿದೆ. ಅದು ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಡಿಎಚ್‍ಒ ಡಾ.ಜನಾರ್ಧನ್,ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ, ಇಸಿಪಿಎಲ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಮಹೇಶ ತೋಡ್ಕರ್,ವಿಮ್ಸ್‍ನ ಡಾ.ಬಾಲಭಾಸ್ಕರ್, ಇಸಿಪಿಎಲ್ ವ್ಯವಸ್ಥಾಪಕ ನಿರ್ದೇಶಕ ನರೇಶ ರಂಕಾ, ಗಣೇಶ, ಗುರುಪ್ರಸಾದ ಕುಲಕರ್ಣಿ,ವಿಜಯಭಾಸ್ಕರ್, ರಾಮಕೃಷ್ಣ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here