ಹುಣಸೆಕಟ್ಟೆಯಲ್ಲೊಂದು ಮಾದರಿ ಸರ್ಕಾರಿ ಶಾಲೆ.

0
344

ಕೊಟ್ಟೂರು: ಎಲ್ಲಿ ನೋಡಿದರೂ ಇಂಗ್ಲೀಷ್‌ಮಯವಾಗಿರುವ ಈ ಸಂದರ್ಭದಲ್ಲಿ ಸರ್ಕಾರಿ ಕನ್ನಡ ಶಾಲೆಯೊಂದು ವಿಶೇಷವಾಗಿ ಗಮನ ಸೆಳೆಯುವಂತಹ ಪ್ರಯತ್ನವನ್ನು ತಾಲ್ಲೂಕಿನ ಹುಣಸೆಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಮಾಡುತ್ತಿದೆ. ಎಲ್ಲಿ ನೋಡಿದರೂ ಮಕ್ಕಳನ್ನು ಇಂಗ್ಲೀಷ್ ಮೀಡಿಯಂ ಗೆ ಸೇರಿಸಬೇಕು ಎನ್ನುವಂತಹ ಪೋಷಕರಿರುವ ಈ ಹೊತ್ತಿನಲ್ಲಿ ಕನ್ನಡ ಶಾಲೆಯು ಈ ರೀತಿಯಾಗಿ ವಿಭಿನ್ನವಾಗಿ ತನ್ನ ಛಾಪನ್ನು ಒತ್ತಿದೆ. ಹುಣಸೆಕಟ್ಟೆ ಎಂಬ ಸಣ್ಣ ಹಳ್ಳಿಯಲ್ಲಿರುವ ಈ ಶಾಲೆ ಈಗಲೂ ಸಹ 110 ವಿದ್ಯಾರ್ಥಿಗಳನ್ನು ಒಳಗೊಂಡಿದೆ. ಶಾಲಾ ಆವರಣ, ಶಾಲಾ ಕೈತೋಟ, ವಿಭಿನ್ನವಾಗಿ ಕಾಣಿಸುವಂತಹ ತರಗತಿ ಕೋಣೆಗಳು, ರೈಲು ಚಿತ್ರಗಳು. ಶಿಸ್ತುಬದ್ಧ ಶಾಲಾ ಆಡಳಿಕ್ಕೆ ಗ್ರಾಮಸ್ಥರು ತಲೆದೂಗಿದ್ದಾರೆ.

ಇಲ್ಲಿಯ ಮುಖ್ಯಗುರುಗಳಾದ ಹೆಚ್ ಮಾಲತೇಶ್ ಇವರು ಈ ಶಾಲೆಗೆ ಬಂದು 13 ವರ್ಷಗಳಾಗಿವೆ. ಈ ಶಾಲೆಗೆ ಮಕ್ಕಳನ್ನು ಆಕರ್ಷಿಸುವಂತಹ ವಾತಾವರಣವನ್ನು ನಿರ್ಮಿಸಿರುವ ಶಾಲಾ ಶಿಕ್ಷಕ ವೃಂದಕ್ಕೆ ಗ್ರಾಮಸ್ಥರು, ಶಿಕ್ಷಣ ಪ್ರೇಮಿಗಳು ತಲೆದೂಗಿದ್ದಾರೆ. ಇಂತಹ ಶಾಲೆಗಳು ಗ್ರಾಮಕ್ಕೆ ಒಂದು ಇದ್ದರೆ ಸರ್ಕಾರಿ ಶಾಲೆಗಳು ಮಾದರಿ ಶಾಲೆಗಳೆನಿಸಿಕೊಂಡು ಯಾವ ಇಂಗ್ಲೀಷ್ ಮೀಡಿಯಂಗೂ ನಾವೇನೂ ಕಡಿಮೆ ಇಲ್ಲ ಎನ್ನುವಂತಹ ಸಂದೇಶ ಸಾರಬಹುದು ಎಂದು ಗ್ರಾಮಸ್ಥರು ಮಂಜುನಾಥ್ ಭಜಂತ್ರಿ, ಪ್ರದೀಪ್ ಕುಮಾರ್, ಅಭಿಪ್ರಾಯ ಪಟ್ಟರು. ಗ್ರಾಮಸ್ಥರ ಸಂತೋಷಕ್ಕೆ ಈ ಶಾಲೆಯ ಮುಖ್ಯ ಗುರುಗಳು ಹಾಗೂ ಸಿಬ್ಬಂದಿ ವರ್ಗ ಸಂತೋಷ ಪಟ್ಟರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here