ರೈತರು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡುವ ಕೌಶಲ್ಯ ಬೆಳಸಿಕೊಳ್ಳಬೇಕು: ಎಂ.ವಿ.ವೆಂಕಟೇಶ್

0
56

ಮಂಡ್ಯ.ಡಿ.14 :- ರೈತರು ಪ್ರಮುಖವಾಗಿ ತಾವು ಬೆಳೆದಂತಹ ಕೃಷಿ ಉತ್ಪನ್ನಗಳಿಗೆ ಯಾವ ರೀತಿ ಮೌಲ್ಯ ವರ್ಧನೆ ಮಾಡಬೇಕು, ಅದರ ಜೀವಿತಾವಧಿಯನ್ನು ಹೇಗೆ ಹೆಚ್ಚಿಸಬೇಕು ಎಂಬುದನ್ನು ತಿಳಿದುಕೊಂಡರೆ ರೈತರು ತಾವು ಬೆಳೆದಂತಹ ಉತ್ವನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ಪಡೆದು ಲಾಭಂಶವನ್ನು ಪಡೆಯಬಹುದು ಎಂದು ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತರಾದ ಎಂ.ವಿ.ವೆಂಕಟೇಶ್ ತಿಳಿಸಿದರು.

ನಗರದ ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಮಾರಾಟಗಾರರ -ಖರೀದಿದಾರರ ಸಮ್ಮೇಳನ ಹಾಗೂ ಆಹಾರ ಮೇಳ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ದಕ್ಷಿಣ ಕರ್ನಾಟಕದಲ್ಲಿ ಶೇ.70-75 ರಷ್ಟು ರೈತರು ಸಣ್ಣ ಹಾಗೂ ಅತಿಸಣ್ಣ ರೈತರಿದ್ದಾರೆ. 10 ರಿಂದ 20 ಎಕರೆ ಜಮೀನು ಹೊಂದಿರುವ ರೈತರ ಸಂಖ್ಯೆ ವಿರಳ. ಸರಯಾದ ರೀತಿಯ ಕೃಷಿಪದ್ದತಿಯನ್ನು ಅಳವಡಿಸಿಕೊಳ್ಳದಿದ್ದರೆ, ರೈತರು ನಾನಾ ಸಮಸ್ಯೆಗಳಿಗೆ ಒಳಗಾಗುತ್ತಾರೆ ಎಂದರು.

ರೈತರು ಹೆಚ್ಚು ಸಂಘಟಿತರಾಗಿ, ಸದೃಢರಾಗಬೇಕು, ಅವರಿಗೆ ಹೊಸ ತಂತ್ರಜ್ಞಾನ, ಆವಿಷ್ಕಾರಗಳ ಪರಿಚಯ ಮಾಡಿಕೊಡಬೇಕು ಎಂಬ ಉದ್ದೇಶದಿಂದ ರೈತ ಉತ್ಪಾದನಾ ಸಂಸ್ಥೆಗಳನ್ನು ರಚನೆ ಮಾಡಲಾಗಿದೆ ಎಂದರು.

ಕರ್ನಾಟಕ ರಾಜ್ಯದಲ್ಲಿ 1200 ರೈತ ಉತ್ಪಾದನಾ ಸಂಸ್ಥೆಗಳನ್ನು ರಚನೆ ಮಾಡಲಾಗಿದೆ. ದೇಶದಲ್ಲೇ ಅತಿ ಹೆಚ್ಚು ಕೃಷಿ ಉತ್ಪದನಾ ಸಂಸ್ಥೆ ಕರ್ನಾಟಕದಲ್ಲಿದೆ‌. 10 ಲಕ್ಷಕ್ಕೂ ಹೆಚ್ಚು ರೈತರನ್ನು ಸಂಸ್ಥೆಗಳ ಮೂಲಕ ಸಂಘಟಿಸಲಾಗಿದೆ. ಆದರೂ ಕೂಡ ರೈತ ನಾನಾ ರೀತಿಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ ಎಂದರು.

ಆರ್ಥಿಕ ವವ್ಯಸ್ಥೆಯಲ್ಲಿ ರೈತ ತನಗೆ ಬೇಕಾದಂತಹ ಬಿತ್ತನೆ ಬೀಜ, ಗೊಬ್ಬರ ಅಥವಾ ರಸಗೊಬ್ಬರವನ್ನು ಅಂಗಡಿಗಳಲ್ಲಿ ಖರೀದಿಸುತ್ತಾರೆ. ತಾವು ಬೆಳೆದ ಕೃಷಿ ಉತ್ಪನ್ನವನ್ನು ಅಂಗಡಿಗಳ ಮೂಲಕ ಮಾರಾಟ ಮಾಡುತ್ತಾರೆ ರೈತ ಖರೀದಿ ಮತ್ತು ಮಾರಾಟ ಎರಡೂ ಸಂದರ್ಭದಲ್ಲಿಯೂ ಕೂಡ ಸಾರಿಗೆ ವೆಚ್ಚವನ್ನು, ಮಧ್ಯವರ್ತಿಗಳ ವೆಚ್ಚವನ್ನು ಪಾವತಿಸುವ ಏಕೈಕ ವ್ಯಕ್ತಿ. ಇದರಿಂದ ರೈತನಿಗೆ ದೊರಕುವ ಲಾಭ ಕಡಿಮೆಯಾಗುತ್ತದೆಎಂದರು.

ರೈತ ಉತ್ಪದಾಕ ಸಂಸ್ಥೆಯಲ್ಲಿ‌ ರೈತರಿಗೆ ಬೇಕಾಗುವ ಪರಿಕರಗಳು ರಿಯಾಯಿತಿ ದರದಲ್ಲಿ ದೊರೆಯುವಂತೆ ಮಾಡಲಾಗಿದೆ. ರೈತ ಉತ್ಪಾದನಾ ಸಂಸ್ಥೆಗಳು ರಚನೆಯಾದ ಮೇಲೆ ಮಾರುಕಟ್ಟೆಯಲ್ಲಿ ಹಲವಾರು ರಸಗೊಬ್ಬರ ಹಾಗೂ ಕೀಟನಾಶಕಗಳ ಬೆಲೆ ಕಡಿಮೆಯಾಗಿದೆ ಎಂದರು.

ರೈತರು ಉದ್ದಿಮೆದಾರರಾಗಬೇಕಾದರೆ ರೈತರು ಮಾರುಕಟ್ಟೆಗಳಿಗೆ ಲಗ್ಗೆ ಇಡಬೇಕು. ಖರೀದಿದಾರರಿಗೆ ಬೇಕಿರುವ ರೂಪಗಳಲ್ಲಿ ಕೃಷಿ ಉತ್ಪನ್ನಗಳನ್ನು ಸಂಸ್ಕರಿಸಿ ಮಾರಾಟ ಮಾಡಬೇಕು. ಪ್ರಗತಿಪರ ರೈತರು ಹೆಚ್ಚಿನ ಲಾಭ ಪಡೆಯುತ್ತಿರುವ ಉದಾಹರಣೆಗಳು ನಮ್ಮ ಮುಂದೆ ಇದೆ. ಅವರನ್ನು ಅನುಸರಿಸಿ ಎಂದರು.

ಇತ್ತೀಚಿನ ದಿನಗಳಲ್ಲಿ ಹೊಸ ತಂತ್ರಜ್ಞಾನವನ್ನು ಪರಿಚಯ ಮಾಡಿದ್ದು, ಒಂದು ನಿಂಬೆ ಹಣ್ಣನ್ನು ಏರ್ ಡ್ರೈಯರ್ ಮಿಷನ್ ನಲ್ಲಿ ಡ್ರೈ ಮಾಡಿ ಅದನ್ನು ಹೊರ ದೇಶಗಳಿಗೆ ರಫ್ತು ಮಾಡಿದರೆ ಒಂದು ನಿಂಬೆ ಹಣ್ಣಿನ ಬೆಲೆ 20ರೂ ಸಿಗುತ್ತಿದೆ. ಇದು ಮೌಲ್ಯ ವರ್ಧನೆ. ರೈತರು ತಾವು ಬೆಳೆದ ಉತ್ಪನ್ನಗಳ ಮೌಲ್ಯವರ್ಧನೆ ಮಾಡುವ ಬಗ್ಗೆ ಚಿಂತಿಸಬೇಕು ಎಂದರು.

LEAVE A REPLY

Please enter your comment!
Please enter your name here