ನ್ಯುಮೋಕಾಕಲ್ ಕಾಂಜುಗೇಟ್ (ಪಿಸಿವಿ) ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ, ಲಸಿಕೆಯನ್ನು ಹೆಮ್ಮೆಯಿಂದ ಸ್ವಾಗತಿಸಲಾಗಿದೆ: ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ,

0
350

ಸಂಡೂರು :ನ:11:- ತಾಲೂಕಿನ ಹೊಸದರೋಜಿ ಗ್ರಾಮದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹುಟ್ಟಿನಿಂದ ಎರಡು ವರ್ಷದೊಳಗಿನ ಮಕ್ಕಳಿಗೆ ಹನ್ನೆರಡು ಮಾರಕ ರೋಗಗಳ ವಿರುದ್ದ ಲಸಿಕೆಗಳನ್ನು ಈಗಾಗಲೇ ನೀಡಲಾಗುತ್ತಿದ್ದು ಈಗ ಹದಿಮೂರನೆಯ ಲಸಿಕೆಯಾಗಿ ನ್ಯುಮೋಕಾಕಲ್ ಕಾಂಜುಗೆಟ್ (ಪಿಸಿವಿ) ಲಸಿಕೆಯನ್ನು ಸೇರಿಸಲಾಗಿದ್ದು ಇಂದಿನಿಂದ ಪಿ.ಸಿ.ವಿ ಲಸಿಕೆಯನ್ನು 1½ ತಿಂಗಳ ಮಕ್ಕಳಿಗೆ ನೀಡಲಾಗುತ್ತದೆ, ಮೊದಲ ಡೋಸ್ 1½ ತಿಂಗಳಿಗೆ ನೀಡಲಾದ ಮಕ್ಕಳಿಗೆ ಎರಡನೇ ಡೋಸ್ 3½ ತಿಂಗಳಿಗೆ ಮತ್ತು ಮೂರನೇ ಬೂಸ್ಟರ್ ಡೋಸ್ 9 ತಿಂಗಳಿಗೆ ಕೊಡಲಾಗುವರೇಣುಕಾ,ಲಸಿಕೆಯು ಮಕ್ಕಳಲ್ಲಿ ಬಾಧಿಸುವ ಮಾರಣಾಂತಿಕ ನ್ಯುಮೋನಿಯಾ ಮತ್ತು ಮೆನಿಂಜೈಟಿಸ್ ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳನ್ನು ತಡೆಗಟ್ಟುತ್ತದೆ,ಮತ್ತು ಮಕ್ಕಳ ಮರಣವನ್ನು ತಡೆಗಟ್ಟಲು ಸಹಕಾರಿಯಾಗಿದೆ, ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮಗಳು ಇಲ್ಲ ಲಸಿಕೆಯನ್ನು ಸಂದೇಹವಿಲ್ಲದೇ ಮಕ್ಕಳಿಗೆ ಹಾಕಿಸ ಬಹುದು ಎಂದು ತಿಳಿಸಿದರು,

ಕಾರ್ಯಕ್ರಮ ಉದ್ದೇಶಿಸಿ ಗ್ರಾಮ ಪಂಚಾಯತಿ ಸದಸ್ಯರಾದ ಕಿರಣ್ ಕುಮಾರ್ ಮಾತನಾಡಿ ಯಾವುದೇ ಲಸಿಕೆ ಬರಲಿ ಅದನ್ನು ವಿಶ್ವಾಸದಿಂದ ಬರಮಾಡಿಕೊಳ್ಳಬೇಕು, ಲಸಿಕೆ ಮಹತ್ವ ಏನೆಂಬುದು ಕೋವಿಡ್ ಸಮಯದಲ್ಲಿ ನೋಡಿದ್ದೇವೆ ಸರ್ಕಾರ ಕೈಗೊಳ್ಳುವ ಕಾರ್ಯದಲ್ಲಿ ಉತ್ತಮ ಉದ್ದೇಶ ಇದ್ದೇ ಇರುತ್ತದೆ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಮತಿ ಖಾಜಾಭೀ, ಮಾಯಣ್ಣ, ಕಿರಣ್ ಕುಮಾರ್, ಮಾರೆಣ್ಣ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಶಾಲಾ ಶಿಕ್ಷಕಿ ಸುಮಂಗಳ,ಆರೋಗ್ಯ ಸುರಕ್ಷಾಧಿಕಾರಿ ಸತ್ಯಮ್ಮ,ಇಸ್ಮಾಯಿಲ್, ಸಿಹೆಚ್ಒ ರೇಣುಕಾ, ಆಶಾ ಶ್ರೀದೇವಿ, ಹುಸೇನ್ ಭೀ, ಯಶೋಧ, ಮಂಗಳಾ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here