ಕನ್ನಡ ಸಾಹಿತ್ಯದಲ್ಲಿ ಪ್ರತಿಭಟನೆಯ ಧ್ವನಿಯಾಗಿ ಕಾಣಿಸಿಕೊಂಡ ಮಹಾಸಂತ ಕನಕದಾಸರು; ಜಿ ಎಂ ಪ್ರದೀಪ್ ಕುಮಾರ್

0
41

ಕನ್ನಡ ಸಾಹಿತ್ಯದಲ್ಲಿ ಪ್ರತಿಭಟನೆಯ ಧ್ವನಿಯಾಗಿ ಕಾಣಿಸಿಕೊಂಡು ಸಾಹಿತ್ಯದ ಮೂಲಕ ಭಕ್ತಿ ಕ್ರಾಂತಿ ಮತ್ತು ವೈಚಾರಿಕ ಕ್ರಾಂತಿಯನ್ನು ಮಾಡಿದ ದಾಸ ಶ್ರೇಷ್ಠ, ಮಹಾಸಂತ ಕನಕದಾಸರು ಕನ್ನಡ ನಾಡು ಕಂಡ ಶ್ರೇಷ್ಠ ಹರಿದಾಸ, ಕವಿ, ಸಂತ, ಗಾಯಕ, ಕೀರ್ತನಕಾರ,ಸಮಾಜ ಸುಧಾರಕ ಹಾಗೂ ಕನ್ನಡದ ಮೊದಲ ಬಂಡಾಯಗಾರರಾಗಿದ್ದಾರೆ ಎಂದು ಬನ್ನಿಹಟ್ಟಿ ಪ್ರೌಢಶಾಲೆಯ ಇಂಗ್ಲೀಷ್ ಶಿಕ್ಷಕ ಜಿ ಎಂ ಪ್ರದೀಪ್ ಕುಮಾರ್ ಅಭಿಪ್ರಾಯಪಟ್ಟರು…

ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜ್ ( ಪ್ರೌಢಶಾಲಾ ವಿಭಾಗ ) ಸಂಡೂರಿನಲ್ಲಿ ಗುರುವಾರ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಸಂಡೂರು ವತಿಯಿಂದ ಏರ್ಪಡಿಸಲಾಗಿದ್ದ ಸಂಡೂರು ತಾಲೂಕು ಕುರುಬರ ಸಂಘದ ದತ್ತಿ ಹಾಗೂ ಚಿತ್ರ ಕಲಾವಿದ, ನಾಡೋಜ ಶ್ರೀ ವಿ.ಟಿ. ಕಾಳೆ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ *” ಕನ್ನಡ ಸಾಹಿತ್ಯ ಮತ್ತು ಸಂಗೀತ ಕ್ಷೇತ್ರಕ್ಕೆ ಹಾಲುಮತದ ಕನಕದಾಸರ ಕೊಡುಗೆ “ ವಿಷಯದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದ ಇವರು ದಾಸರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕೆಳಪಂಗಡಕ್ಕೆ ಸೇರಿದ ದಾಸರಾಗಿ ಬದುಕಿನ ಎಲ್ಲಾ ರಂಗಗಳಿಗೂ ಅನ್ವಯಿಸುವ, ನೀತಿ ಸಾರ ಅರಳಿಸುವ ಅಸಂಖ್ಯಾತ ಕೀರ್ತನೆಗಳ ಮೂಲಕ ಸಾಮಾಜಿಕ ಅಸಮಾನತೆ ಹಾಗೂ ಜಾತಿ ಪದ್ದತಿಯ ಶೋಷಣೆಯ ವಿರುದ್ಧ ದನಿಯೆತ್ತಿ ಯಾವ ಮತ ಪಂಥಕ್ಕೂ ಅಂಟಿಕೊಳ್ಳದೆ ಸಕಲ ತತ್ವಗಳನ್ನು ಮೀರಿ ಆಕಾಶದೆತ್ತರಕ್ಕೆ ಬೆಳೆದು ವಿಶ್ವಮಾನವರಾಗಿ ವಿಜೃಂಭಿಸಿದ ಕನಕದಾಸರು ಯೋಗ ಪುರುಷರಾಗಿದ್ದಾರೆ ಎಂದರು.

ಇವರ ಕೀರ್ತನೆಗಳಲ್ಲಿನ ಚಿಂತನೆಗಳು ನಮ್ಮೆಲ್ಲರ ಮನ ಪರಿವರ್ತನೆಗೆ ಪ್ರೇರಣೆಯಾಗಿದ್ದು ಶಾಲಾ ವಿದ್ಯಾರ್ಥಿಗಳು ದಾಸ ಕೀರ್ತನೆಗಳು ಮತ್ತು ವಚನ ಮಾಲಿಕೆಗಳನ್ನು ನಿತ್ಯ ಕೇಳುವ ಮೂಲಕ ಮತ್ತು ಓದುವ ಮೂಲಕ ಒಳ್ಳೆಯ ಸಂಸ್ಕಾರ ಮತ್ತು ಆದರ್ಶಗಳನ್ನ ರೂಡಿಸಿಕೊಂಡು ಜೀವನದಲ್ಲಿ ಸಾರ್ಥಕ ವ್ಯಕ್ತಿಗಳಾಗಿ ಬೆಳೆದು ನಿಂತು ಸಮಾಜಮುಖಿಗಳಾಗಿ ಬಾಳಬೇಕು ಎಂದು ತಿಳಿಸಿದರು. ಕನಕದಾಸರ ಕೀರ್ತನೆಗಳಾದ ನಿರ್ಮಲ ಭಕ್ತಿಯ ಪ್ರಾಮುಖ್ಯತೆಯನ್ನು ಪ್ರತಿನಿಧಿಸುವ ” ನೇಮವಿಲ್ಲದ ಹೋಮ ವೇತಕ್ಕಯ್ಯ ರಾಮ “, ಮನೋ ನಿಶ್ಚಲತೆಯನ್ನು ಪ್ರತಿನಿಧಿಸುವ ” ತಲ್ಲಣಿಸದಿರು ಕಂಡ್ಯಾ ತಾಳು ಮನವೇ “, ಸತ್ಸಂಗದ ಮಹತ್ವದ ಕುರಿತಾದ
” ದುರ್ಜನರ ಸಂಗ ಎಂದಿಗೊಲ್ಲೆನು ಹರಿಯೇ “, ರಾಜಕಾರಣಿಗಳ/ ಆಷಾಢಭೂತಿಗಳ ಕಪಟತೆಯನ್ನು ತೋರುವ “ಡೊಂಕು ಬಾಲದ ನಾಯಕರೇ ನೀವೇನೂಟವ ಮಾಡಿದಿರಿ “, ಜೀವನದ ನಶ್ವತೆಯನ್ನು ಸಾರುವ
“ಎಂದಿದ್ದರೀ ಕೊಂಪೆ ಎನಗೆ ನಂಬಿಕೆಯಿಲ್ಲ ” ಮೊದಲಾದ ಕೀರ್ತನೆಗಳು ಜೀವನ ಪಾಠವನ್ನು ಕೇಳುಗರಿಗೆ ಹಾಗೂ ಓದುಗರಿಗೆ ಕಟ್ಟಿಕೊಡುವ ಅಮೂಲ್ಯ ನಿಧಿಗಳಾಗಿದ್ದು ಅವುಗಳ ಬೆಳಕಿನಲ್ಲಿ ನಾವುಗಳು ಜೀವನದ ಸಫಲತೆಯನ್ನು ಕಂಡುಕೊಳ್ಳಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ” ಕನ್ನಡ ಕವಿಗಳು ಚಿತ್ರಿಸಿದ ಚಿತ್ರಗಳು “ವಿಷಯದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದ ಸಂಡೂರಿನ ನಿವೃತ್ತ ಕನ್ನಡ ಉಪನ್ಯಾಸಕರಾದ ಬಿ. ಆರ್. ಮಸೂತಿ ಅವರು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಕಂಡುಬರುವ ಹಳಗನ್ನಡ, ನವ್ಯ, ನವೋದಯ ಮೊದಲಾದ ಪ್ರಕಾರದ ಕವಿತೆಗಳಲ್ಲಿ ಚಿತ್ರಿ ತವಾಗಿರುವ ಕವಿ ಕಲ್ಪನೆಗಳು ಅದ್ಭುತ ಚಿತ್ರ ಕಾವ್ಯಗಳಾಗಿವೆ ಎಂದರು.ಜೀವನಕ್ಕೊಂದು ಸ್ಪಷ್ಟ ಸಂದೇಶವನ್ನು ನೀಡುವ ಇಂತಹ ಕವಿ ಕಂಡ ಚಿತ್ರಗಳು ಭಾವನಾಪ್ಯಾ ಯಮಾನವಾಗಿದ್ದು ಓದುಗರ ಮನ ಸೆಳೆಯುತ್ತವೆ ಎಂದರು

ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ನಾಡೋಜ ವಿ. ಟಿ. ಕಾಳೆ ಹಾಗೂ ನಿವೃತ್ತ ಕನ್ನಡ ಉಪನ್ಯಾಸಕ ಸಿ.ಎಂ.ಶಿಗ್ಗಾವಿ ಇವರು ಇವರುಗಳು ಸಂಡೂರು ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಂಡೂರು ತಾಲೂಕು ಘಟಕದ ವತಿಯಿಂದ ಕನ್ನಡ ಪ್ರೀತಿ ಮತ್ತು ಸಾಹಿತ್ಯ ಪ್ರೇಮವನ್ನು ಬೆಳೆಸುವಂತಹ ಅನೇಕ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ಆಯೋಜಿಸುತ್ತಿದ್ದು ಶಾಲಾ ಮಕ್ಕಳು ಸಾಹಿತ್ಯ ಪ್ರೇಮಿಗಳಾಗಿ ರೂಪುಗೊಳ್ಳುವಂತೆ ಹಾಗೂ ಕನ್ನಡ ನಾಡು ನುಡಿಯನ್ನು ಕಟ್ಟುವಂತಹ ದಿವ್ಯ ಕಾರ್ಯದಲ್ಲಿ ಸ್ವಇಚ್ಛೆಯಿಂದ ಪಾಲ್ಗೊಳ್ಳಬೇಕು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಲಾ ಪ್ರಭಾರಿ ಮುಖ್ಯ ಗುರುಗಳಾದ ನೂರ್
ಮಹಮದ್ ಇವರು ಶಾಲೆಗಳಲ್ಲಿ ನಡೆಯುವ ಇಂತಹ ಕನ್ನಡಪರ ಕಾರ್ಯಕ್ರಮಗಳು ನಿಜಕ್ಕೂ ಶ್ಲಾಘನೀಯ, ಗ್ರಾಮೀಣ ಭಾಗದ ಶಾಲೆಗಳಲ್ಲಿ ಇನ್ನು ಹೆಚ್ಚು ಹೆಚ್ಚು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕನ್ನಡ ಸಂಸ್ಕೃತಿಯನ್ನು ಬೆಳೆಸಬೇಕು ಎಂದರು ಎಂದರು.

ಪ್ರಸ್ತಾವಿಕವಾಗಿ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಉಪ ಪ್ರಾಚಾರ್ಯ ಎಚ್.ಎನ್. ಭೋಸ್ಲೆ ಮಾತನಾಡಿದರು. ಅತಿಥಿಗಳಾಗಿ ಸಂಡೂರು ತಾಲೂಕು ಕುರುಬರ ಸಂಘದ ಅಧ್ಯಕ್ಷ ಗುರುಪಾದಪ್ಪ ಹಾಗೂ ಮಾಜಿ ಅಧ್ಯಕ್ಷ ಸತ್ಯಪ್ಪ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಕಾರ್ಯದರ್ಶಿ ವೀರೇಶ್, ಕದಳಿ ವೇದಿಕೆ ಸಂಡೂರು ತಾಲೂಕು ಘಟಕದ ಕಾರ್ಯದರ್ಶಿ ಶ್ರೀಮತಿ ಗುಟ್ಟೆ ನಳಿನ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿನಿಯರು, ಶಿಕ್ಷಕ ಸಿಬ್ಬಂದಿ, ಬಿ ಕೆ ಜಿ ಸಿಬ್ಬಂದಿ ಬಸವರಾಜ್ , ಸಂಡೂರಿನ ಹೆಸರಾಂತ ಚಿತ್ರ ಕಲಾವಿದ ಶ್ರೀನಾಥ್ ಕಾಳೆ ಹಾಜರಿದ್ದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕ. ಸಾ. ಪ. ಕಾರ್ಯದರ್ಶಿ ವೀರೇಶ್ ವಂದಿಸಿದರು. ಶಿಕ್ಷಕ ಜಗದೀಶ್ ನಿರೂಪಿಸಿದರು. ಕ. ಸಾ.ಪ. ಸದಸ್ಯರಾದ ಎ. ಎಂ. ಶಿವಮೂರ್ತಿ ಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here