ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಗ್ರಾಮ ವಾಸ್ತವ್ಯ ಸಹಕಾರಿ: ತಹಶೀಲ್ದಾರ್ ಕೆ ಎಂ ಗುರುಬಸವರಾಜ್.

0
80

ಸಂಡೂರು:ನ:19: ಗ್ರಾಮ ವಾಸ್ತವ್ಯದ ವೇಳೆ ಅಧಿಕಾರಿಗಳೇ ಜನರ ಬಳಿ ಬರುವಾಗ, ಜನರು ಸಭೆಗಳಿಗೆ ಹಾಜರಾಗಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ತಹಶೀಲ್ದಾರ್‌ ಕೆಎಂ ಗುರುಬಸವರಾಜ್ ಹೇಳಿದರು.

ಸಂಡೂರು ತಾಲ್ಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ– ಗ್ರಾಮ ವಾಸ್ತವ್ಯ’ ಕಾರ್ಯಕ್ರಮವನ್ನು ಉದ್ಘಾಟಿಸಿ. ನಂತರದಲ್ಲಿ ನಾಗರಿಕರಿಂದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಗ್ರಾಮ ವಾಸ್ತವ್ಯ ಸಹಕಾರಿಯಾಗಿದೆ. ಪ್ರತಿ ತಿಂಗಳು ನಡೆಯುವ ಈ ಕಾರ್ಯಕ್ರಮದಲ್ಲಿ ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ತಹಶೀಲ್ದಾರ್ ಕೆಎಂ ಗುರುಬಸವರಾಜ್ ಹೇಳಿದರು.

ಕಂದಾಯ ಇಲಾಖೆ, ಪಂಚಾಯತ್‌ ರಾಜ್, ಭೂಮಾಪನ, ಜೆಸ್ಕಾಂ, ಅರಣ್ಯ , ಆಹಾರ ಇಲಾಖೆ, ಸಾರಿಗೆ, ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವಂತೆ ಹಲವು ಅರ್ಜಿಗಳು ಸಲ್ಲಿಕೆಯಾದವು , ಮಕ್ಕಳಿಗೆ ಬಾಗ್ಯಲಕ್ಷ್ಮೀ ಬಾಂಡ್ ಗಳನ್ನು ವಿತರಿಸಿದರು ಫಲಾನುಭವಿಗಳಿಗೆ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ವಿಧವಾ ವೇತನದ ಆದೇಶ ಪತ್ರಗಳನ್ನು,ಪಹಣಿ, ಆಯುಶ್ಮಾನ್ ಬಾರತ್ ಕಾರ್ಡ್ ಗಳನ್ನು ಸ್ಥಳದಲ್ಲಿಯೇ ವಿತರಿಸಲಾಯಿತು.

ಸಾರ್ವಜನಿಕರಿಂದ ಸಾಮೂಹಿಕ ಸೌಚಾಲಯವನ್ನು ದುರಸ್ತಿ ಮಾಡುವುದರ ಬಗ್ಗೆ ಮತ್ತು ಗ್ರಾಪಂ ಕಟ್ಟಡದ ಮೇಲೆ ಗಿಡಗಂಟೆ ಹುಲ್ಲು ಬೆಳೆದಿದ್ದು ಹಾಸ್ಟೆಲ್, ಡಿಪಿಇಪಿ ಶಾಲೆಯ ಮೈದಾನದಲ್ಲಿ ಕಸವನ್ನು ಸ್ವಚ್ಛಮಾಡದಿರುವ ಬಗ್ಗೆ,ತಮ್ಮ ಸ್ವಂತ ಹೊಲಗಳಲ್ಲಿ ಅನುಮತಿ ಇಲ್ಲದೆ ಜೆಸ್ಕಾಂ ನವರು ಕಂಬಗಳನ್ನು ಹಾಕಿದ್ದು ಕೇಳಲು ಹೋದರೆ ಪೋಲಿಸ್ ರಿಗೆ ದೂರು ಕೊಟ್ಟು ಬೆದರಿಸುತ್ತಿರುವ ಅಧಿಕಾರಿಗಳಿಗೆ ತಹಶೀಲ್ದಾರ್ ರೈತರ ಹೊಲದಲ್ಲಿ ಅವರ ಅನುಮತಿಯಿಲ್ಲದೆ ಕಂಬಗಳನ್ನು ಹಾಕಿರುವುದಲ್ಲದೆ ಅವರನ್ನು ಪೊಲೀಸರಿಂದ ಬೆದರಿಸುವುದು ತಪ್ಪು ಮುಂದೆ ಹಾಗಾಗದಂತೆ ಎಚ್ಚರವಹಿಸಿ ಇನ್ನೊಮ್ಮೆ ಖುದ್ದು ರೈತರ ಸಮ್ಮುಖದಲ್ಲಿ ಸರ್ವೆ ಮಾಡಿ ಸಮಸ್ಯೆ ಬಗೆಹರಿಸಿ ಎಂದರು

ಆದಕ್ಕೂ ಮೊದಲು ಗ್ರಾಮದ ಕಾಲೊನಿಗಳಿಗೆ ತಹಶೀಲ್ದಾರ್ ಅಧಿಕಾರಿಗಳ ಜೊತೆ ಭೇಟಿ ನೀಡಿ ಮನೆಗಳಲ್ಲಿನ ವೃಧ್ಯಾಪರನ್ನು ಮಾತನಾಡಿಸಿ ಅವರಿಗೆ ಸರಿಯಾದ ಸಮಯಕ್ಕೆ ಮಾಸಿಕ ವೇತನ ಬರುತ್ತಾ, ಅದನ್ನು ಪೋಸ್ಟ್ ಆಫೀಸ್ ನವರು ಸರಿಯಾಗಿ ಕೊಡುತ್ತಾರಾ ಎಂದು ವಿಚಾರಿಸಿದರು

ಗ್ರಾಮದ ಕಾಲೊನಿ ರಸ್ತೆಗಳನ್ನು ಅಭಿವೃದ್ಧಿ ಮಾಡುವಂತೆ ಕೋಡಿಹಳ್ಳಿ ನಾಗರಿಕರು ಮನವಿ ಮಾಡಿದರು. ಈ ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸುವಂತೆ ತಾಲೂಕು ಪಂಚಾಯಿತಿ ಅಧಿಕಾರಿ ಇಓ ಗೆ ತಹಶೀಲ್ದಾರ್
ಕೆ ಎಂ ಗುರುಬಸವರಾಜ್ ಸೂಚಿಸಿದರು.

ಕಾರ್ಯನಿರ್ವಾಹಕ ಅಧಿಕಾರಿಗಳಾದ ಷಡಕ್ಷರಯ್ಯನವರು ಮಾತನಾಡಿ. ಸಾಮಾನ್ಯ ಜನರಲ್ಲಿ ಸಮಾನತೆಯನ್ನು ತರುವುದು ನಮ್ಮ ಉದ್ದೇಶ, ಸರ್ಕಾರದ ಸೌಲಭ್ಯಗಳನ್ನು ಎಲ್ಲರೂ ಸಂಪೂರ್ಣವಾಗಿ ತಿಳಿದುಕೊಳ್ಳುವುದು ಅತೀ ಅವಶ್ಯ ಹಾಗಾಗಿ ಪ್ರತಿಯೊಬ್ಬರು ಶಿಕ್ಷಣವನ್ನು ಕಡ್ಡಾಯವಾಗಿ ಪಡೆಯಲು ವಿನಂತಿಸುತ್ತೇನೆ, ಪೋಷಕರು ತಮ್ಮ ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ಕೊಡಿಸಿ ಎಲ್ಲರನ್ನು ವಿದ್ಯಾವಂತರನ್ನಾಗಿ ಮಾಡಿ ಒಳ್ಳೆಯ ಪ್ರಜೆಗಗಳನ್ನಾಗಿ ಮಾಡಿ.
ಗ್ರಾಮದಲ್ಲಿ ಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ಸಮಸ್ಯೆ, ದಾರಿಯ ಸಮಸ್ಯೆ, ಸಿಸಿರಸ್ತೆ, ಆಶ್ರಯ ಮನೆಗಳು, ಮುಖ್ಯರಸ್ತೆ ಹೀಗೆ ಅನೇಕ ಸಮಸ್ಯೆಗಳಿರಬಹುದು. ಮನವಿ ಮೂಲಕ ಸಾರ್ವಜನಿಕರು ತಿಳಿಸಿದಲ್ಲಿ ಪರಿಶೀಲಿಸಿ ನಿಯಮಾನುಸಾರ ಕ್ರಮಕೈಗೊಳ್ಳಲು ಸಹಾಯವಾಗುತ್ತದೆ. ಈ ಕಾರ್ಯಕ್ರಮವು ಅಧಿಕಾರಿಗಳು ಜನರ ಮನೆ ಬಾಗಿಲಿಗೆ ಬಂದು ಸಮಸ್ಯೆಯನ್ನು ಆಲಿಸಿ ಪರಿಹರಿಸಲು ಸಹಕರಿಸುವ ವಿನೂತನ ಕಾರ್ಯಕ್ರಮವಾಗಿದೆ ಎಂದರು.

ನರೇಗಾ ಯೋಜನೆ ಸದ್ಬಳಕೆಯಾಗಿಲ್ಲ :


ಕೋಡಿಹಳ್ಳಿ ಗ್ರಾಮದಲ್ಲಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಅವರು ಭೇಟಿನೀಡಿ ಗ್ರಾಮದ ಕಾಲೋನಿಗಳಲ್ಲಿನ ಮನೆ ಮನೆಗೆ ಭೇಟಿ ನೀಡಿ ಮಾತನಾಡುತ್ತ. ಗ್ರಾಮದಲ್ಲಿ ಬಹುತೇಕ ಜನರ ಮನೆಗಳಿಗೆ ಬೀಗ ಹಾಕಿವೆ, ಹೊಟ್ಟೆಪಾಡಿಗಾಗಿ ಕಾಪಿ ಸೀಮೆಗೆ ಹೋಗಿದ್ದಾರೆ ಎಂದು ಅಕ್ಕಪಕ್ಕದ ಮನೆಯವರು, ಸ್ಥಳೀಯರು ಹೇಳಿದರು, ಅಲ್ಲಿಯೇ ಇದ್ದ ಇಓ ಅವರಿಗೆ ಬಂಡ್ರಿ ಗ್ರಾಪಂಯಲ್ಲಿ ನರೇಗಾ ಯೋಜನೆ ಸರಿಯಾಗಿ ಅನುಷ್ಠಾನಕ್ಕೆ ಬಂದಿಲ್ಲ,ಸಂಬಂಧ ಪಟ್ಟ ಪಿಡಿಒ ರಿಗೆ ಇದರ ಬಗ್ಗೆ ಕಾಳಜಿವಹಿಸಲು ಕ್ರಮ ಕೈಗೊಳ್ಳಿ ಎಂದು ಹೇಳುತ್ತಾ ನರೇಗಾದಲ್ಲಿ ಜನಗಳಿಗೆ ಕೆಲಸ ಕೊಟ್ಟಿದ್ದರೆ ಅವರುಗಳು ಯಾಕೇ ದೂರದ ಕಾಫಿ ಸೀಮೆಗೆ ಏಕೆ ಹೋಗುತ್ತಿದ್ದರು ಎಂದು ಪ್ರಶ್ನೆ ಮಾಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಮ್ಮ, ಉಪಾಧ್ಯಕ್ಷೆ ಚಲವಾಧಿ ವಿಶಾಲಾಕ್ಷಿ, ತಹಶೀಲ್ದಾರ್ ಕೆಎಂ ಗುರುಬಸವರಾಜ್, ಕಾರ್ಯನಿರ್ವಾಹಕ ಅಧಿಕಾರಿ ಷಡಕ್ಷರಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರ್, ಸಮಾಜ ಕಲ್ಯಾಣ ಇಲಾಖೆಯ ಎನ್ ಕೆ ವೆಂಕಟೇಶ್, ಕೃಷ್ಣಾನಾಯ್ಕ್, ಸಿಡಿಪಿಓ ಎಲೆ ನಾಗಪ್ಪ, ಡಾ. ವಲಿಬಾಷ, ಆರ್ ಎಫ್ ಓ ಮಹಬ್ಬಾಷ, ಶ್ರೀಧರ್ ಮೂರ್ತಿ, ರವಿಕುಮಾರ್, ಡಾ.ಚಂದ್ರಪ್ಪ, ಸಂಗಮೇಶ,ಗ್ರಾಪಂ ಸದಸ್ಯರು, ತಾಲೂಕು ಮಟ್ಟದ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು,
ಇಸಿಓ ಬಸವರಾಜ್ ಸ್ವಾಗತಿಸಿ, ಶ್ರೀಧರ್ ಮೂರ್ತಿ ನಿರೂಪಿಸಿದರು.

LEAVE A REPLY

Please enter your comment!
Please enter your name here