ಕೃಷಿ ವಿಮೆಗೆ ಹಣ ಕಟ್ಟಿದ್ದರೂ ಪ್ಯೂಚರ್ ಜನರಲ್ ವಂಚನೆ ಮಾಡುತ್ತಿದೆ; ಗ್ರಾಮೀಣ ಶಾಸಕ ಬಿ.ನಾಗೇಂದ್ರ

0
73

ಬಳ್ಳಾರಿಯ ಗ್ರಾಮೀಣ ಕ್ಷೇತ್ರದ ಹಗರಿಯ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಹಗರಿಯ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಸಂಶೋಧನಾ ಕೇಂದ್ರ, ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಗರಿಯ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ರೈತರ ವಸತಿ ನಿಲಯ ನಿರ್ಮಾಣದ ಅಡಿಗಲ್ಲಿಗೆ ಭೂಮಿ ಪೂಜೆಯನ್ನು ಬಳ್ಳಾರಿ ಗ್ರಾಮಾಂತರ ಜನಪ್ರಿಯ ಶಾಸಕರಾದ ಶ್ರೀ ಬಿ.ನಾಗೇಂದ್ರ ಅವರು ಸಚಿವೆ ಶೋಭಾ ಕರಂದ್ಲಾಜೆ ಅವರೊಂದಿಗೆ ನೆರವೇರಿಸಿದರು.

ಬಳ್ಳಾರಿ ಗ್ರಾಮೀಣ ಶಾಸಕರಾದ ಬಿ.ನಾಗೇಂದ್ರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಕೃಷಿ ಪದ್ಧತಿಯು ಪ್ರಪಂಚವು ಭಾರತದತ್ತ ನೋಡುವಂತೆ ಮಾಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ರೂಪಿಸಿದೆ ಎಂದು ತಿಳಿಸಿದರು. ಬಳ್ಳಾರಿ ಮತ್ತು ಆಂಧ್ರ ಗಡಿ ಭಾಗದಲ್ಲಿರುವ ಈ ಕೃಷಿ ವಿಜ್ಞಾನ ಕೇಂದ್ರವು 550 ಎಕರೆ ಜಮೀನು ವ್ಯಾಪ್ತಿಯಲ್ಲಿದೆ. ಸಂಶೋಧನೆ ಮಾಡಲು ಅತಿ ಹೆಚ್ಚು ವಿಶಾಲವಾದ ಜಾಗ ಹೊಂದಿದ್ದು, ಈ ಭಾಗದ ಕೃಷಿ ವಿದ್ಯಾರ್ಥಿಗಳಿಗೆ ಮತ್ತು ಸಂಶೋಧಕರಿಗೆ ಉಪಯುಕ್ತವಾಗಿದೆ ಎಂದರು.

ಹಗರಿ ಕೃಷಿ ವಿದ್ಯಾಲಯಕ್ಕೆ ಕೆಕೆಆರ್‌ಡಿಬಿ ಅನುದಾನದಲ್ಲಿ 20ಕೋಟಿ ರೂ. ಅನುದಾನ ಮಂಜೂರಾಗಲಿದೆ. ಅದರಲ್ಲಿ 9 ಕೋಟಿ ರೂ. ವೆಚ್ಚದಲ್ಲಿ ಸಂಶೋಧನಾ ಕೇಂದ್ರದ ಕಟ್ಟಡ, 11 ಕೋಟಿ ರೂ. ವೆಚ್ಚದಲ್ಲಿ ರಸ್ತೆ, ಲ್ಯಾಬ್ ಹಾಗೂ ಸುಮಾರು 1.25ಲಕ್ಷ ವೆಚ್ಚದಲ್ಲಿ ಕೃಷಿಕರ ವಿಕಾಸ ಕೇಂದ್ರ ನಿರ್ಮಾಣವಾಗಲಿವೆ ಎಂದು ತಿಳಿಸಿದರು.

ತಾಲೂಕಿನಲ್ಲಿ ಕೃಷಿ ವಿಮೆಗೆ ಹಣ ಕಟ್ಟಿದ್ದರೂ ಪ್ಯೂಚರ್ ಜನರಲ್ ವಂಚನೆ ಮಾಡುತ್ತಿದೆ. ಅಧಿಕಾರಿಗಳ ಕುಮ್ಮಕ್ಕಿನಿಂದ ಈ ರೀತಿ ಮಾಡುತ್ತಿದೆ. ಈ ಬಗ್ಗೆ ಕ್ರಮ ಜರುಗಿಸಬೇಕು ಎಂದು ಶಾಸಕ ಬಿ.ನಾಗೇಂದ್ರ ಅವರು ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಕೋರಿದರು.

ಮಾನ್ಯ ಶಾಸಕರ ಬಿ.ನಾಗೇಂದ್ರ ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿದ ಸಚಿವೆ ಶೋಭಾ ಕರಂದ್ಲಾಜೆ ಅವರು ರಾಜ್ಯ ಸರ್ಕಾರದ ಕೃಷಿ ಸಚಿವರು ಹಾಗೂ ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ. ರಾಜ್ಯ ಸರ್ಕಾರ ಜನರಿಗೆ ಮೋಸ ಮಾಡಿದ ಪ್ಯೂಚರ್ ಜನರಲ್ ಕಂಪನಿಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಆ ಕಂಪನಿಯನ್ನು ಬ್ಲಾಕ್ ಲಿಸ್ಟ್ ಗೆ ಹಾಕುವುದು ರಾಜ್ಯ ಸರ್ಕಾರ ಖಂಡಿತವಾಗಿ ನಾನು ರಾಜ್ಯ ಸರ್ಕಾರದ ಜೊತೆ ಮಾತನಾಡುತ್ತೇನೆ ಎಂದು ಎಲ್ಲಾ ರೈತರಿಗೆ ಭರವಸೆ ಕೊಡುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಪೋಷಕಾಂಶ ಭದ್ರತೆಗಾಗಿ ಸಿರಿಧಾನ್ಯಗಳು ಮತ್ತು “ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯ ಪಾತ್ರದ ಕುರಿತು ವಿಚಾರಣಾ ಸಂಕಿರಣ ನಡೆಯಿತು. ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಕೃಷಿ ಪರಿಕರಗಳ ವಸ್ತು ಪ್ರದರ್ಶನಗಳು ಇದ್ದವು.

ಈ ಸಂದರ್ಭದಲ್ಲಿ ಸಚಿವೆ ಶೋಭಾ ಕರಂದ್ಲಾಜೆ, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು, ಸಂಸದರಾದ ಕರಡಿ ಸಂಗಣ್ಣ, ದೇವೇಂದ್ರಪ್ಪ, ಶಾಸಕ ಜಿ.ಸೋಮಶೇಖರ ರೆಡ್ಡಿ, ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಗುತ್ತಿಗನೂರು ವಿರುಪಾಕ್ಷಗೌಡ, ಬುಡಾ ಅಧ್ಯಕ್ಷ ಮಾರುತಿ ಪ್ರಸಾದ್, ಜನಪ್ರಿಯ ನಾಯಕರು ಬಿ.ವೆಂಕಟೇಶ್ ಪ್ರಸಾದ್, ಮಾಜಿ ಸಂಸದೆ ಜೆ.ಶಾಂತಾ, ಪರಮದೇವನಹಳ್ಳಿ ಗ್ರಾಪಂ ಅಧ್ಯಕ್ಷ ಸೋಮಲಿಂಗ, ಜಿಲ್ಲಾಧಿಕಾರಿ ಪವನ್‌ ಕುಮಾರ್ ಮಾಲಪಾಟಿ, ಜಿಪಂ ಸಿಇಒ ಲಿಂಗಮೂರ್ತಿ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎಂ.ಹನುಮಂತಪ್ಪ, ಐಸಿಎಆ‌ರ್ ಕೃಷಿ ತಂತ್ರಜ್ಞಾನ ಅನ್ವಯಿಕ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ.ವಿ.ವೆಂಕಟ ಸುಬ್ರಮಣ್ಯಂ, ಶಿಕ್ಷಣ ನಿರ್ದೇಶಕರಾದ ಡಾ.ಎಂ.ಜಿ.ಪಾಟೀಲ್‌, ವಿಸ್ತರಣಾ ನಿರ್ದೇಶಕರಾದ ಡಾ .ಎಂ.ಕೆ.ನಾಯ್ಕ, ಹಗರಿಯ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ.ರಮೇಶ್ ಬಿ.ಕೆ, ಹಗರಿಯ ಕೃಷಿ ಸಂಶೋಧನಾ ಕೇಂದ್ರದ ಆವರಣದ ಮುಖ್ಯಸ್ಥರಾದ ಡಾ.ರವಿಶಂಕರ್.ಜಿ. ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ಕೆ.ಮಲ್ಲಿಕಾರ್ಜುನ ಕಾಂಗ್ರೆಸ್ ಪಕ್ಷದ ಮುಖಂಡರಾದ ಸಿಂಧುವಾಳ್ ಗಾದಿಲಿಂಗನಗೌಡ, ಬಿ.ಆರ್.ಎಲ್. ಸೀನಾ, ಯರ್ರಗುಡಿ ಮುದಿ ಮಲ್ಲಯ್ಯ, ಹಗರಿ ಗೋವಿಂದ, ಗೋನಾಳ್ ನಾಗಭೂಷಣ ಗೌಡ, ಯಾಳ್ಪಿ ದಿವಾಕರ್ ಗೌಡ ಸೇರಿದಂತೆ ರೈತರು ಮತ್ತು ಕೃಷಿ ವಿವಿಯ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಮತ್ತು ರೈತರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here