ಎಸ್‍ಬಿಐ ನಿಂದ ಟ್ರೂನ್ಯಾಟ್ ಯಂತ್ರ ಕೊಡುಗೆ

0
103

ಶಿವಮೊಗ್ಗ ಡಿಸೆಂಬರ್ 14 : ಡಿ.14 ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇವರು ಸಿಎಸ್‍ಆರ್ ಚಟುವಟಿಕೆ ಅಡಿಯಲ್ಲಿ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮಕ್ಕೆ ಕ್ಷಯ ರೋಗಿಗಳ ಶೀಘ್ರ ಪತ್ತೆ ಮತ್ತು ಚಿಕಿತ್ಸೆಗಾಗಿ ಆಧುನಿಕ ಯಂತ್ರವಾದ ಟ್ರೂನ್ಯಾಟ್ ಯಂತ್ರವನ್ನು ಕೊಡುಗೆಯಾಗಿ ನೀಡಿದರು.

ಎಸ್‍ಬಿಐ ಡೆಪ್ಯೂಟಿ ಜನರಲ್ ಮ್ಯಾನೇಜರ್ ಜೋಬಿ ಜೋಶ್ ಹಾಗೂ ಶಿವಮೊಗ್ಗ ವಿಭಾಗದ ರೀಜನಲ್ ಮ್ಯಾನೇಜರ್ ಶ್ರೀಜಿತ್ ಇವರು ಟಿಬಿ ಮುಕ್ತ ಭಾರತ ಮಾಡುವ ಉದ್ದೇಶದಿಂದ ಟಿಬಿ ರೋಗಿಗಳ ಶೀಘ್ರ ಪತ್ತೆ ಮತ್ತು ಚಿಕಿತ್ಸೆಗಾಗಿ ಈ ಆಧುನಿಕ ಯಂತ್ರವನ್ನು ನೀಡಿದರು.

ಈ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ಮಾತನಾಡಿ, ಇಂತಹ ಕಾರ್ಯಕ್ರಮವನ್ನು ಅಧಿಕಾರಿಗಳು ಮಾಡುತ್ತಿರುವುದು ಪವಿತ್ರವಾದ ಕರ್ತವ್ಯವೆಂದು ಹೇಳಿದರು.

ಆರ್‍ಸಿಹೆಚ್‍ಓ ಡಾ. ನಾಗರಾಜ್ ನಾಯಕ್, ಡಿ ಟಿ ಓ ಡಾ. ದಿನೇಶ್ ಜಿ ಸಿ, ಡಾ. ಗುಡದಪ್ಪ ಕಸಬಿ, ಸಿಡಿಪಿಓ ಚಂದ್ರಪ್ಪ ಹಾಗೂ ಎಸ್ ಬಿ ಐ ನ ವ್ಯವಸ್ಥಾಪಕರಾದ ನಿಶಾಂತ್ ಗೌರವ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here