ಸಂಡೂರು ತಾಲೂಕಿನಲ್ಲಿ ನಿರೀಕ್ಷೆಗೂ ಮೀರಿ ಕೋವಿಡ್ ಲಸಿಕೆ ಹಾಕಿಸಿಕೊಂಡ ಸಾರ್ವಜನಿಕರು.

0
219

ಸಂಡೂರು ತಾಲೂಕಿ ಹಲವು ಗ್ರಾಮ ಪಂಚಾಯಿತಿಗಳಲ್ಲಿ ದಿನಾಂಕ 22.06.2021 ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಕೇಂದ್ರ ಸರ್ಕಾರದ ಆದೇಶದಂತೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವ ಉದ್ದೇಶದಿಂದ ಯೋಗ ದಿನಾಚರಣೆಯಂದು ಸಂಡೂರು ತಾಲೂಕಿಗೆ 6100 ಜನರಿಗೆ ಲಸಿಕೆ ಹಾಕಲು ಹದಿನೈದು ಸ್ಥಳಗಳನ್ನು ಗುರುತಿಸಿ ವ್ಯವಸ್ಥಿತ ಗೊಳಿಸಿಕೊಂಡು ಆದೇಶದಂತೆ
ನಮಗೆ ಕೊಟ್ಟಿರುವ ಗುರಿ ಮೀರಿ 7536 ಜನರಿಗೆ ಕೋವಿಡ್​-19 ಮೊದಲ ಡೋಸ್ ಲಸಿಕೆ ನೀಡಲಾಗಿದೆ,

ಸಂಡೂರು ಪಟ್ಟಣದಲ್ಲಿ- 1473,
ಬಂಡ್ರಿ- 277, ಚೋರುನೂರು-269, ಮೆಟ್ರಿಕಿ-98, ಭುಜಂಗನಗರ-349, ನರಸಾಪುರ-660, ತಾರಾನಗರ-250, ಬನ್ನಿಹಟ್ಟಿ-275, ವಡ್ಡು-490, ತಾಳೂರು-302, ಕುರೇಕುಪ್ಪ-430, ತೋರಣಗಲ್ಲು-780, ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದಲ್ಲಿ-572, ಬೊಮ್ಮಘಟ್ಟ-281 ಡಿ ಅಂತಾಪುರ-189, ಸುಶೀಲನಗರ-261, ಯಶವಂತ ನಗರ-268, ವಿಠಲಾಪುರ- 108 ಜನರಿಗೆ ಲಸಿಕೆ ಹಾಕಲಾಗಿದೆ

ಮಾನ್ಯ ತಹಶಿಲ್ದಾರರಾದ ಹೆಚ್.ಜೆ ರಶ್ಮಿ ಅವರು ಮೇಲ್ವಿಚಾರಣೆಯನ್ನು ವಹಿಸಿದ್ದರು, ತಾಲೂಕು ಆರೋಗ್ಯಾಧಿಕಾರಿ ಡಾ.ಕುಶಾಲ್ ರಾಜ್ ಎಲ್ಲಾ ಲಸಿಕಾ ಕೇಂದ್ರಗಳ ಮಾನಿಟರಿಂಗ್ ಮಾಡಿದರು,
ಡಾ.ಗೋಪಾಲ್ ರಾವ್, ಡಾ.ನವೀನ್ ಕುಮಾರ್,ಡಾ.ಶಾಷವಲಿ, ಡಾ.ಭರತ್ ಕುಮಾರ್,ಡಾ.ಹರೀಶ್, ಡಾ.ಚಂದ್ರಪ್ಪ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ , ವೀರಬಸಮ್ಮ, ರೇಣುಕಾ, ಎರ್ರಿಸ್ವಾಮಿ, ವಿಜಯಶಾಂತಿ, ವೆಂಕಟ ಲಕ್ಷ್ಮಿ, ಶ್ರೀದೇವಿ, ಮಂಜುಳಾ ಇತರರು ಭಾವಹಿಸಿದ್ದರು

LEAVE A REPLY

Please enter your comment!
Please enter your name here