ಜಿಲ್ಲಾಡಳಿತ ನೇತೃತ್ವದಲ್ಲಿ ಎಲ್ಲ ಅಧಿಕಾರಿಗಳ ಸಾಮೂಹಿಕ ಪ್ರಯತ್ನ ಮತ್ತು ಸಾರ್ವಜನಿಕರ ಸಹಕಾರದಿಂದ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಿಸಲು ಸಾಧ್ಯವಾಗಿದೆ :ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್

0
94

ಧಾರವಾಡ : ಕೋವಿಡ್ 2ನೇ ಅಲೆಯಿಂದ ಸಾಕಷ್ಟು ತೊಂದರೆಗಳು ಸಾರ್ವಜನಿಕರಿಗೆ ಆಗಿದ್ದರೂ ಸಹ ಲಾಕ್ ಡೌನ್ ದಂತ ಕಠಿಣ ನಿಯಮಗಳಿಗೆ ಜಿಲ್ಲೆಯ ಸಾರ್ವಜನಿಕರು ನೀಡಿದ ಸಹಕಾರ ಮತ್ತು ಜಿಲ್ಲಾಡಳಿತದ ನೇತೃತ್ವದಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ, ಸಾಮೂಹಿಕವಾಗಿ ಕೋವಿಡ್ ನಿಯಂತ್ರಣಕ್ಕಾಗಿ ಕಾರ್ಯ ಮಾಡಿದ್ದರಿಂದ ಸಾಧ್ಯವಾಗಿದೆ. ಜೂನ್ 7 ರವರೆಗೆ ಇದೇ ರೀತಿ ಲಾಕ್ ಡೌನ್ ನಿಯಮ ಪಾಲಿಸಬೇಕೆಂದು ಬೃಹತ, ಮದ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ಧಾರವಾಡ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ, ಅಂಜುಮನ್ ಸಂಸ್ಥೆ ಹಾಗೂ ಲೈನ್ಸ್‍ಕ್ಲಬ್ ಧಾರವಾಡ ಗ್ಯಾಲಕ್ಸಿ ಇವರ ಸಂಯುಕ್ತ ಅಶ್ರಯದಲ್ಲಿ ಅಂಜುಮನ್ ಕಾಲೇಜು ಆವರಣದಲ್ಲಿ ತೆರೆಯಲಾಗಿರುವ ಕೋವಿಡ್ ಕಾಳಜಿ ಕೇಂದ್ರವನ್ನು ಉದ್ಘಾಟಿಸಿ, ಮಾತನಾಡಿದರು.
ಕೋರೊನಾ ಸೋಂಕು ನಿಯಂತ್ರಿಸಲು ಜಿಲ್ಲಾಡಳಿತ ವಿವಿಧ ಕಾರ್ಯಗಳನ್ನು ಹಮ್ಮಿಕೊಂಡಿದೆ. ರಾಜ್ಯ ಸರಕಾರವು ಹೆಚ್ಚು ಬೆಡ್, ಚಿಕಿತ್ಸೆ, ವೈದ್ಯರ ಸೇವೆಯನ್ನು ನೀಡುವ ಮುಂಖಾತರ ರಾಜ್ಯದಲ್ಲಿ ಕೋವಿಡ್ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ.
ಈಗ ಸದ್ಯ ಜಿಲ್ಲೆಯಲ್ಲಿ ಶೇ. 13 ರಷ್ಟು ಪಾಜಿಟಿವಿಟಿ ದರ ಇದೆ. ಕೆಲವು ದಿನ ಅದು ಶೇ. 40 ರಷ್ಟು ಇತ್ತು. ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗಳ ಉತ್ತಮ ಕಾರ್ಯ ನಿರ್ವಹಣೆಯಿಂದ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ. ರಾಜ್ಯ ಸರ್ಕಾರ ಘೋಷಿಸಿರುವ ಲಾಕ್‍ಡೌನಗೆ ಜಿಲ್ಲೆಯ ಜನರು ಉತ್ತಮ ಸಹಕಾರವನ್ನು ನೀಡಿದ್ದಾರೆ ಎಂದು ಸಚಿವರು ಹೇಳಿದರು.
ಜೂನ್ 7 ರ ವರೆಗೂ ಎಲ್ಲರೂ ಲಾಕ್‍ಡೌನಗೆ ಇದೇ ರೀತಿ ಸಹಕಾರವನ್ನು ನೀಡಿದರೆ ಪಾಜಿಟಿವಿಟಿ ದರ 5% ಕ್ಕಿಂತ ಕಡಿಮೆಯಾಗಿ, ಇಳಿಕೆಯಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಜನರು ಕಡ್ಡಾಯವಾಗಿ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಪಾಡುವುದು, ಹ್ಯಾಂಡ್ ಸ್ಯಾನಿಟೈಜರ ಬಳಕೆ ಮಾಡಬೇಕು. ಸಾರ್ವಜನಿಕರು ಅನಾವಶ್ಯಕವಾಗಿ ತಿರುಗಾಡದೆ ಲಾಕ್‍ಡೌನ್ ನಿಯಮಗಳನ್ನು ಪಾಲಿಸಬೇಕೆಂದು ಅವರು ತಿಳಿಸಿದರು.
ಜಿಲ್ಲಾಡಳಿತದ ಅನುಮತಿ ಮೇರೆಗೆ ಅಂಜುಮನ್ ಕಾಲೇಜು ಆವರಣದಲ್ಲಿ ಅಂಜುಮನ್ ಸಂಸ್ಥೆ ಹಾಗೂ ಲೈನ್ಸ್ ಕ್ಲಬ್ ಧಾರವಾಡ ಗ್ಯಾಲಕ್ಸಿ ವತಿಯಿಂದ 30 ಬೆಡ್‍ಗಳ ಕೋವಿಡ್ ಕಾಳಜಿ ಕೇಂದ್ರವನ್ನು ಸ್ಥಾಪಿಸಿದ್ದು, ಮುಂದಿನ ದಿನಗಳಲ್ಲಿ ಇನ್ನೂ 20 ಬೆಡ್‍ಗಳಿಗೆ ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ. ಕಾಳಜಿ ಕೇಂದ್ರಕ್ಕೆ ಅಗತ್ಯವಿರು ವೈದ್ಯರು, ಔಷಧಿ, ಆಕ್ಸಿಜನ್, ವೆಂಟಿಲೇಟರ, ಅಗತ್ಯ ಸಿಬಂದ್ದಿಗಳನ್ನೂ ನಿಯೋಜನೆ ಮಾಡುವ ಮೂಲಕ ಸುಸಜ್ಜಿತ ಕೋವಿಡ್ ಆರೈಕೆ ಕೇಂದ್ರವನ್ನು ತೆರೆಯಲಾಗಿದೆ ಎಂದರು. ಲೈನ್ಸ್‍ಕ್ಲಬ್ ಧಾರವಾಡ ಗ್ಯಾಲಕ್ಸಿ ವತಿಯಿಂದ 2 ಆಕ್ಸಿಜನ್ ಸಾಂದ್ರಕಗಳನ್ನು ಸಚಿವರು ಕೋವಿಡ್ ಕೇರ್ ಸೆಂಟರ್‍ಗೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕರಾದ ಅರವಿಂದ ಬೆಲ್ಲದ. ಅಮೃತ ದೇಸಾಯಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುಶೀಲಾ.ಬಿ., ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯಶವಂತ ಮದೀನಕರ, ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ.ಶಶಿ ಪಾಟೀಲ, ತಹಶೀಲ್ದಾರ ಸಂತೋಷ ಬಿರಾದಾರ, ಅಂಜುಮನ್ ಸಂಸ್ಥೆಯ ಮಾಜಿ ಅಧ್ಯಕ್ಷ ಮಹಮ್ಮದ ಇಸ್ಮಾಯಿಲ್ ತಮಟಗಾರ, ಅಧ್ಯಕ್ಷ ಇಕ್ಬಾಲ್ ಅಹಮ್ಮದ ಜಮಾದಾರ, ಉಪಾಧ್ಯಕ್ಷ ಅಶ್ಪಾರ ಅಹಮದ ಎಸ್.ಬೆಟಗೇರಿ, ಗೌರವ ಕಾರ್ಯದರ್ಶಿ ನಬೀರ ಹುಸೇನ ಬಿ ಮನಿಯಾರ, ಜಂಟಿ ಕಾರ್ಯದರ್ಶಿ ಮಹಮ್ಮ ಶಕೀಲ್ ಎಮ್. ತಮಟಗಾರ, ಲೈನ್ಸ್ ಕ್ಲಬ್ ಧಾರವಾಡ ಗ್ಯಾಲಕ್ಸಿಯ ಅಧ್ಯಕ್ಷ ಡಾ. ಎಮ್.ಎ. ಮುಮ್ಮಿಗಟ್ಟಿ, ಕಾರ್ಯದರ್ಶಿ ರತಿ ಶ್ರೀನಿವಾಸನ, ಖಜಾಂಚಿ ಎಮ್.ಎಸ್ ಮುಳಮುತ್ತಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here