ಭಾರತ ದಾಖಲೆಗೆ ಸೇರಿದ ಮೋಹನ್ ಕುಮಾರ್, ಮುಖ್ಯ ಮಂತ್ರಿಯಿಂದ ಪ್ರಮಾಣ ಪತ್ರ ಪ್ರಧಾನ,

0
464

ಬೆಂಗಳೂರು: ದಿ 18, ರಂದು ಮುಖ್ಯ ಮಂತ್ರಿಗಳ ಗೃಹಕಛೇರಿಯಲ್ಲಿ ಮತದಾನ ಜಾಗೃತಿಗಾಗಿ ನವದೆಹಲಿಯಲ್ಲಿ 3 ಗಂಟೆಗಳ ಕಾಲ ವಿನೂತನ ಮ್ಯಾರಥಾನ್ ಓಟ ನಡೆಸಿ ಭಾರತ ದಾಖಲೆ ಮಾಡಿದ ಬಳ್ಳಾರಿ ಜಿಲ್ಲೆಯ ಕಂಪ್ಲಿ ನಿವಾಸಿ ಬೆಂಗಳೂರಿನ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಮೋಹನ್ ಕುಮಾರ್‌ ದಾನಪ್ಪರವರಿಗೆ ರಾಜ್ಯದ ಮುಖ್ಯ ಮಂತ್ರಿಗಳಾದ ಬಸವರಾಜ್ ಬೊಮ್ಮಾಯಿಯವರು ಭಾರತ ದಾಖಲೆ ಪುಸ್ತಕ ಪ್ರಮಾಣ ಪತ್ರ ಪ್ರಧಾನ ಮಾಡಿದರು.

ಸೆಪ್ಟೆಂಬರ್ 17 ರಂದು ದೇಶದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ 72ನೇ ಜನ್ಮ ದಿನದ ಅಂಗವಾಗಿ “ಮತದಾನ ನಮ್ಮ ಹಕ್ಕು, ಮತದಾನ ನಮ್ಮ ಕರ್ತವ್ಯ”ದ ಜಾಗೃತಿಗಾಗಿ ಬೆಂಗಳೂರು ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಡಾ.ಮೋಹನ್ ಕುಮಾರ್ ದಾನಪ್ಪನವರು ನವದೆಹಲಿಯಲ್ಲಿ ಬಲಗೈನಲ್ಲಿ ರಾಷ್ಟ್ರಧ್ವಜ ಎಡಗೈನಲ್ಲಿ ನಾಡ ಧ್ವಜ ಹಿಡಿದು ಕರ್ನಾಟಕ ಭವನದಿಂದ ಕೆಂಪುಕೋಟೆವರೆಗೂ ಸತತ 3 ಗಂಟೆ 22 ನಿಮಿಷಗಳ ಕಾಲ ತಡೆರಹಿತವಾಗಿ 28.43 ಕಿಲೋ ಮೀಟರ್ ವಿನೂತನ ಮ್ಯಾರಾಥಾನ್ ಓಟವು ಭಾರತ ದಾಖಲೆಗೆ ಸೇರಿರುವುದು ಶ್ಲಾಘನೀಯ

ಮೋಹನ್ ಕುಮಾರ್ ದಾನಪ್ಪನವರು ಕೇಂದ್ರ ಸರ್ಕಾರಿ ವಕೀಲರಾಗಿ ಬಿಡುವಿಲ್ಲದ ಸೇವೆಯ ನಡುವೆಯು ನಿಮ್ಮ ಕ್ರೀಡಾ ಪ್ರೇಮ, ಸಾಮಾಜಿಕ ಕಾಳಜಿ, ಯುವ ಸಮೂಹವನ್ನು ಎಚ್ಚರಿಸುವ ನಿಮ್ಮ ಈ ಕೌಶಲ್ಯದ ಪ್ರಯತ್ನಗಳು ರಾಜ್ಯದ ಜನರಿಗೆ ಮತ್ತು ಸರ್ಕಾರಿ ವಲಯಕ್ಕೆ ಮಾದರಿಯಾಗಿದೆ ಹಾಗೂ ರಾಜ್ಯದ ವಕೀಲ ಸಮೂಹಕ್ಕೆ ಕೀರ್ತಿ ತಂದಿರುತ್ತದೆ.

ರಾಷ್ಟ್ರದ ರಾಜಧಾನಿಯಲ್ಲಿ ರಾಷ್ಟ್ರಧ್ವಜ ಹಾಗೂ ಕನ್ನಡ ಧ್ವಜ ಹಿಡಿದು ನಡೆಸಿದ ನಿಮ್ಮ ಜಾಗೃತಿ ಓಟವು ದೇಶ ಪ್ರೇಮ, ಕನ್ನಡ ಪ್ರೇಮವನ್ನು ಎತ್ತಿ ತೋರುತ್ತಿದೆ. ಹೀಗೆ ಇಂತಹ ಸಮಾಜಮುಖಿ ಕಾರ್ಯಗಳನ್ನು ನಡೆಯುತ್ತಿರುವುದು ಸಂತಸ ತಂದಿದೆ, ತಾವು ಇನ್ನಷ್ಟು ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಾಜ್ಯದ ಕೀರ್ತಿ ಇನ್ನಷ್ಟು ಎತ್ತರಕ್ಕೆ ಎರುವಂತಾಗಲಿ ಎಂದು ಮುಖ್ಯ ಮಂತ್ರಿಗಳಾದ ಬಸವರಾಜ್ ಬೊಮ್ಮಾಯಿಯವರು ಅಭಿನಂದಿಸಿದರು.

LEAVE A REPLY

Please enter your comment!
Please enter your name here