ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯ ವಿಶೇಷ ಪರಿಷ್ಕರಣೆ-2022

0
192

ಕೊಟ್ಟೂರು: ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2022ರ ಸಂಬಂಧ ಕರಡು ಮತದಾರರ ಪಟ್ಟಿಯನ್ನು ದಿನಾಂಕ: 09.11.2022 ರಂದು ಸಂಬಂಧಿಸಿದ ಎಲ್ಲಾ ಮತಗಟ್ಟೆಗಳಲ್ಲಿ ಪ್ರಚುರಪಡಿಸಲಾಗಿದೆ. ಈ ಕುರಿತು ಮತದಾರರಲ್ಲಿ ಜಾಗೃತಿ ಅರಿವು ಮೂಡಿಸುವ ಸಲುವಾಗಿ ಕೊಟ್ಟೂರು ಪಟ್ಟಣದಲ್ಲಿ ಕೊಟ್ಟೂರೇಶ್ವರ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು, ವಿದ್ಯಾರ್ಥಿಗಳು, ಎನ್.ಎಸ್.ಎಸ್. ವಿದ್ಯಾರ್ಥಿಗಳು, ವಿವಿಧ ಕಾಲೇಜಿನ ಎಲೆಕ್ರೋ ಲಿಟ್ರಸ್ಸಿ ಕ್ಲಬ್ ಸದಸ್ಯರು ಸೇರಿ ವಿವಿಧ ಘೋಷವಾಕ್ಯಗಳ ಫಲಕಗಳನ್ನು ಪ್ರದರ್ಶಿಸುತ್ತಾ, ಘೋಷಣೆಗಳೊಂದಿಗೆ ಮತದಾರರಲ್ಲಿ ಜಾಗೃತಿಯನ್ನು ಮೂಡಿಸಲಾಯಿತು.

ಮತದಾರರು ತಮ್ಮ ತಮ್ಮ ಮತಗಟ್ಟೆಗಳಿಗೆ ಭೇಟಿ ನೀಡಿ ತಮ್ಮ ಹಾಗೂ ತಮ್ಮ ಕುಟುಂಬದ ಸದಸ್ಯರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿರವ ಬಗ್ಗೆ ಪರಿಶೀಲಿಸಿ ಖಚಿತಪಡಿಸಿಕೊಳ್ಳಲು ಹಾಗೂ ಹೊಸದಾಗಿ ಸೇರ್ಪಡೆ ಮಾಡುವ ಯುವ ಮತದಾರರು ಹೆಸರುಗಳನ್ನು ಸೇರ್ಪಡೆ ಮಾಡಲು, ತಪ್ಪಾಗಿರುವುದನ್ನು ತಿದ್ದುಪಡಿ ಮಾಡಲು, ಬೇರೆಡೆಗೆ ವರ್ಗಾವಣೆ ಮಾಡಲು ಹಾಗೂ ರದ್ದುಪಡಿಸುವ ಕಾರ್ಯವು ಸಹಾ ಪ್ರಾರಂಭವಾಗಿದ್ದು, ಈ ಸಂಬಂಧ ಅಗತ್ಯ ದಾಖಲೆಗಳನ್ನು ಸಂಬಂಧಪಟ್ಟ ಮತಗಟ್ಟೆ ಅಧಿಕಾರಿಗಳಿಗೆ (ಬಿಎಲ್ಒ) ನೀಡಿ ಸದರಿ ಸೌಲಭ್ಯ ಪಡೆಯಬಹುದಾಗಿದೆ ಎಂದು ತಹಶೀಲ್ದಾರರಾದ ಎಂ ಕುಮಾರಸ್ವಾಮಿಯವರು ಕೊಟ್ಟೂರು ತಾಲೂಕಿನ ವ್ಯಾಪ್ತಿಯ ಮತದಾರರಿಗೆ ತಿಳಿಸಿರುತ್ತಾರೆ.

ಮತದಾರರ ಪಟ್ಟಿ ವಿಶೇಷ ಅಭಿಯಾನವು ದಿನಾಂಕ: 12.11.2022ರ ಶನಿವಾರ, 20.11.2022ರ ಭಾನುವಾರ, 03.12.2022ರ ಶನಿವಾರ ಮತ್ತು 04.12.2022ರ ಭಾನುವಾರದಂದು ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ಇದ್ದು, ಎಲ್ಲಾ ಮತದಾರರು ಈ ಸದುಪಯೋಗವನ್ನು ಪಡೆಯಬಹುದಾಗಿದೆ.

ಜಾಥದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಭಾರತಿ ಸುಧಾಕರ ಪಾಟೀಲ್, ಪ.ಪಂ.ಸದಸ್ಯರಾದ ಶೈಲಜಾ ರಾಜೀವ್, ಪಕ್ಕೀರಪ್ಪ ಹಾಗೂ ಇತರರು, ಕಾರ್ಯನಿರ್ವಾಹಕ ಅಧಿಕಾರಿ ಬೆಣ್ಣಿ ವಿಜಯಕುಮಾರ್, ಪ.ಪಂ. ಮುಖ್ಯಾಧಿಕಾರಿ ನಸರುಲ್ಲಾ, ಕೊಟ್ಟೂರೇಶ್ವರ ಕಾಲೇಜಿನ ಪ್ರಾಚಾರ್ಯರಾದ ಶಾಂತಮೂರ್ತಿ ಬಿ ಕುಲಕರ್ಣಿ, ಸರ್ಕಾರಿ ಪಪೂ ಕಾಲೇಜಿನ ಪ್ರಾಚಾರ್ಯರಾದ ಸೋಮಣ್ಣ, ಪ್ರಶಾಂತ, ಉಪನ್ಯಾಸಕರಾದ ಕುಸುಮ ಸಜ್ಜನ್, ತಾಲೂಕು ಸ್ಪೀಪ್ ಅಧಿಕಾರಿ ಶಶಿಧರ ಮೈದೂರು, ಶಿಕ್ಷಕರಾದ ಗೋಣಿಬಸಪ್ಪ, ಶಶಿಕ್ಷಣ ಇಲಾಖೆ ಇಸಿಒ ಅಜ್ಜಪ್ಪ ಸಿ, ತಾಲೂಕಿನ ಎಲ್ಲಾ ಸಿ ಆರ್ ಪಿ ಗಳು, ಚುನಾವಣೆ ಸಿಬ್ಬಂದಿಯಾದ ಡಿ ಶಿಕುಮಾರ್. ಸಿ.ಮ.ಗುರುಬಸವರಾಜ ಹಾಗೂ ಇತರರು ಇದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here