ಅಪೌಷ್ಟಿಕತೆ ನಿವಾರಣೆಗೆ ಪೋಷಕಾಂಶವುಳ್ಳ ಆಹಾರ ಸೇವನೆ ಅವಶ್ಯ; ಮುಖ್ಯ ಶಿಕ್ಷಕ ಶಶಿಧರ್

0
451

ಸಂಡೂರು: ಸೆ:13: ಅಪೌಷ್ಟಿಕತೆ ನಿವಾರಣೆಗೆ ಪೋಷಕಾಂಶಗಳುಳ್ಳ ಆಹಾರ ಸೇವನೆ ಅತೀ ಮುಖ್ಯ; ಮುಖ್ಯ ಶಿಕ್ಷಕ ಶಶಿಧರ್ ತಿಳಿಸಿದರು
ತಾಲೂಕಿನ ಜೋಗ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ಪೋಷಣ ಮಾಸ ಆಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಕ್ಕಳು ಸಮತೋಲನ ಪೌಷ್ಟಿಕ ಆಹಾರ ಸೇವನೆ ಮಾಡುವುದು ಮುಖ್ಯವಾಗಿದೆ, ಸ್ಥಳೀಯವಾಗಿ ದೊರೆಯುವ ತರಕಾರಿ, ಹಣ್ಣುಗಳನ್ನು ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು, ಹಾಗೇ ವೈಯಕ್ತಿಕ ಶುಚಿತ್ವ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ ಎಂದು ಅವರು ತಿಳಿಸಿದರು,

ಇದೇ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ‌ಮಾತನಾಡಿ ಪೋಷಣ ಮಾಸಾಚರಣೆ ಒಂದು ಅದ್ಬುತ ಅಭಿಯಾನ ರಕ್ತಹೀನತೆ ಮತ್ತು ಅಪೌಷ್ಟಿಕತೆ ನಿವಾರಣೆಗೆ ಹೆಚ್ಚಿನ ಮಹತ್ವ ಕೊಟ್ಟು ತಿಂಗಳ ಪೂರ್ತಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಅರಿವು ಮೂಡಿಸಲಾಗುತ್ತಿದೆ, ಅದರಂತೆ ಶಾಲಾ ಮಕ್ಕಳಿಗೆ ನಿತ್ಯ ಪೌಷ್ಟಿಕ ಆಹಾರ ಸೇವನೆ ಮಾಡಬೇಕು, ಸ್ವಚ್ಛವಾಗಿ ಕೈತೊಳೆಯುವ ವಿಧಾನಗಳನ್ನು ಅನುಸರಿಸ ಬೇಕು, ಉಗುರುಗಳನ್ನು ಟ್ರಿಮ್ ಆಗಿ ಇಡಬೇಕು, ಮತ್ತು ಪ್ರತಿ ಸೋಮವಾರ ಐ.ಎಫ್.ಎ ಮಾತ್ರೆ ಸೇವನೆ ಮಾಡಬೇಕು ಎಂದು ಮಕ್ಕಳಿಗೆ ಮಾಹಿತಿ ನೀಡಿದರು,

ಇದೇ ಸಂದರ್ಭದಲ್ಲಿ ಆರು ಸಾವಿರ ಐ.ಎಫ್.ಎ ಮಾತ್ರೆಗಳನ್ನು ಶಾಲೆಗೆ ನೀಡಲಾಯಿತು,ಮತ್ತು ಮಾತ್ರೆಗಳನ್ನು ಮಕ್ಕಳು ಸೇವಿಸುವ ಬಗ್ಗೆ ಕ್ಲಾಸ್ ಟೀಚರ್ ಮಾನಟರಿಂಗ್ ಮಾಡುವಂತೆ ತಿಳಿಸಿದರು, ಪ್ರತಿ ವಾರವೂ ಮಾತ್ರೆ ನೀಡಿ ತಿಂಗಳ ಕೊನೆಗೆ ವರದಿಯನ್ನು ಸಲ್ಲಿಸುವಂತೆ ಶಿಕ್ಷಕರಿಗೆ ಸೂಚಿಸಿದರು,

ಆರ್.ಕೆ.ಎಸ್.ಕೆ ಪ್ರಶಾಂತ್ ಕುಮಾರ್ ಸ್ವಾಗತ ಕೋರಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು,

ಈ ಸಂದರ್ಭದಲ್ಲಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಶಶಿಧರ್, ಸಹ ಶಿಕ್ಷಕಿಯರಾದ ಅನಸೂಯಾ, ಲಕ್ಷ್ಮಿ, ಶಿಲ್ಪ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ಬಸವರಾಜ, ಎನ್.ಸಿ.ಡಿ ಕೌನ್ಸಿಲರ್ ಯಂಕಪ್ಪ, ಆರ್.ಕೆ.ಎಸ್.ಕೆ ಪ್ರಶಾಂತ್ ಕುಮಾರ್, ಸಿಬ್ಬಂದಿ ತಿಪ್ಪೇಸ್ವಾಮಿ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here