ನಿಯಮಗಳನ್ನು ಉಲ್ಲಂಘನೆ ಮಾಡಿ ಎಸ್.ಡಿ.ಎಂ.ಸಿ ರಚನೆ ಮಾಡುತ್ತಿರುವ ಸಂಡೂರು ಸಾರ್ವಜನಿಕ ಶಿಕ್ಷಣ ಇಲಾಖೆ.

0
163

ಸಂಡೂರು:ಜ:20:-ತಾಲೂಕಿನ ಹಲವು ಅವಧಿ ಮುಗಿದ ಶಾಲೆ ಹಾಗೂ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಎಸ್.ಡಿ.ಎಂ.ಸಿ ಸಮಿತಿಗಳನ್ನು ರಚನೆ ಮಾಡಲು ರಾಜ್ಯ ಸರ್ಕಾರ ಕೆಲ ನಿಯಾಮವಳಿಗಳನ್ನು ತಂದಿದೆ.

ಸರ್ಕಾರಿ ಆದೇಶದಂತೆ
1.ಸರ್ಕಾರದ ಆದೇಶದ ಸಂಖ್ಯೆ : ಇಡಿ 04 ಯೋಸಕ 2017,ಬೆಂಗಳೂರು ದಿನಾಂಕ: 05.01.2018.

2.ಸರ್ಕಾರದ ಆದೇಶದ ಸಂಖ್ಯೆ: ಇಡಿ 230 ಯೋಸಕ 2018, ದಿನಾಂಕ: 18.05 2019.

ಸರ್ಕಾರಿ ಅದೇಶಗಳಲ್ಲಿ ಕರ್ನಾಟಕ ಸರ್ಕಾರವು “ಪ್ರತಿ ಮಗುವೂ ಶಾಲೆಯಲ್ಲಿ ಮತ್ತು ಉತ್ತಮ ಕಲಿಕೆಯೊಂದಿಗೆ” ಎಂಬ ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿಯನ್ನು ಹೊಂದಿರುತ್ತದೆ. ವಿದ್ಯಾರ್ಥಿಗಳು ಉತ್ತಮವಾಗಿ ಕಲಿಯಲು ಸಹಕರಿಸುವಂತೆ ಶಾಲೆಗಳಲ್ಲಿ ಭೋದನ ಪದ್ಧತಿಯನ್ನು ಸುಧಾರಿಸಲು ಕ್ರಮ ತೆಗೆದುಕೊಳ್ಳಬೇಕಾಗಿದೆ. ಈ ದೂರದೃಷ್ಟಿಯ ಹಿನ್ನೆಲೆಯಲ್ಲಿ ಶಿಕ್ಷಕರು ಮತ್ತು ಇತರ ಸಂಪನ್ಮೂಲಗಳ ಬಳಕೆಯ ಸಮರ್ಪಕತೆಯನ್ನು ಸುಧಾರಿಸಲು, ಒಂದೇ ಬೌಗೋಳಿಕ ಸ್ಥಳಗಳಲ್ಲಿ ಅಸ್ತಿತ್ವದಲ್ಲಿರುವ ಶಾಲೆಗಳನ್ನು ಆಡಳಿತಾತ್ಮಕ ಶೈಕ್ಷಣಿಕ ಮತ್ತು ಕ್ರಿಯಾತ್ಮಕ ಸಂಯೋಜನೆಯೊಂದಿಗೆ ಒಟ್ಟುಗೂಡಿಸಿ 276 ಸಂಯೋಜಿತ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲಾಗಿರುತ್ತದೆ.

ನಮಗೂ ನಿಮಗೆಲ್ಲಾ ಗೊತ್ತಿರುವಂತೆ ಸಾಮಾನ್ಯವಾಗಿ ಶೈಕ್ಷಣಿಕ ಆರಂಭದ ಅಂದ್ರೆ ಜೂನ್ ತಿಂಗಳಿನಲ್ಲಿ ಪ್ರಾರಂಭವಾಗಿ ತರಗತಿಗಳಿಗೆ ಮಕ್ಕಳನ್ನು ಜುಲೈ ಅಂತ್ಯದವರೆಗೂ ದಾಖಲಾತಿಗಳನ್ನು (ಅಡ್ಮಿಷನ್) ಮಾಡಿಕೊಂಡು ಅನಂತರ ಮಕ್ಕಳ ಹಾಗೂ ಪೋಷಕರ ಪಟ್ಟಿಯನ್ನು ತೆಗೆದುಕೊಂಡು ಪೋಷಕರ ಸಭೆಯನ್ನು ಎಸ್.ಡಿ.ಎಂ.ಸಿ ರಚನೆ ಮಾಡುವುದು ನಿಯಮ, ಆದ್ರೆ ಸಂಡೂರು ತಾಲೂಕಿನ ಬಂಡ್ರಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್) ಯಲ್ಲಿ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು
ನಿಯಮಗಳನ್ನು ಗಾಳಿಗೆ ತೂರಿ ಎಸ್ಡಿಎಂಸಿ ರಚನೆ ಮಾಡಲು ಹೊರಟಿರುವುದು ಯಾವ ನಿಯಮ.

ಸಂಡೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಾ. ಐ.ಆರ್.ಅಕ್ಕಿ ಯವರೇ ತಮ್ಮ ಶಿಕ್ಷಕ ಸಿಬ್ಬಂದಿ ವರ್ಗದವರಿಗೆ..

1.ನಿಯಾನನುಸಾರ ಶೈಕ್ಷಣಿಕ ಆರಂಭದ ದಿನಗಳಲ್ಲಿ ಎಸ್ಡಿಎಂಸಿ ರಚನೆ ಮಾಡಲು ಅಂತ್ಯದ ದಿನಗಳಲ್ಲಿ ಅಲ್ಲ ಎಂದು ತಿಳಿಸಿ

2.ಕೋವಿಡ್-19,ರ 3ನೇ ಅಲೆಯು ದಿನದಿಂದ ದಿನಕ್ಕೆ ಶಾಲೆಗಳಲ್ಲಿ ಹೆಚ್ಚುತ್ತಿರುವುದು ಹಾಗೂ ಮಕ್ಕಳ, ಪೋಷಕರ ಆರೋಗ್ಯ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಎಸ್ಡಿಎಂಸಿ ರಚನೆ ಮಾಡಿ ಈ ಸಂದಿಗ್ದ ದಿನಗಳಲ್ಲಿ ಅಲ್ಲ ಎಂದು ತಿಳಿಸಿ.

3.ಎಸ್ಡಿಎಂಸಿ ರಚನೆ ಮಾಡುವಾಗ ಮಕ್ಕಳು ಹಾಗೂ ಪೋಷಕರು ಸದ್ಯ ಊರಿನಲ್ಲಿ ಇದ್ದಾರೆಯೇ, ಎಂಬುದನ್ನು ಮೊದಲು ಖಾತ್ರಿ ಪಡಿಸಿಕೊಂಡಿದ್ದೀರಾ ಇಲ್ಲ ಶಾಲೆಯ ಹಾಜರಾತಿಯ 60% ಮಕ್ಕಳು ತಮ್ಮ ತಂದೆ ತಾಯಿಯರೊಂದಿಗೆ ಜೀವನೋಪಾಯಕ್ಕಾಗಿ ದೂರದ ಮಲೆನಾಡಿನ ಕಾಪಿ ಎಸ್ಟೇಟ್ ಗಳಿಗೆ ಕಳೆದ ವರ್ಷದ ನವಂಬರ್ ತಿಂಗಳಲ್ಲಿ ಹೋಗಿದ್ದಾರೆ, ಪೋಷಕರ ಸಭೆಯಲ್ಲಿ ಮಕ್ಕಳ ತಂದೆ-ತಾಯಿಯರು ಪೋಷಕರು ಇರುವುದು ಕಡ್ಡಾಯ ಎಂದು ಮೊದಲು ತಿಳಿಸಿ

ಈಗಾಗಲೇ ಹದಿನೈದು ಇಪ್ಪತ್ತು ದಿನಗಳಿಂದ ಸಂಡೂರು ತಾಲೂಕಿನ ಕೆಲ ಶಾಲೆಗಳ ಮುಖ್ಯೋಪಾಧ್ಯಾಯರುಗಳು ಎಸ್ಡಿಎಂಸಿ ನಿಯಮಗಳನ್ನು ಉಲ್ಲಂಘನೆ ಮಾಡಿ ರಚನೆಯನ್ನು ಮಾಡಿದ್ದಾರೆ, ಅವರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ,ಅಥವಾ ಯಾರ ಹಾಗೂ ಯಾವ ರಾಜಕೀಯ ಪಕ್ಷಗಳ ಮುಖಂಡರ ಒತ್ತಡಕ್ಕೆ ಮಣಿದು ನಿಯಮಗಳನ್ನು ಗಾಳಿಗೆ ತೂರಿ ಎಸ್ಡಿಎಂಸಿ ರಚನೆ ಮಾಡಲು ಅನುಮತಿ ನೀಡಿದ್ದೀರಿ. ಇನ್ನು ಒಂದು ತಿಂಗಳು ಕಳೆಯುದರಲ್ಲಿ ವಾರ್ಷಿಕ ಪರೀಕ್ಷೆಗಳು ಬರುತ್ತವೆ ಅವುಗಳಿಗೆ ವಿದ್ಯಾರ್ಥಿಗಳನ್ನು ವಿಷಯವಾರು ಅಣಿ ಗೊಳಿಸುವುದರಲ್ಲಿ ಹೆಚ್ಚಿನ ಉತ್ಸಾಹ, ಆಸಕ್ತಿ,ತೋರಿಸುವುದು ಬಿಟ್ಟು ಪ್ರತಿನಿತ್ಯ ಶಾಲಾ ಸಮಯದಲ್ಲಿ ಎಸ್ಡಿಎಂಸಿ ರಚನೆ ಮಾಡುವುದರಲ್ಲಿ ಹೆಚ್ಚಿನ ಆಸಕ್ತಿ ತೋರಿಸುವುದರ ನಿಗೂಢ ರಹಸ್ಯ ಏನು..!?

LEAVE A REPLY

Please enter your comment!
Please enter your name here