ಸಂಡೂರು ತಾಲೂಕು ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ.ಭದ್ರಪ್ಪರಿಂದ ಅಧಿವೇಶನದಲ್ಲಿ ಅತಿಥಿ ಉಪನ್ಯಾಸಕರ ಸೇವಾ ವಿಲೀನ ಮಾಡುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ತಹಶೀಲ್ದಾರ್ ಗೆ ಮನವಿ

0
158

ಸಂಡೂರು:ಮಾ:14: ರಾಜ್ಯದಲ್ಲಿ 412 ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ 14564ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಕೆಲವರು 10-15ವರ್ಷಗಳಿಂದ ಕನಿಷ್ಠ ವೇತನಕ್ಕೆ ಸೇವೆ ಸಲ್ಲಿಸುತ್ತಿದ್ದು ಬಜೆಟ್ ಅಧಿವೇಶನದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವಾ ವಿಲೀನ ಮಾಡುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಾಲೂಕು ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ. ಭದ್ರಪ್ಪ ಒತ್ತಾಯಿಸಿದರು.

ಅವರು ಪಟ್ಟಣದ ತಹಶೀಲ್ದಾರ್ ಕಚೇರಿಯ ಅವರಣದಲ್ಲಿ ಶಿರಸ್ತೇದಾರ್ ಶಿವಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ನಡೆಯುವ ಅಂತರಿಕ ಪರೀಕ್ಷೆಗಳು, ಮೌಲ್ಯಮಾಪನ, ನ್ಯಾಕ್ ಕಾರ್ಯಗಳಿಗೂ ಸಹ ಅತಿಥಿ ಶಿಕ್ಷಕರೇ ಬೇಕು, ಅದರೆ ಅವರಿಗೆ ಸೇವಾ ಭದ್ರತೆ ಇಲ್ಲವಾಗಿದೆ, ಬಹಳಷ್ಟುಅತಿಥಿ ಉಪನ್ಯಾಸಕರು ಎನ್.ಇ.ಟಿ., ಎಸ್.ಎಲ್.ಇಟಿ, ಎಂಫಿಲ್, ಪಿಹೆಚ್.ಡಿ., ಸಹಿತ ಹಲವು ಉನ್ನತ ಪದವಿಗಳನ್ನು ಪಡೆದು ಧೀಘ ಕಾಲದಿಂದ, ಉಪನ್ಯಾಸಕವೃತ್ತಿಯಲ್ಲಿ ಹೊಟ್ಟೆಪಾಡಿಗಾಗಿದುಡಿಯುತ್ತಿದ್ದು,
ಪ್ರತಿ ವರ್ಷವೂ ಸಹ ಆಯ್ಕೆಯಾಗುತ್ತೇವೆಯೋ? ಇಲ್ಲವೋ ಎನ್ನುವ ಅತಂಕದಲ್ಲಿ ಬದುಕನ್ನು ದೂಡುವಂತಹ ಅತಂತ್ರ ಸ್ಥಿತಿ ಉಂಟಾಗಿದ್ದು ಕುಟುಂಬ ನಿರ್ವಹಣೆಯೂ ಕಷ್ಟವಾಗಿದೆ, ಅದ್ದರಿಂದ ಅತಿಥಿ ಉಪನ್ಯಾಸಕರ ಅಭದ್ರ ಬದುಕಿಗೆ ಸೇವಾವಿಲೀನ ಮಾಡುವ ಮೂಲಕ ಸರ್ಕಾರ ಭದ್ರತೆಯನ್ನು ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ತಾಲೂಕು ಘಟಕದ ವತಿಯಿಂದ ಎಲ್ಲಾ ಅತಿಥಿ ಉಪನ್ಯಾಸಕರು ಒತ್ತಾಯಿಸುತ್ತೇವೆ, ತಕ್ಷಣ ಸರ್ಕಾರ ಅತಿಥಿ ಉಪನ್ಯಾಸಕ ಬೇಡಿಕೆಯನ್ನು ಪರಿಗಣಿಸಿ ಇದೆ ಬಜೆಟ್ ಅವಧಿಯಲ್ಲಿ ಅತಿಥಿ ಉಪನ್ಯಾಸಕರ ಸೇವಾ ವಿಲೀನಗೊಳಿಸಬೇಕೆಂದು ಪ್ರತಿಭಟಿಸಿ ಮನವಿ ಪತ್ರ ಸಲ್ಲಿಸಿದರು.

LEAVE A REPLY

Please enter your comment!
Please enter your name here