ಸಂಡೂರು ತಾಲೂಕಿನ 12 ಗ್ರಾಮಗಳಲ್ಲಿ ಬಯಲು ಜಿಮ್ ನಿರ್ಮಾಣ ಕಾಮಗಾರಿ ಆರಂಭಕ್ಕೆ ಚಾಲನೆ ನೀಡಿದ ಶಾಸಕ ತುಕಾರಾಮ್

0
690

ಸಂಡೂರು:ಜುಲೈ:05:-ಶುಭ್ರ ಶ್ವೇತ ವಸ್ತ್ರದಾರಿ, ಮಂದಸ್ಮಿತ ಮುಖ ಯಾವುದೇ ಹಮ್ಮು- ಬಿಮ್ಮು ಅರಿಯದ ಸರಳ ವ್ಯಕ್ತಿತ್ವ “ಜನ ಸೇವೆಯೇ ಜನಾರ್ದನನ ಸೇವೆ” ಎನ್ನುವ ತತ್ವದಡಿ ನಂಬಿಕೆ ಇಟ್ಟು ಅದನ್ನೇ ತಮ್ಮ ಗುರಿಯಾಗಿಸಿಕೊಂಡು ರಾಜಕೀಯ ಕ್ಷೇತ್ರದಲ್ಲಿ ಹೆಸರು ಮಾಡಿದವರು ಹಿರಿಯ ರಾಜಕಾರಣಿ ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರದ ಶಾಸಕ ಈ. ತುಕಾರಾಮ್.

ಸಾಮಾಜಿಕ ಸೇವೆ, ನೊಂದವರ ಕಷ್ಟಕ್ಕೆ ಸ್ಪಂದಿಸುವುದು ಹಾಗೂ ಸಮಗ್ರ ಅಭಿವೃದ್ಧಿ ಇದು ರಾಜಕೀಯ ಕ್ಷೇತ್ರದಲ್ಲಿ ದುಡಿಯುವವರ ಮೂಲ ಮಂತ್ರವಾಗಬೇಕು ಎಂಬುದನ್ನು ಚೆನ್ನಾಗಿ ಅರಿತಿರುವ ತುಕಾರಾಮ್ ಇಂದಿಗೂ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ, ಅವರು ಸಂಡೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಹರಿಕಾರ ಎನಿಸಿಕೊಂಡಿದ್ದಾರೆ.

ಕ್ಷೇತಕ್ಕೆ ಶಾಸಕರಾದ ನಂತರ ಇಂದಿನವರೆಗೂ ಇಡೀ ಕ್ಷೇತ್ರದಲ್ಲಿ ಸಂಚರಿಸುತ್ತ ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಾ ಇಡೀ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಪಣತೊಟ್ಟು ಕಾರ್ಯೋನ್ಮುಖರಾಗಿದ್ದಾರೆ, ಕಳೆದ ಮೂರು ಬಾರಿ ಗೆಲುವು ಸಾಧಿಸಿದ ಅವದಿಗಳಲ್ಲಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ಇವರ ಕಾರ್ಯಕ್ಷಮತೆಗೆ ಹಿಡಿದ ಕನ್ನಡಿಯಾಗಿದೆ.

ಇಂದಿನ ಯುವಕರು ಇತ್ತೀಚೆಗಂತೂ ದೇಹ ಬೆಳೆಸಿಕೊಳ್ಳಲು ಜಿಮ್ ಗೆ ಹೋಗಿ ಕಸರತ್ತು ಮಾಡುವ ಯುವಕರ ಸಂಖ್ಯೆ ಹೆಚ್ಚಾಗಿದೆ. ಬೆಳಗಾದರೆ, ಜಿಮ್ ಗಳು ಭರ್ತಿಯಾಗಿರುತ್ತದೆ. ಬೆಳಗಿನ ಸ್ಲಾಟ್ ಸಿಗುವುದಿಲ್ಲ. ಅಷ್ಟರಮಟ್ಟಿಗೆ ಎಲ್ಲ ಜಿಮ್ ಗಳೂ ಭರ್ತಿ. ಆದರೆ ಇವೆಲ್ಲಾ ಸೌಲಭ್ಯವಿರುವ ಜಿಮ್ ಗಳು ಹಳ್ಳಿಗಳಲ್ಲಿ ಸಿಗುವುದಿಲ್ಲ, ಇಂತಹ ಸೌಲಭ್ಯ ವಂಚಿತವಾಗಿರುವ ಯುವಕರಿಗೆ ಜಿಮ್ ಉಪಯೋಗವಾಗಬೇಕೆನ್ನುವ ದೂರಾಲೋಚನೆ ಇಟ್ಟುಕೊಂಡು ಶಾಸಕ ತುಕಾರಾಮ್ ರವರು ಸಂಡೂರು ವಿಧಾನಸಭಾ ಕ್ಷೇತ್ರದ 12 ಹಳ್ಳಿಗಳಲ್ಲಿ 2020-22ನೇ ಸಾಲಿನ ಜಿಲ್ಲಾ ಖನಿಜ ಪ್ರತಿಷ್ಠಾನ ವತಿಯಿಂದ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನಲ್ಲಿನ 12 ಗ್ರಾಮಗಳಲ್ಲಿ ಬಯಲು ಜಿಮ್ ನಿರ್ಮಾಣ ಕಾಮಗಾರಿಯನ್ನು ಆರಂಭಿಸಿದ್ದು,ಕಾಮಗಾರಿ ಪ್ರಗತಿಯ ಹಂತದಲ್ಲಿವೆ.

ಬಯಲು ಜಿಮ್ ಗಳ ನಿರ್ಮಾಣ ಕಾಮಗಾರಿಯನ್ನು ಬಳ್ಳಾರಿ ನಿರ್ಮಿತಿ ಕೇಂದ್ರದಡಿಯಲ್ಲಿ ನಡೆಯುತ್ತಿದೆ

ಕಾಮಗಾರಿಗಳು ನಡೆಯುವ ಸ್ಥಳಗಳ    ಅಂದಾಜು ಪಟ್ಟಿ
  1. ಕೃಷ್ಣಾನಗರ -17.00 (ಲಕ್ಷ ರೂ)
  2. ಭುಜಂಗನಗರ -14.00 (ಲಕ್ಷ ರೂ)
  3. ಸುಶೀಲಾನಗರ -14.00 (ಲಕ್ಷ ರೂ)
  4. ತುಂಬರಗುದ್ದಿ -14.00 (ಲಕ್ಷ ರೂ)
  5. ತೋರಣಗಲ್ಲು -17.00 (ಲಕ್ಷ ರೂ)
  6. ಸೊವೇನಹಳ್ಳಿ -14.00 (ಲಕ್ಷ ರೂ)
  7. ಯಶವಂತನಗರ -17.00 (ಲಕ್ಷ ರೂ)
  8. ನಂದಿಹಳ್ಳಿ -17.00 (ಲಕ್ಷ ರೂ)
  9. ಕುರೆಕುಪ್ಪ -14.00(ಲಕ್ಷ ರೂ)
  10. ಬೊಮ್ಮಘಟ್ಟ -14.00 (ಲಕ್ಷ ರೂ)
  11. ಚೋರನೂರು -14.00 (ಲಕ್ಷ ರೂ)
  12. ಬಂಡ್ರಿ -14.00 (ಲಕ್ಷ ರೂ)

LEAVE A REPLY

Please enter your comment!
Please enter your name here