ರಾಷ್ಟ್ರೀಯ ಏಕತಾ ದಿನಾಚರಣೆ;ಐಕ್ಯತೆಯ ಪ್ರತಿಜ್ಞೆ ಸ್ವೀಕಾರ,

0
65

ಸಂಡೂರು:ಆ:31:- ತಾಲೂಕಿನ ತೋರಣಗಲ್ಲು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ, ಮತ್ತು ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ, ಸಂಡೂರು ಇವರ ಸಹಯೋಗದಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮ ದಿನಾಚರಣೆ ಅಂಗವಾಗಿ “ರಾಷ್ಟ್ರೀಯ ಏಕತಾ ದಿನ” ಆಚರಿಸಲಾಯಿತು,

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಗಳಾದ ಎಮ್.ಎಸ್ ಹೊನ್ನೂರ್ ಸಾಬ್ ಅವರು ಮಾತನಾಡಿ ಸಾರ್ವಕಾಲಿಕವಾಗಿ ದೇಶ ಹೆಮ್ಮೆ ಪಡುವಂತ ಕಾರ್ಯ ಮಾಡಿದ ದೇಶದ ಪ್ರಪ್ರಥಮ ಉಪ ಪ್ರಧಾನಿ ಮತ್ತು ಪ್ರಥಮ ಗೃಹಮಂತ್ರಿಯಾಗಿದ್ದ ಶ್ರೀ ವಲ್ಲಭಭಾಯ್ ಪಟೇಲ್ ಅವರ ಕಾರ್ಯಗಳು ಅವಿಸ್ಮರಣೀಯ, ದೇಶದ ಏಕೀಕರಣದ ಸ್ಪೂರ್ತಿಯನ್ನು ಸದಾಕಾಲ ಸ್ಮರಿಸಬೇಕಿದೆ, ರಾಷ್ಟ್ರದ ಐಕ್ಯತೆಗಾಗಿ ಶ್ರಮಿಸಿದ ಮಹನೀಯರು, ಸ್ವತಂತ್ರ ಭಾರತದಲ್ಲಿ ಹಲವು ರಾಜರ ಆಡಳಿತವಿದ್ದ ರಾಜ್ಯಗಳನ್ನು ಒಟ್ಟು ಗೂಡಿಸಲು ಮಾಡಿದ ಪ್ರಯತ್ನ ಮತ್ತು ಏಕತೆಯ ದೂರದೃಷ್ಟಿ ಎಲ್ಲರೂ ಹೆಮ್ಮೆ ಪಡುವಂತಹದ್ದು, ಪ್ರಪಂಚದ ಅತೀ ಎತ್ತರ 182 ಮೀಟರ್ ಎತ್ತರದ ಅವರ ಕಂಚಿನ ಪ್ರತಿಮೆ ನಮ್ಮ ದೇಶದಲ್ಲಿ ಸ್ಥಾಪಿಸಿರುವುದೇ ನಮಗೆಲ್ಲಾ ಹೆಮ್ಮೆ ಎಂದು ನುಡಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ, ಪಟೇಲರ ಸಾಧನೆಗಳು, ಮತ್ತು ಐಕ್ಯತಾ ಭಾವ, ದೇಶ ಪ್ರೇಮ ಸಾರುವ ಕುರಿತು ಭಾಷಣ, ಪ್ರಬಂಧ ರಚನೆಯ ಅಭ್ಯಾಸವನ್ನು ಮಕ್ಕಳು ರೂಢಿಸಿಕೊಳ್ಳ ಬೇಕೆಂದು ತಿಳಿಸಿದರು, ಹಾಗೇ ಎಲ್ಲರೂ ರಾಷ್ಟ್ರದ ಐಕ್ಯತೆಗಾಗಿ ಶ್ರಮಿಸುವ ಕುರಿತು ಪ್ರತಿಜ್ಞಾ ವಿಧಿಯನ್ನು ಭೋದಿಸಿದರು, ಮಕ್ಕಳೆಲ್ಲರೂ ಪ್ರತಿಜ್ಞೆಯನ್ನು ಕೈಗೊಂಡರು,

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಎಮ್.ಎಸ್ ಹೊನ್ನೂರಸಾಬ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ಬಸವರಾಜ, ಶಾಲೆಯ ಸಹ ಶಿಕ್ಷಕರಾದ ಕೆ.ಎರ್ರಿಸ್ವಾಮಿ, ವಿಜಯಕುಮಾರ್, ಬೋಧಕೇತರ ಸಿಬ್ಬಂದಿ ಸಹಾಸ್ ನಾಯಕ್, ಮತ್ತು ಮಕ್ಕಳು ಹಾಜರಿದ್ದರು

LEAVE A REPLY

Please enter your comment!
Please enter your name here