ಒ.ಪಿ ನರ್ಸಿಂಗ್ ಕಾಲೇಜಿನ ಸಹಯೋಗದಲ್ಲಿ “ಸಾರ್ವತ್ರಿಕ ಆರೋಗ್ಯ ಸೇವಾ ದಿನಾಚರಣೆ” ಕುರಿತು ಜಾಗೃತಿ.

0
243

ತಾಲೂಕಿನ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಜಿಂದಾಲ್ ನರ್ಸಿಂಗ್ ಕಾಲೇಜಿನ ಸಹಯೋಗದಲ್ಲಿ ಸಾರ್ವತ್ರಿಕ ಆರೋಗ್ಯ ದಿನಾಚರಣೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು,

ಕಾರ್ಯಕ್ರಮದಲ್ಲಿ ಡಾ.ಗೋಪಾಲ್ ರಾವ್ ಮಾತನಾಡಿ ಎಲ್ಲಾ ಸಾರ್ವಜನಿಕರಿಗೆ ಯಾವುದೇ ಖರ್ಚಿಲ್ಲದೇ ಸಮಗ್ರ ಆರೋಗ್ಯ ಸೇವೆಗಳನ್ನು ಕೈಗೆಟುಕುವಂತೆ ಮಾಡುವುದೇ ಸಾರ್ವತ್ರಿಕ ಆರೋಗ್ಯ ಸೇವೆಯ ಉದ್ದೇಶವಾಗಿದೆ ಎಂದು ತಿಳಿಸಿದರು,

ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಎನ್.ಹೆಚ್.ಎಮ್ ಅಡಿಯಲ್ಲಿ ರೋಗಗಳನ್ನು ನಿಯಂತ್ರಣ ಮಾಡುವುದು, ಹಳ್ಳಿ ಅಥವಾ ಪಟ್ಟಣಗಳಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಗುಣಾತ್ಮಕ ಸೇವೆಗಳನ್ನು ಸಮೀಪದ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು, ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ದೊರೆಯ ಬೇಕು, ಹೆಚ್ಚುವರಿ ಚಿಕಿತ್ಸೆಯನ್ನು ತಾಲೂಕು‌ ಮತ್ತು ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿ ಅತೀ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ದೊರೆಯವಂತೆ ಮಾಡುವುದು ಹಾಗೂ ಜನರ ಆರೋಗ್ಯ ಸುಧಾರಿಸಿ, ಜೀವಿತ ಅವಧಿಯ ಮಟ್ಟವನ್ನು ಹೆಚ್ಚಿಸುವ ಗುರಿಯನ್ನು ಇಟ್ಟುಕೊಂಡು ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದರು,

ಈ ಕಾರ್ಯಕ್ರಮದಲ್ಲಿ ಅರೋಗ್ಯ ಇಲಾಖೆಯ ಯೋಜನೆಗಳ ಬಗ್ಗೆ ನರ್ಸಿಂಗ್ ವಿದ್ಯಾರ್ಥಿಗಳಾದ ಆಶಾ,ಚೈತ್ರ,ದೀಪಾ ಮತ್ತು ತಂಡ ವಿವರಣೆ ನೀಡಿದರು, ಹಾಗೆ ತಾಯಿ ಮತ್ತು ಮಕ್ಕಳ ಆರೋಗ್ಯ ವೃದ್ಧಿ ಬಗ್ಗೆ ನಿಶಾ, ಮಧುಶ್ರೀ, ಲಕ್ಷ್ಮಿ ವಿವರಣೆ ನೀಡಿದರು, ಆರ್.ಸಿ.ಹೆಚ್ ಬಗ್ಗೆ ಕಾಳೇಶ್ವರಿ, ಕವಿತಾ, ಲಸಿಕಾ ಕಾರ್ಯಕ್ರಮ ಮತ್ತು ಇತರೆ ಕಾರ್ಯಕ್ರಮಗಳ ಬಗ್ಗೆ ನಾಗವೇಣಿ, ಮೇಘನಾ, ಕವಿತಾ, ಭಾಗ್ಯ, ಶ್ವೇತಾ, ಅನುಷಾ,ಸುಮನ್, ತೇಜಸ್ವಿನಿ, ಶಿಲ್ಪಾ ವಿವರಣೆ ನೀಡಿದರು,

ಈ ಸಂದರ್ಭದಲ್ಲಿ ನರ್ಸಿಂಗ್ ಕಾಲೇಜಿನ ಉಪನ್ಯಾಸಕರಾದ ವಿಜಯಲಕ್ಷ್ಮಿ, ವಿಂದ್ಯಾ, ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಗೋಪಾಲ್ ರಾವ್, ಡಾ.ಪ್ರಿಯಾಂಕ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ವಿವಿಧ ಆರೋಗ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಹಾಜರಿದ್ದರು

LEAVE A REPLY

Please enter your comment!
Please enter your name here