ಬಿಕೆಜಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ 67ನೇ ಕನ್ನಡ ರಾಜ್ಯೋತ್ಸವ ಆಚರಣೆ

0
53

ಸಂಡೂರು: ಪ್ರತಿಯೊಬ್ಬರ ಹೃದಯದ ಅಂತರಾಳದಲ್ಲಿ ಕನ್ನಡವಿದೆ, ಅದನ್ನು ಹೆಕ್ಕಿ ತೆಗೆಯುವ ಕೆಲಸ ಆಗಬೇಕಿದೆ. ಹಾಗೂ ದೇಶದ ಬಗ್ಗೆ ಮತ್ತು ಮಾತೃ ಭಾಷೆಯ ಬಗ್ಗೆ ಪ್ರತಿಯೊಬ್ಬರೂ ಅಭಿಮಾನವನ್ನು ಇಟ್ಟುಕೊಳ್ಳಬೇಕಾಗಿದೆ ಎಂದು ಬಸವರಾಜ್ ಪಾಟೀಲ್ ಸೇಡಂ ಅವರು ಹೇಳಿದರು.

ಬ್ರಿಟೀಷ್‌ ಭಾಷೆಯು ಇಂದು ನಮ್ಮನ್ನು ನುಂಗಿ ಹಾಕುತ್ತಿದೆ. ಇದನ್ನು ಸಮರ್ಥವಾಗಿ ನಿಭಾಯಿಸಲು ಉತ್ತಮ ನಾಯಕನ ಅವಶ್ಯಕತೆಯಿದೆ. ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ವಾರದಲ್ಲಿ ಕನಿಷ್ಟ ೨ ದಿನವಾದರೂ ಕನ್ನಡ ಮಾತನಾಡಬೇಕಾಗಿದೆ. ಕನ್ನಡ ಭಾಷೆಗೆ ಸ್ವತಂತ್ರ ಬೇಕಾಗಿದೆ. ಎಂದು ಬಿಕೆಜಿ ಸಮೂಹ ಸಂಸ್ಥೆಗಳ ವತಿಯಿಂದ ಆಯೋಜಿಸಿದ್ದ, 67ನೇ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಮಾರಂಭವನ್ನು ಉದ್ದೇಶಿಸಿ ತಮ್ಮ ಅಭಿಪ್ರಾಯವನ್ನು ಬಸವರಾಜ ಪಾಟೀಲ್‌ ಸೇಡಂ ರವರು ವ್ಯಕ್ತಪಡಿಸಿದರು.

ಬಸವರಾಜ ಪಾಟೀಲ ಸೇಡಂ ಅವರು ಸಾಂಸ್ಕೃತಿಕ ಸಂಘಟನೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಆಕರ್ಷಿತರಾದವರು. ಸಂಸತ್ತಿನ ಸದಸ್ಯ 3 ಏಪ್ರಿಲ್ 2012 – 2 ಏಪ್ರಿಲ್ 2018. ಸದಸ್ಯ- ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಗುಲ್ಬರ್ಗ, ಕಾರ್ಯದರ್ಶಿ- ಶ್ರೀ ಕೊತ್ತಲ ಬಸವೇಶ್ವರ ದೇವಸ್ಥಾನ ಟ್ರಸ್ಟ್ . ಮುಖ್ಯ ಸಂಯೋಜಕರು – ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ವಿಭಾಗ.
ಸ್ಥಾಪಕ ಸದಸ್ಯ : ನೃಪತುಂಗ ಅಧ್ಯಯನ ಕೇಂದ್ರ, ಸೇಡಂ. ಇನ್ನು ಅನೇಕ ಸಾಮಾಜಿಕ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ.
ಇದೆ ಸಮಾರಂಭದಲ್ಲಿ ಉಪಸ್ಥಿತರಿದ್ದ ಸಂಡೂರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೈಲೇಶ್‌ ಎಚ್‌ ಬೇವೂರ್ ರವರು ಮಾತನಾಡಿ ಕನ್ನಡದ ಉಳಿವಿಗಾಗಿ ಕವಿಗಳ ಪಾತ್ರ ಮಹತ್ತರವಾದುದು, ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ. ಕನ್ನಡ ಭಾಷಾ ಆಚರಣೆ ಭಾಷೆಗಷ್ಟೆ ಸೀಮಿತವಲ್ಲದೆ, ಸಾಂಸ್ಕೃತಿಕ ಆಚರಣೆಯಾಗಿದೆ. ಮಗು ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಕನ್ನಡ ಭಷೆಯಲ್ಲಿಯೇ ಅಭ್ಯಸಿಸುವುದು ಅತೀ ಅವಶ್ಯಕವೆಂದು ಹೇಳಿದರು.

ಬಿಕೆಜಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಸದಸ್ಯರಾದ ಬಿ.ನಾಗನಗೌಡರವರು ಮಾತನಾಡಿ ಕನ್ನಡ ಮರೆತರೆ/ಮಾತೃಭಾಷೆಯನ್ನು ಮರೆತರೆ ಸ್ವಂತ ತಾಯಿಯನ್ನು ಮರೆತಂತೆ. ಪ್ರತಿಯೊಬ್ಬರೂ ತಮ್ಮ ಮಾತೃ ಭಾಷೆಯ ಉಳಿವಿಗಾಗಿ ಶ್ರಮಿಸಬೇಕೆಂದು ಕರೆ ನೀಡಿದರು.

ವೇದಿಕೆಯ ಮೇಲೆ ಬಿಕೆಜಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಹಾಗೂ ಬಿಕೆಜಿ ಗ್ಲೋಬಲ್‌ ಶಾಲೆಯ ಪ್ರಾಚಾರ್ಯರು ಉಪಸ್ಥಿತರಿದ್ದರು. ಸಮಸ್ಥ ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು, ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಹಾಜರಿದ್ದರು. ವಿಧ್ಯಾರ್ಥಿನಿ ಸ್ನೇಹ ನಿರೂಪಿಸಿದರು, ಕನ್ನಡ ಶಿಕ್ಷಕರಾದ ಎಂಕಪ್ಪ ಕನ್ನಡ ಸಾಹಿತ್ಯದ ಬಗ್ಗೆ ವಿವರಿಸಿದರು. ವಿಧ್ಯಾರ್ಥಿನಿ ಸಂಜನಪ್ರೀಯ ಸ್ವಾಗತಿಸಿ, ವಿಧ್ಯಾರ್ಥಿನಿ ಅನನ್ಯ ಬಿ ಗೌಡ ವಂದಿಸಿದರು.

LEAVE A REPLY

Please enter your comment!
Please enter your name here