ವಿಶ್ವ ರೋಗಿಗಳ ರಕ್ಷಣಾ ದಿನಾಚರಣೆ ಜಾಗೃತಿ

0
445

ಸಂಡೂರು:ಡಿ:09:-ತಾಲೂಕಿನ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ “ವಿಶ್ವ ರೋಗಿಗಳ ರಕ್ಷಣಾ ದಿನಾಚರಣೆ” ಅಂಗವಾಗಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಕಾರ್ಯಕ್ರಮ ಉದ್ದೇಶಿಸಿ ಕೇಂದ್ರದ ಎನ್.ಸಿ.ಡಿ ಕಾರ್ಯಕ್ರಮದ ವೈದ್ಯಾಧಿಕಾರಿ ಡಾ.ಪ್ರಿಯಾಂಕ ಮಾತನಾಡಿ ವೈದ್ಯರ ಸೂಚನೆ ಇಲ್ಲದೇ ಯಾವುದೇ ಕಾರಣಕ್ಕೂ ಚಿಕಿತ್ಸೆ ಪ್ರಾರಂಭಿಸುವುದಾಗಲಿ, ನಿಲ್ಲಿಸುವುದಾಗಲಿ ಮಾಡಬಾರದು, ಇಂತಹ ಕಾಯಿಲೆಗೆ ಇಂತಿಷ್ಟು ದಿನ ಚಿಕಿತ್ಸೆಯಿಂದ ಗುಣಮುಖವಾಗಲು ಸಾಧ್ಯವಿದೆ, ಅದನ್ನು ಬಿಟ್ಟು ಅರ್ಧದಲ್ಲಿ ಚಿಕಿತ್ಸೆ ನಿಲ್ಲಿಸ ಬಾರದು, ಮತ್ತು ಅನಾವಶ್ಯಕವಾಗಿ ಆಂಟಿಬಯೋಟಿಕ್ ಗಳನ್ನು ಹೆಚ್ಚಿನ ದಿನಗಳು ಬಳಸಬಾರದು, ನಿರ್ದಿಷ್ಟ ದಿನಗಳು ಮಾತ್ರ ಬಳಸಬೇಕು, ಹಳೆ ಚೀಟಿಯಲ್ಲಿರುವ ಔಷಧಗಳನ್ನು ಮರು ಬಳಕೆ ಮಾಡಬಾರದು ಎಂದು ಸಲಹೆ ನೀಡಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಡಿಸೆಂಬರ್ 9 ರಂದು ವಿಶ್ವ ರೋಗಿಗಳ ರಕ್ಷಣಾ ದಿನ ಆಚರಣೆ ಮಾಡಲಾಗುತ್ತದೆ, ಇದರ ಉದ್ದೇಶ ರೋಗಿಗಳ ಆರೋಗ್ಯ ರಕ್ಷಣೆ ಅತೀ ಮುಖ್ಯವಾದದ್ದು, ರೋಗಿಗಳು ಸಹ ವೈದ್ಯರ ಸಲಹೆಗಳನ್ನು ಪಾಲಿಸಬೇಕು, ಅವರ ಆರೋಗ್ಯ ಅವರ ಕೈಯಲ್ಲಿದೆ, ಉತ್ತಮ ಸಲಹೆ-ಸೂಚನೆಗಳನ್ನು ಪಾಲಿಸುವುದರ ಮೂಲಕ ತಮ್ಮ ಆರೋಗ್ಯ ಉನ್ನತಿಕರಿಸಿಕೊಳ್ಳ‌ಲು ಸಾಧ್ಯವಿದೆ, ಕಾಯಿಲೆ ಚಿಕ್ಕದಿರಲಿ, ದೊಡ್ಡದಿರಲಿ, ಯಾವುದೇ ವಯಸ್ಸಿನ ಬೇದಭಾವವಿಲ್ಲದೆ ಚಿಕಿತ್ಸಾ ಸೌಲಭ್ಯ ದೊರೆಯಲಿದೆ, ನಿಮ್ಮ ಆರೋಗ್ಯ- ನಮ್ಮ ಬದ್ಧತೆ ಯಂತೆ ಇಲಾಖೆ ಕಾರ್ಯ ನಿರ್ವಹಿಸಲಿದೆ, ಎಲ್ಲರೂ ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡ್ ನೊಂದಣಿ ಮಾಡಿಸಿ, ಇಲಾಖೆಯಿಂದ ಉಚಿತವಾಗಿ ಸಿಗುವ ಎಲ್ಲಾ ಸೇವಗಳನ್ನು ಪಡೆಯಬಹುದು ಎಂದು ತಿಳಿಸಿದರು,

ಕಾರ್ಯಕ್ರಮದಲ್ಲಿ ಕೇಂದ್ರದ ಎನ್.ಸಿ.ಡಿ ವೈದ್ಯಾಧಿಕಾರಿ ಡಾ.ಪ್ರಿಯಾಂಕ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಮಂಜುನಾಥ್, ಪ್ರಶಾಂತ್ ಕುಮಾರ್, ಮಾರೇಶ್,ಬಾಸ್ಕರ್, ಸುಷ್ಮಾ, ಇಂದುಮತಿ, ನಾಗರತ್ನ, ನಿಜಾಮುದ್ದೀನ್, ಗ್ರೇಸ್ ರೋಜಾ, ಹನುಮಂತಪ್ಪ ಬಂಡಿ, ಮುಸ್ತಫಾ, ಶರತ್, ವರಲಕ್ಷ್ಮಿ, ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here