ಸಂಡೂರು ತಾಲೂಕಿನ ವಿವಿದೆಡೆ 19 ಹಾಗೂ 20 ಎರಡು ದಿನಗಳ ಕಾಲ ಬಸ್ ಗಳ ಸಂಚಾರದಲ್ಲಿ ವ್ಯತ್ಯಯ

0
831

ಸಂಡೂರು:ನ:18:-ಬಿಜೆಪಿ ಪಕ್ಷದಿಂದ ಹಮ್ಮಿಕೊಂಡಿರುವ ರಾಜ್ಯಮಟ್ಟದ “ಎಸ್ಟಿ ಸಮಾವೇಶ”ದ ಕಾರ್ಯಕ್ರಮವು ದಿನಾಂಕ:20.11.2022 ರಂದು ಬಳ್ಳಾರಿ ಜಿಲ್ಲೆಯ ಬಳ್ಳಾರಿ ನಗರದಲ್ಲಿ ನಡೆಯಲಿದ್ದು
ಕಾರ್ಯಕ್ರಮಕ್ಕೆ ರಾಜ್ಯದ ಹಲವು ಜಿಲ್ಲೆಗಳಿಂದ ಪಕ್ಷದ ಕಾರ್ಯಕರ್ತರು, ಮುಖಂಡರು ಅಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಂಡೂರು ತಾಲೂಕಿನ ಬಸ್ ಡಿಪೋದಿಂದ 50 ಬಸ್ ಗಳನ್ನು ಬಿಜೆಪಿ ಪಕ್ಷವು ಒಪ್ಪಂದದ ಮೇರೆಗೆ ತೆಗೆದುಕೊಂಡಿರುವುದರಿಂದ ಸಂಡೂರು ತಾಲೂಕಿನ ವಿವಿದ ಬಾಗದ ಸಾರ್ವಜನಿಕರಿಗೆ ಸಂಚಾರದಲ್ಲಿ ವ್ಯತ್ಯಯವಾಗುತ್ತದೆ

ಹಾಗೇ ಬಾನುವಾರ 20-11-2022 ರಂದು,ರಾಷ್ಟ್ರೀಯ, ರಾಜ್ಯ ಮುಖಂಡರು ಬಳ್ಳಾರಿಗೆ ಅಗಮಿಸುತ್ತಿದ್ದು ಶನಿವಾರ ರಾತ್ರಿ ಪ್ರತಿ ಹಳ್ಳಿಗಳಿಗೆ ಹೋಗಿ ಜನರನ್ನು ಸಮಾವೇಶಕ್ಕೆ ಕರೆದುಕೊಂಡು ಬರಲು ತಾಲೂಕಿನ ಸಾರಿಗೆ ಘಟಕದಿಂದ 50 ಸಾರಿಗೆ ಬಸ್ ಗಳನ್ನು ಒಪ್ಪಂದದ ಮೇರೆಗೆ ಪಕ್ಷವು ತೆಗೆದುಕೊಂಡಿದ್ದು, ಇದರಿಂದ 19, 20, ನೇ ತಾರೀಖಿನ ದಿನದಂದು ಈ ಎರಡು ದಿನಗಳ ಕಾಲ ರಾತ್ರಿ ಬಸ್ ಸಂಚಾರದಲ್ಲಿ ವ್ಯತ್ಯಯವಾಗುತ್ತದೆ, ಎರಡು ದಿನಗಳ ಕಾಲ
ತಾಲೂಕಿನಾಧ್ಯಂತ ಬಸ್ ಗಳ ಸಂಚಾರದಲ್ಲಿ
ವ್ಯತ್ಯಯವಾಗುತ್ತಿದ್ದು ಹಳ್ಳಿಗಳಲ್ಲಿನ ಜನರು ದಿನನಿತ್ಯದ ಕೆಲಸಗಳಿಗೆ ಹೋಗುವವರಿಗೆ ತೊಂದರೆಯಾಗುತ್ತದೆ.

ಈ ಕಾರಣದಿಂದ ತಾಲೂಕಿನಲ್ಲಿ ವಿವಿದೆಡೆ ಬಸ್ ಸಂಚಾರದಲ್ಲಿ 2 ದಿನಗಳ ಕಾಲ ಸಂಡೂರು ಬಸ್ ಘಟಕದಿಂದ ವಿವಿಧ ಸ್ಥಳಗಳಿಗೆ ತೆರಳುವ ಬಸ್ ಗಳ ದೈನಂದಿನ ಅನುಸೂಚಿಗಳ ಕಾರ್ಯಾಚರಣೆಯಲ್ಲಿ ಪ್ರಯಾಣಿಕರು ಹಾಗೂ ಸಂಡೂರು ತಾಲೂಕಿನ ಶಾಲಾ ಮತ್ತು ಕಾಲೇಜ್ ವಿದ್ಯಾರ್ಥಿಗಳು, ಸಾರ್ವಜನಿಕರು ಸಹಕರಿಸಬೇಕು ಎಂದು ಸಂಡೂರು ಘಟಕ ವ್ಯವಸ್ಥಾಪಕ ವೆಂಕಟೇಶ್ ಅವರು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here