ಆಧುನಿಕ ತಂತ್ರಜ್ಞಾನವನ್ನು ಬುದ್ದಿವಂತಿಕೆಯಿಂದ ಬಳಸಿಕೊಳ್ಳಿ – ಬಹಿರ್ಜಿ ಎ ಘೋರ್ಪಡೆ

0
75

ಸಂಡೂರು:16:ಏ:- ಸಂಡೂರಿನ ಎಸ್ ಆರ್ ಎಸ್ ವಸತಿ ಶಾಲೆಯ ಡೈಮಂಡ್ ಜ್ಯೂಬಿಲಿ ಹಾಲ್‍ನಲ್ಲಿ 2021-22 ಸಾಲಿನ ಹತ್ತನೆಯ ತರಗತಿಯ ಮಕ್ಕಳ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಸ್ಮಯೋರ್ ಸಂಸ್ಥೆಯ ವ್ಯವಸ್ಥಪಾಕ ನಿರ್ದೇಶಕರಾದ ಬಹಿರ್ಜಿ ಅಜಯ್ ಘೋರ್ಪಡೆಯವರು, ಈ ದಿನವು ನಿಮ್ಮ ಜೀವನದ ಪ್ರಮುಖ ಮತ್ತು ಅವಿಸ್ಮರಣೀಯ ದಿನವಾಗಿದೆಯಲ್ಲದೇ ನಿಮ್ಮ ನೆನಪಿನಲ್ಲಿ ದೀರ್ಘಕಾಲದವರೆಗೆ ಉಳಿಯುವ ದಿನವಾಗಿದೆ.ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಜನಿಸಿದ ನೀವೆಲ್ಲರೂ ನಿಮ್ಮ ಮುಂದಿನ ಭವಿಷ್ಯದ ಕನಸು ಕಾಣಲು ಹಾತೊರೆಯಬೇಕು, ಯುವಕರಾದ ನೀವುಗಳೆಲ್ಲ ನೀವು ಆರಿಸಿಕೊಂಡ ಬದುಕು ಮತ್ತು ಸುಖ ಸಂತೋಷಗಳ ಕನಸನ್ನು ಕಾಣಬೇಕು, ಆ ಕನಸು ನಿಮ್ಮ ಸುತ್ತಲಿರುವ ಪ್ರತಿಯೊಬ್ಬರಿಗೂ ಉತ್ತಮಿಕೆಯನ್ನು ನೀಡುವಂತಿರಬೇಕು.

ನಿಮ್ಮ ಮುಂದೆ ಅನೇಕ ಅವಕಾಶಗಳಿವೆ, ಬುದ್ದಿವಂತಿಕೆಯಿಂದ ನೀವು ನಿಮಗೆ ಬೇಕಾದ ವಿಷಯವನ್ನು ಆಯ್ಕೆ ಮಾಡಿಕೊಂಡು ನಿಮ್ಮ ಭವಿಷ್ಯವನ್ನು ಉಜ್ವಲಗೊಳ್ಳಿಸಿಕೊಳ್ಳಿ. ಹತ್ತು ಅಥವಾ ಇಪ್ಪತ್ತು ವರ್ಷಗಳ ಹಿಂದೆ ಅಷ್ಟೊಂದು ಸೌಲಭ್ಯಗಳಿರಲಿಲ್ಲ ಆದರೆ ಇಂದು ಆಧುನಿಕ ತಂತ್ರಜ್ಞಾನದಿಂದ ನಾವು ನಮ್ಮ ಮನೆ ಅಥವಾ ನಮ್ಮ ಶಾಲೆಯಲ್ಲಿಯೇ ಕುಳಿತುಕೊಂಡು ಇಡೀ ಜಗತ್ತನ್ನೇ ನೋಡಬಹುದಾಗಿದೆ ಎಂದು ಹೇಳಿದರು.

ನೀವೆಲ್ಲರೂ ಈ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಒಳ್ಳೆಯ ಜೀವನವನ್ನು ಕಂಡುಕೊಳ್ಳಿರಿ, ಜೀವನದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಿ, ನೀವು ಮಾಡುವ ಒಳ್ಳೆಯ ಕೆಲಸಗಳಿಂದ ಮತ್ತೊಬ್ಬರಿಗೆ ಮಾದರಿ ಅಥಾವ ಸ್ಫೂರ್ತಿಯಾಗಿರಿ ಎಂದು ಹೇಳಿದರು.
ನಿಮಗೆಲ್ಲರಿಗೂ 2020 ರ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ತಿಳಿದಿದೆ. ಇದು ಮುಂಬರುವ ವರ್ಷಗಳಲ್ಲಿ ಭಾರತೀಯ ಶಿಕ್ಷಣ ವ್ಯವಸ್ಥೆಯ ಅದ್ಭುತ ಮತ್ತು ಕ್ರಾಂತಿಕಾರಿ ವರ್ಷಗಳಿಗೆ ಸಾಕ್ಷಿಯಾಗಿದೆ.

ಬಳಿಕ ಮಕ್ಕಳಿಗೆ ಪ್ರತಿಜ್ಞಾವಿಧಿ ಭೋದಿಸಿ ನೆನಪಿನ ಕಾಣಿಕೆಯನ್ನು ನೀಡಲು ಮುಖ್ಯ ಅತಿಥಿಗಳೊಂದಿಗೆ ಭಾಗವಹಿಸಿದರು.
ಮತ್ತೋಬ್ಬ ಅತಿಥಿಗಳಾಗಿ ಆಗಮಿಸಿದ ಶಿವಪುರ ಶಿಕ್ಷಣ ಸಮಿತಿಯ ಆಧ್ಯಕ್ಷರಾದ ಶ್ರೀಮತಿ ಯಶೋಧರ ಎಸ್ ಘೋರ್ಪಡೆಯವರು ಮಕ್ಕಳಿಗೆ ನಿಮ್ಮ ಮುಂದಿನ ವಿದ್ಯಾಭ್ಯಾಸ ಮತ್ತು ಜೀವನವು ಉತ್ತಮವಾಗಿರಲಿ ಎಂದು ಶುಭ ಹಾರೈಸಿದರು.

ಪ್ರಾಂಶುಪಾಲರಾದ ಶ್ರೀಮತಿ ಅದೀಪ್ತಿ ಕುಂಬಾರವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ರಾಜವಂಶಸ್ಥರಾದ ಅಜಯ್ ಎಂ ಘೋರ್ಪಡೆ, ಶ್ರೀಮತಿ ಸೂರ್ಯಪ್ರಭಾ ಎ ಘೋರ್ಪಡೆ, ಶ್ರೀ ಏಕಾಂಬರ್ ಎ ಘೋರ್ಪಡೆ, ಪ್ರಾಂಶುಪಾಲರಾದ ಅದೀಪ್ತಿ ಕುಂಬಾರ, ಶಿವಪುರ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ರಮೇಶ ಎನ್ ಘೋರ್ಪಡೆ, ಶಾಲೆಯ ಕ್ರಿಡಾ ನಿರ್ವಾಹಕರಾದ ಮಠಪತಿಯವರಿದ್ದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲ ಶಿಕ್ಷಕ ವೃಂದವು ಭಾಗವಹಿಸಿತ್ತು.ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯಾದ ಗಣೇಶ ಮತ್ತು ಹರ್ಷಿತ ಸ್ವಾಗತ ಭಾಷಣ ಮತ್ತು ನಿರೂಪಣೆಯನ್ನು ಮಾಡಿದರು, ವಂದನಾರ್ಪಣೆಯನ್ನು ವಿದ್ಯಾರ್ಥಿನಿಯಾದ ಸಿಂಚನ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here