4 ಕೋಟಿ 86 ಲಕ್ಷ ವೆಚ್ಚದ ಕುಡಿಯುವ ನೀರಿನ ನಳ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಶಾಸಕ ಜೆ.ಎನ್.ಗಣೇಶ್ ಶಂಕುಸ್ಥಾಪನೆ

0
317

ಬಳ್ಳಾರಿ/ಕಂಪ್ಲಿ:ಜೂನ್:07:- ತಾಲೂಕಿನ ನಂ 10 ಮುದ್ದಾಪುರ ಗ್ರಾ.ಪಂಯ ನಂ 5 ಬೆಳಗೋಡು ಹಾಳ್ ಗ್ರಾಮದಲ್ಲಿ ಜಿ.ಪಂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ 2021-22ನೇ ಸಾಲಿನ ಜೆಜೆಎಂ ಯೋಜನೆಯಡಿ ಸುಮಾರು 67.30 ಲಕ್ಷ ವೆಚ್ಚದಲ್ಲಿ ನಿರ್ಮಿಸಲಿರುವ ಕುಡಿಯುವ ನೀರಿನ ನಳ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಶಾಸಕ ಜೆ.ಎನ್ ಗಣೇಶ್ ಸೋಮವಾರ ಭೂಮಿ ಪೂಜೆ ಸಲ್ಲಿಸಿದರು.

ಶಾಸಕ ಜೆ.ಎನ್. ಗಣೇಶ್ ಮಾತನಾಡಿ, ಜೆಜೆಎಂ ಯೋಜನೆಯಡಿ ತಲಾ 9 ಕೋಟಿ ವೆಚ್ಚದಲ್ಲಿ ಜವುಕು, ನೆಲ್ಲುಡಿ, ಗುಡುದೂರು ಕೆರೆಗಳ ಅಭಿವೃದ್ದೀಗೆ ಈಗಾಗಲೇ ಡಿಪಿಆರ್ ಆಗಿದ್ದು, ಅತಿ ಶೀಘ್ರದಲ್ಲೆ ಕೆರೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಲಾಗುವುದು. ಶಿಕ್ಷಣ,ವಿದ್ಯತ್, ನೀರು ಗ್ರಾಮೀಣ ಭಾಗದ ಜನತೆಗೆ ಸಮರ್ಪಕವಾಗಿ ಒದಗಿಸುವುದು ಮುಖ್ಯ ಉದ್ದೇಶವಾಗಿದೆ. ಸುಮಾರು 25 ಕೋಟಿಯ ಸಿಎಂ ಅನುದಾನದಲ್ಲಿ ಮೇಟ್ರಿ-ಜವುಕು,ಎಮ್ಮಿಗನೂರು-ಶಾಂತಿನಗರ ಸೇರಿದಂತೆ ಹದಗೆಟ್ಟ ರಸ್ತೆಗಳನ್ನು ಅಭಿವೃದ್ದಿಪಡಿಸಲಾಗುವುದು ಹಂಪಾದೇವನಹಳ್ಳಿ ಗ್ರಾಪಂಯ ರೆಗ್ಯೂರೇಟರ್ ಕ್ಯಾಂಪ್(41.40)ಲಕ್ಷ ಹಂಪಾದೇವನಹಳ್ಳಿ(76.70 ಲಕ್ಷ) ಗೋನಾಳ್(42.50 ಲಕ್ಷ) ಜವುಕು(12.50 ಲಕ್ಷ) ನಂ 10 ಮುದ್ದಾಪುರ ಗ್ರಾಪಂಯ ಬೆಳಗೋಡು ಹಾಳ್ (67.30 ಲಕ್ಷ) ಸಣಾಪುರ ಗ್ರಾ.ಪಂಯ ಮಾರೆಮ್ಮ ಕ್ಯಾಂಪ್ (36.30 ಲಕ್ಷ) ಇಟಗಿ (105 ಲಕ್ಷ) ನಂ 2 ಮುದ್ದಾಪುರ (69.50 ಲಕ್ಷ) ಕೊಂಡಯ್ಯ ಕ್ಯಾಂಪ್(24.10 ಲಕ್ಷ) ಗ್ರಾಮದಲ್ಲಿ ಜೆ.ಪಂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ 2021-22ನೇ ಸಾಲಿನ ಜೆಜೆಎಂ ಯೋಜನೆಯಡಿಯ ಸುಮಾರು 4 ಕೋಟಿ 86 ಲಕ್ಷ ವೆಚ್ಚದ ಕುಡಿಯುವ ನೀರಿನ ನಳ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದು ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಳಿಸಿ ಜನತೆಗೆ ಕುಡಿಯುವ ನೀರು ಒದಗಿಸಲಾಗುತ್ತದೆ. ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಹಗರಿ ಮೌಲ, ರಾಜಪ್ಪ, ನಬಿಸಾಬ್, ಮೂರ್ತಿ, ವಾಸು, ಗುತ್ತಿಗೆದಾರ ಶಫಿ, ಆನಂದ, ಸಿದ್ದಪ್ಪ ಸೇರಿದಂತೆ ಆಯಾ ಗ್ರಾಪಂ ಅಧ್ಯಕ್ಷರು ಉಪಾಧಕ್ಷರು, ಸದಸ್ಯರು ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here