ಉಪ್ಪುಖರೀದಿಸುವಾಗ ಅಯೊಡೀನ್ ಅಂಶ ಇರುವ ಬಗ್ಗೆ ನಿಗಾ ಇರಲಿ: ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಅಭಿಪ್ರಾಯ

0
295

ಸಂಡೂರು:ಅ:27:- ಸಂಡೂರು ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದಲ್ಲಿ ಇಂದು ಆಚರಿಸಿದ ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಅಕ್ಟೋಬರ್ 21 ರಿಂದ 29 ವರೆಗೆ ಆಚರಿಸುವ “ರಾಷ್ಟ್ರೀಯ ಅಯೋಡಿನ್ ಕೊರತೆ ನ್ಯೂನತೆ ನಿವಾರಣೆ ಸಪ್ತಾಹ”ದ ಮಹತ್ವ ಮತ್ತು ಉದ್ದೇಶ ತಿಳಿಸುತ್ತಾ, ಅಯೋಡಿನ್ ಸೂಕ್ಮ ಪೋಷಕಾಂಶವು ಥೈರಾಡ್ ಗ್ರಂಥಿಯ ಸಮರ್ಪಕ ನಿರ್ವಹಣೆಗೆ ಹಾಗೂ ಆರೋಗ್ಯಕ್ಕೆ ಅತೀ ಅವಶ್ಯವಿದ್ದು ಪ್ರತಿದಿನ 150 ರಿಂದ 200 ಮೈಕ್ರೋಗ್ರಾಂ ಬೇಕಾಗುತ್ತದೆ, ಕೊರೆತೆ ಉಂಟಾದರೆ ಗಳಗಂಡ ಕಾಯಿಲೆ ಬರುತ್ತೆ, ಹಾಗೆ ಗರ್ಭಿಣಿಯರಲ್ಲಿ ಪದೇ ಪದೇ ಗರ್ಭಪಾತ ವಾಗುವುದು, ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗುವುದು, ನೆನಪಿನ ಶಕ್ತಿ ಕಡಿಮೆಯಾಗುವುದು, ಕಿವುಡುತನ,ಮೆಳ್ಳಗಣ್ಣು, ದೈನಂದಿನ ಕಾರ್ಯ ನಿರ್ವಹಣೆಯಲ್ಲಿ ವೈಪಲ್ಯತೆ, ಇವೆಲ್ಲವೂ ಅಯೋಡಿನ್ ಅಂಶ ದೇಹಕ್ಕೆ ಕಡಿಮೆ ಯಾದರೆ ಉಂಟಾಗುವುವ ನ್ಯೂನತೆಗಳು, ಸಾಮಾನ್ಯವಾಗಿ ಅಯೋಡಿನ್ ಭೂಮಿಯ ಮೇಲ್ಪದರ ನೀರಿನಲ್ಲಿ ದೊರೆಯುತ್ತದೆ,

ಹಸಿರು ಸೊಪ್ಪು, ತರಕಾರಿ ಕ್ಯಾರೆಟ್ ನಲ್ಲಿ, ಸೀಗಡಿ, ಮೀನಿನಲ್ಲಿ ಅಲ್ಪ ಪ್ರಮಾಣದಲ್ಲಿ ದೊರೆಯುತ್ತದೆ, ಕಲ್ಲು ಗುಡ್ಡಗಾಡುಗಳಲ್ಲಿ ದೊರೆಯುವ ನೀರಿನಲ್ಲಿ ಸಮ ಪ್ರಮಾಣದಲ್ಲಿ ದೊರೆಯದ ಕಾರಣಕ್ಕೆ ಉಪ್ಪು ಸೇವಿಸುವ ಸರಿಯಾದ ಪ್ರಮಾಣಕ್ಕೆ ಅಯೋಡಿನ್ ಸೇರಿಸಿ ಮಾರಾಟ ಮಾಡಲಾಗುತ್ತಿದೆ, ಇದನ್ನು ಸಾರವರ್ಧಕ ಎಂದು ಕರೆಯುವರು, ಈ ಎಲ್ಲಾ ವಿಷಯಗಳನ್ನು ಗುಂಪು ಸಭೆ ಏರ್ಪಡಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಲು ಸಪ್ತಾಹ ಆಚರಿಸಲಾಗುವುದು ಎಂದು ತಿಳಿಸಿದರು,

ಉಪ್ಪು ಖರೀದಿ ಮಾಡುವಾಗ ಅಯೋಡಿಸೈಡ್ ಸೂರ್ಯ ಮಾರ್ಕ್ ಇರುವುದನ್ನು ಗಮನಿಸಬೇಕು ಮತ್ತು ಕೆಲವರು ಲಾರಿಗಳಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುವವರು ಬಂದಾಗ ಪರಿಶೀಲನೆ ಮಾಡಿ ನಿರಾಕರಿಸಿ ಎಂದು ತಿಳಿಸಿದರು, ಅಯೋಡಿನ್ ಅಂಶ ನಷ್ಟವಾಗದ ಹಾಗೆ ಮನೆಯಲ್ಲಿ ಉಪ್ಪಿನ ಡಬ್ಬಿಗೆ ಮುಚ್ಚಳದಿಂದ ಮುಚ್ಚಿಡಬೇಕು, ಅಡುಗೆ ಮಾಡುವಾಗ ಉಪ್ಪು ಹಾಕಿ ಬೇಯಿಸಿದಾಗ ಅಯೋಡಿನ್ ಅಂಶ ಕಡಿಮೆಯಾಗುತ್ತದೆ, ಅಡುಗೆ ನಂತರ ಅಥವಾ ಊಟ ಮಾಡುವಾಗ ಉಪ್ಪು ಬಳಸುವುದರಿಂದ ಸರಿಯಾದ ಪ್ರಮಾಣದ ಅಯೋಡಿನ್ ದೇಹಕ್ಕೆ ದೊರೆಯುತ್ತದೆ, ಈ ಎಲ್ಲಾ ಕೌಶಲಗಳನ್ನು ಮಹಿಳೆಯರು ಅರಿತು ಕೊಳ್ಳಬೇಕು ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆರೋಗ್ಯ ಸುರಕ್ಷಾಧಿಕಾರಿ ಭಾಗ್ಯಲಕ್ಷ್ಮಿ, ಆಶಾ ಕಾರ್ಯಕರ್ತೆಯರಾದ ಕಾವೇರಿ, ರಾಜೇಶ್ವರಿ, ಶ್ರೀದೇವಿ,ಆಶಾ,ಹುಲಿಗೆಮ್ಮ,ವಿಜಯಶಾಂತಿ, ಗೋವಿಂದಮ್ಮ ಮತ್ತು ಬೀದಿ ಬದಿ ಆಹಾರ ತಯಾರಿಸುವವರು ಸಹ ಹಾಜರಿದ್ದರು

LEAVE A REPLY

Please enter your comment!
Please enter your name here