ಪರ್ವ ಮಹಾರಂಗಪ್ರಯೋಗಕ್ಕೆ ಚಾಲನೆ ಎಸ್.ಎಲ್. ಭೈರಪ್ಪನವರ ಸಾಹಿತ್ಯದ ಶಕ್ತಿಯ ಮಹಾಕೃತಿ -ಡಾ.ವೀರಣ್ಣ ರಾಜೂರ

0
79

ಧಾರವಾಡ : ಏ.12: ಕನ್ನಡದ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪನವರ ಪ್ರತಿಭೆಯು ಏಕೀಭವಿಸಿ ಪರ್ವ ಮಹಾಕೃತಿ ಹೊರಬಂದಿದೆ. ಈ ಕೃತಿ ಜಾಗತಿಕ ಮಟ್ಟದ ಮನ್ನಣೆಗೂ ಪಾತ್ರವಾಗಿದೆ ಎಂದು ಸಾಹಿತಿ ಡಾ.ವೀರಣ್ಣ ರಾಜೂರ ಹೇಳಿದರು.

ಮೈಸೂರು ರಂಗಾಯಣವು ಇಲ್ಲಿನ ಸೃಜನಾ ರಂಗಮಂದಿರದಲ್ಲಿ ಏರ್ಪಡಿಸಿರುವ ಎರಡು ದಿನಗಳ “ಪರ್ವ” ಮಹಾರಂಗಪ್ರಯೋಗಕ್ಕೆ ಚಾಲನೆ ನೀಡಿ ಮಾತನಾಡಿದರು.

ಧಾರವಾಡದ ಜನತೆಗೆ ಈ ಕೃತಿಯ ರಂಗರೂಪದ ಪ್ರದರ್ಶನ ನೋಡುವ ಅವಕಾಶ ಸಿಕ್ಕಿರುವುದು ಸಂತಸದ ಸಂಗತಿ. ಬೃಹತ್ ಸಾಹಿತ್ಯ ಕೃತಿಗಳನ್ನು ರಂಗರೂಪಕ್ಕೆ ಅಳವಡಿಸುವ ಸವಾಲಿನ ಕಾರ್ಯವನ್ನು ಮೈಸೂರು ರಂಗಾಯಣ ಯಶಸ್ವಿಯಾಗಿ ನಿರ್ವಹಿಸಿದೆ ಎಂದರು.

ಧಾರವಾಡ ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ್ ಮಾತನಾಡಿ, ರಾಜ್ಯದ ನಾಲ್ಕು ರಂಗಾಯಣಗಳು ನಾಡಿನ ರಂಗಭೂಮಿಗೆ ಮಹತ್ವದ ಕೊಡುಗೆಗಳನ್ನು ನೀಡುವಲ್ಲಿ ಸಕ್ರಿಯವಾಗಿ ತೊಡಗಿಕೊಂಡಿವೆ ಎಂದರು.

ಆಕಾಶವಾಣಿಯ ಉದ್ಘೋಷಕ ಶಶಿಧರ ನರೇಂದ್ರ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ ಮತ್ತಿತರರು ಇದ್ದರು.

ಪ್ರಕಾಶ್ ಬೆಳವಾಡಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಎಂಟು ತಾಸುಗಳ ಸುದೀರ್ಘ ನಾಟಕ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ನಾಳೆ ಏ.13 ರಂದು ಬೆಳಿಗ್ಗೆ 10-30 ಕ್ಕೆ ಎರಡನೇ ಪ್ರಯೋಗವಿದೆ.

LEAVE A REPLY

Please enter your comment!
Please enter your name here