ಗ್ರಂಥಾಲಯದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಆಚರಣೆ; “ಅಮ್ಮನಿಗಾಗಿ ಒಂದು ಪುಸ್ತಕ ” ಮತ್ತು “ಪತ್ರ ಬರೆಯುವ ” ಅಭಿಯಾನ “

0
278

ಕೊಟ್ಟೂರು: ಸಾರ್ವಜನಿಕ ಗ್ರಂಥಾಲಯದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯನ್ನು ಭಾನುವಾರದಂದು ಆಚರಿಸಲಾಯಿತು ಗುರು ಬಸವರಾಜ ಮತ್ತೆಹಳ್ಳಿ ಮಲ್ಲಪ್ಪ ಗುಡ್ಲಾನೂರ್ ಮಾತನಾಡಿದರು.

“ಅಮ್ಮನಿಗಾಗಿ ಒಂದು ಪುಸ್ತಕ ” ಮತ್ತು “ಪತ್ರ ಬರೆಯುವ ” ಅಭಿಯಾನವನ್ನು” ಅಕ್ಕಮಹಾದೇವಿ ” ಶಿಕ್ಷಕಿ ಮಕ್ಕಳಿಂದ ಪುಸ್ತಕ ಪಡೆದು ಓದುವುದರ ಮೂಲಕ ಚಾಲನೆ ನೀಡಿದರು. ಈ ಅಭಿಯಾನದಿಂದ ಮಕ್ಕಳಲ್ಲಿ ಮೌಖಿಕ ಮತ್ತು ಲಿಖಿತ ಕೌಶಲ್ಯಗಳನ್ನು ಹೆಚ್ಚಿಸುತ್ತದೆ ಎಂದು ಮಾತನಾಡಿದರು.

ಹತ್ತು ದಿನಗಳ ಕಾಲ ಅಮ್ಮನಿಗಾಗಿ ಒಂದು ಪುಸ್ತಕ ಮತ್ತು ಪತ್ರ ಬರೆಯುವ ಚಟುವಟಿಕೆಯನ್ನು ಕೊಟ್ಟೂರು ಸಾರ್ವಜನಿಕ ಗ್ರಂಥಾಲಯದಲ್ಲಿ ಆಯೋಜಿಸಿದೆ.
ಮಕ್ಕಳು ಗ್ರಂಥಾಲಯಕ್ಕೆ ಬಂದು ಅಮ್ಮನಿಗಾಗಿ ಪುಸ್ತಕವನ್ನು ಆಯ್ಕೆ ಮಾಡಿ ಅದನ್ನು ಮನೆಗೆ ತೆಗೆದುಕೊಂಡು ಹೋಗಿ ತಾಯಿಗೆ ಆ ಪುಸ್ತಕವನ್ನು ಕೊಟ್ಟು ಓದಿಸಿ ಓದಿ ಮಕ್ಕಳಿಗೆ ವಿಷಯವನ್ನು ಹೇಳುವುದು.

ಅಮ್ಮ ಮತ್ತು ಮಗು ಒಟ್ಟಿಗೆ ಓದುವುದರಿಂದ ಮಕ್ಕಳಿಗೆ ಓದಲು ಆಸಕ್ತಿ ಹೆಚ್ಚಿಸುತ್ತದೆ ಮತ್ತು ಓದಿನ ಪ್ರಗತಿಯ ಬಗ್ಗೆ ತಿಳಿಯುತ್ತದೆ . ಮಕ್ಕಳಿಗೆ ಓದುವುದರ ಜೊತೆಗೆ ಬರೆಯುವ ಅಭ್ಯಾಸವನ್ನು ಮಾಡಲು ಅವಕಾಶ ಕಲ್ಪಿಸುತ್ತದೆ ಎಂದು ಮಲ್ಲಪ್ಪ ಗುಡ್ಲಾನೂರ್ ಶಾಖ ಗ್ರಂಥಾಲಯ ಅಧಿಕಾರಿ ಮಾತನಾಡಿದರು.
ಗಿರೀಶ್ ಇಂಜಿನಿಯರ್ ಮಕ್ಕಳಿಗೆ ಆತ್ಮೀಯವಾಗಿ ಸ್ವಾಗತಿಸಿ ಶುಭ ಕೋರಿದರು .

ಈ ಸಂದರ್ಭದಲ್ಲಿ ಬಾಚೇನಹಳ್ಳಿ ಈಶಪ್ಪ, ಜವಳಿ ರಾಜಣ್ಣ, ಎನ್.ಎಂ. ಕೊಟ್ರೇಶ, ಹನುಮಕ್ಕ, ಶ್ರೀನಿವಾಸ್ ಪತ್ತಾರ, ಮಕ್ಕಳು ಮತ್ತು ಓದುಗರು .
ಗ್ರಂಥಾಲಯ ಸದಸ್ಯರು ಇದ್ದರು

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here