ಎಸ್ ಆರ್ ಎಸ್ ಶಾಲೆಯಲ್ಲಿ ಅಖಿಲ ಭಾರತ ಪಬ್ಲಿಕ್ ಶಾಲೆಗಳ ರಾಷ್ಟ್ರ ಮಟ್ಟದ ಯೋಗ ಸ್ಫರ್ಧೆ

0
78

ಸಂಡೂರು:ಆ:27:- ಇದೇ ತಿಂಗಳ 29/10/2022 ರಿಂದ 30/10/2022 ರವರೆಗೆ ಎರಡು ದಿನಗಳ ಕಾಲ ಸಂಡೂರಿನ ಎಸ್ ಆರ್ ಎಸ್ ಶಾಲೆಯಲ್ಲಿ ಅಖಿಲ ಭಾರತ ಪಬ್ಲಿಕ್ ಶಾಲೆಗಳ ಅಖಿಲ ಭಾರತ ಮಟ್ಟದ ಯೋಗ ಸ್ಫರ್ಧೆಯನ್ನು ಏರ್ಪಡಿಸಿದೆ. ಈ ಸ್ಫರ್ಧೆಯಲ್ಲಿ ಮಹಾರಾಣಿ ಗಾಯತ್ರಿ ದೇವಿ ಬಾಲಕಿಯರ ಶಾಲೆ, ಜೈಪುರ. ಮಾಯೋ ಕಾಲೇಜು, ಅಜ್ಮೀರ್. ಕಿತ್ತೂರು ರಾಣಿ ಚೆನ್ನಮ್ಮ ಶಾಲೆ, ಬೆಳಗಾವಿ. ಹೈದರಾಬಾದ್ ಪಬ್ಲಿಕ್ ಸ್ಕೂಲ್, ಹೈದರಾಬಾದ್. ಎಮರಾಲ್ಡ್ ಹೈಟ್ಸ್ ಇಂಟರ್‍ನ್ಯಾಷನಲ್ ಸ್ಕೂಲ್, ಇಂದೋರ್. ಸಿಂಧಿಯಾ ಕನ್ಯಾ ವಿದ್ಯಾಲಯ, ಗ್ವಾಲಿಯರ್. ದೆಹಲಿ ಪಬ್ಲಿಕ್ ಸ್ಕೂಲ್, ಮಥುರಾ. ಸಂಡೂರು ವಸತಿ ಶಾಲೆ, ಸಂಡೂರು ಭಾಗವಹಿಸುವವು. ಉದ್ಘಾಟನೆಯ ಅಂಗವಾಗಿ ಭಾಗವಹಿಸುವ ಎಲ್ಲಾ ಶಾಲೆಗಳು ಮಾರ್ಚ್ ಪಾಸ್ಟ್ ಮಾಡಲಿವೆ.

ಈ ಸ್ಫರ್ಧೇಯಲ್ಲಿ U-14, U-17, U-19 ವಯೋಮಾನದ ತಂಡಗಳು ವಿವಿಧ ಆಸನಗಳನ್ನು ಪ್ರದರ್ಶಿಸಲಿವೆ.

ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಜೆಎಸ್‍ಡಬ್ಲೂ ಸ್ಟೀಲ್ ಕಂಪನಿಯ ಅಧ್ಯಕ್ಷರಾದ ಪಿ.ಕೆ. ಮುರುಗನ್ ಅವರು ಆಗಮಿಸುವರು, ಅತಿಥಿಗಳಾಗಿ ಸ್ಮಯೋರ್ ಕಂಪನಿಯ ವ್ಯವಸ್ಥಾಪ ನಿರ್ದೇಶಕರಾದ ಬಹಿರ್ಜಿ ಅಜಯ್ ಘೋರ್ಪಡೆಯವರು, ರಾಜ ವಂಶಸ್ಥರಾದ ಅಜಯ್ ಘೋರ್ಪಡೆಯವರು, ಶ್ರೀಮತಿ ಸೂರ್ಯಪ್ರಭ ಅಜಯ್ ಘೋರ್ಪಡೆಯವರು, ಶಿವಪುರ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಯಶೋಧರ ಘೋರ್ಪಡೆಯವರು, ಏಕಾಂಬರ್ ಅಜಯ್ ಘೋರ್ಪಡೆಯವರು, ಸ್ಮಯೋರ್ ಸಂಸ್ಥೆಯ ಅಬ್ದುಲ್ ಸಲೀಮ್ (ಡೈರೆಕ್ಟರ್ ಮೈನ್ಸ್) ಅವರು, ಶಿವಪುರ ಶಿಕ್ಷಣ ಸಂಸ್ಥೆಯ ಆಡಳತಾಧಿಕಾರಿಗಳಾದ ಕರ್ನಲ್ ರವೀಂದ್ರ ರೆಡ್ಡಿಯವರು, ಪ್ರಾಂಶುಪಾಲರಾದ ಶ್ರೀಮತಿ ರೇಖಾ ಕುಂಬಾರರವರು ಉಪಸ್ಥಿತರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

30.10.2022 ರಂದು ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು, ವಿಜೇತ ಸ್ಪರ್ಧಿಗಳಿಗೆ ಹಾಗೂ ತಂಡಗಳಿಗೆ ಶಿವಪುರ ಶಿಕ್ಷಣ ಸಮಿತಿಯ ಅಧ್ಯಕ್ಷೆಯಾದ ಶ್ರೀಮತಿ ಯಶೋಧರ ಘೋರ್ಪಡೆ ಪದಕ ಹಾಗೂ ಟ್ರೋಫಿಗಳನ್ನು ವಿತರಿಸುವರು.

ಸುಮಾರು ನಾಲ್ಕು ದಶಕಗಳ ನಂತರ ಎಸ್ ಆರ್ ಎಸ್ ಶಾಲೆಯಲ್ಲಿ ಅಖಿಲ ಭಾರತ ಮಟ್ಟದ ಸ್ಪರ್ಧೆಯನ್ನು ಏರ್ಪಡಿಸಿದೆ. 1982 ರಲ್ಲಿ ಅಖಿಲ ಭಾರತ ಮಟ್ಟದ ಶಾಲಾ ಕ್ರೀಡಾಕೂಟಗಳನ್ನು ಏರ್ಪಡಿಸಿದ್ದನ್ನು ಸ್ಮರಿಸಬಹುದು.

LEAVE A REPLY

Please enter your comment!
Please enter your name here