ಮೋಟಾರ್ ವಾಹನಗಳ ಮೇಲೆ ವಿಧಿಸಿರುವ ದುಬಾರಿ ಶುಲ್ಕವನ್ನು ಹಿಂಪಡೆಯಿರಿ ಕೆ.ಎಂ. ಸಂತೋಷ್ ಕುಮಾರ್

0
184

ಕೊಟ್ಟೂರು: ರಸ್ತೆ ಸಾರಿಗೆ ವ್ಯವಸ್ಥೆಯು ಜನಜೀವನದ ಜೀವನಾಡಿ ಸಾರಿಗೆ ವ್ಯವಸ್ಥೆ ಇಲ್ಲದೆ ಸಮಾಜವನ್ನು ಕಲ್ಪಿಸುವುದು ಸಾಧ್ಯವಿಲ್ಲ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಕೆ. ಎಂ. ಸಂತೋಷ್ ಕುಮಾರ್ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರದಂದು ಆಟೋ ನಿಲ್ದಾಣದಲ್ಲಿ ನಡೆದ ಆಲ್ ಇಂಡಿಯಾ ರೋಡ್ ಟ್ರಾನ್ಸ್ಪೋರ್ಟ್ ವರ್ಕರ್ಸ್ ಫೆಡರೇಷನ್ ವತಿಯಿಂದ ಹಮ್ಮಿಕೊಂಡಿದ್ದ ರಸ್ತೆ ಸಾರಿಗೆ ಕಾರ್ಮಿಕರ ಜಿಲ್ಲಾಮಟ್ಟದ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು ದುಬಾರಿ ದಂಡ ಹಾಗೂ ದುಬಾರಿ ಶುಲ್ಕ ವಿಧಿಸಿರುವ ಮೋಟಾರ್ ವಾಹನಗಳ (ತಿದ್ದುಪಡಿಗಳ) ಕಾಯ್ದೆ 2019 ವಾಪಸ್ ಪಡೆಯಬೇಕು. ಖಾಸಗಿ ವಾಣಿಜ್ಯ ವಾಹನಗಳ ಚಾಲಕರು, ನಿರ್ವಾಹಕರು, ಮೆಕ್ಯಾನಿಕ್ ಗಳು ಆಟೋಮೊಬೈಲ್, ವೆಲ್ದರ್ ಟಿಂಕರಿಂಗ್ ಇತ್ಯಾದಿ ಕೆಲಸ ಮಾಡುವ ಅಸಂಘಟಿತ ರಸ್ತೆ ಸಾರಿಗೆ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಕಾಯ್ದೆ ಮತ್ತು ಕಲ್ಯಾಣ ಮಂಡಳಿ ಜಾರಿಗೆ ಮಾಡಬೇಕು.

ವಿದ್ಯುತ್ ಬಸ್ ಗಳ ಹೆಸರಿನಲ್ಲಿ ಸಾರ್ವಜನಿಕರ ಸಾರಿಗೆ ನಿಯಮಗಳ ಖಾಸಗೀಕರಣ ನಿಲ್ಲಿಸಬೇಕು ಓಲಾ, ಉಬರ್, ರಾಪಿಡೋ ನಮ್ಮ ಯಾತ್ರಿ ಮುಂತಾದ ಖಾಸಗಿ ಆಪ್ ಗಳಿಗೆ ಪರ್ಯಾಯವಾಗಿ ಸರ್ಕಾರವೇ ರೂಪಿಸಬೇಕು ಒತ್ತಾಯಿಸಿದರು.

ಮರ್ತೋವ ಕಾರ್ಯದರ್ಶಿಗಳಾದ ಕೆ ಕೈಲಾಶ್ ಮೂರ್ತಿ ಮಾತನಾಡಿ 15 ವರ್ಷಗಳ ಹಳೆಯ ವಾಹನಗಳ ನಿಷೇಧ ವಾಪಸ್ ಪಡೆದುಕೊಳ್ಳಬೇಕು. ಪೆಟ್ರೋಲ್ ಡೀಸೆಲ್ ಹಾಗೂ ಗ್ಯಾಸ್ ಮೇಲೆ ಹಾಕಿರುವ ತೆರಿಗೆಯನ್ನು ಕಡಿಮೆಗೊಳಿಸಬೇಕು. 15 ವರ್ಷಗಳ ಹಳೆಯ ವಾಹನಗಳ ನಿಷೇಧ ವಾಪಸ್ ಪಡೆಯಬೇಕು ಸಾರಿಗೆ ವಾಹನಗಳ ಇನ್ಸೂರೆನ್ಸ್ ಪಾಲಿಸಿಗಳ ಮೇಲೆ ವಿಧಿಸಿರುವ ಜಿಎಸ್ ಟಿ ಅನ್ನು ಕೈ ಬಿಡಬೇಕು. ಕರ್ನಾಟಕ ಗೃಹ ಮಂಡಳಿ ಬಿ ಎ ಡಿ ಮುಂತಾದ ಗೃಹ ಸಂಸ್ಥೆಗಳ ಮೂಲಕ ಸರ್ವರಿಗೂ ಸೂರು ಎಂಬ ಸರಕಾರದ ಆಶಯ ಜಾರಿಗೊಳಿಸಬೇಕು ಸಾರಥಿ ಸೂರು ಯೋಜನೆ ಜಾರಿ ಮಾಡಬೇಕು ಹೊಸ ವಾಹನಗಳ ಮೇಲಿನ ಸರ್ಕಾರದ ಮಾರಾಟ ತೆರಿಗೆಯನ್ನು ಶೇಕಡ 28 ರಿಂದ ಶೇ.5 ಕ್ಕೆ ಇಳಿಸಲು ಮತ್ತು ಇತರೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.

ರಾಜ್ಯಮಟ್ಟದ ಸಮಾವೇಶವೂ ಇದೆ ಅಕ್ಟೋಬರ್ 29ರಂದು ಭಾನುವಾರ ಬೆಳಗ್ಗೆ 10.30 ಕ್ಕೆ ಬೆಂಗಳೂರಿನ ಗುಂಡೂರಾವ್ ಸಭಾಂಗಣ ಭಾಷಾಂ ಪಾರ್ಕ್ ಶೇಷಾದ್ರಿಪುರಂ ನಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು ಎಂದರು.

ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯರಾದ ಎಸ್ ಅನಂತಶಯನ, ಹೊಸಪೇಟೆ ತಾಲೂಕಿನ ಆಟೋ ಡ್ರೈವರ್ ಸಂಘದ ಉಪಾಧ್ಯಕ್ಷ ಹುಸೇನ್ ಸಾಬ್, ಕೊಟ್ಟೂರಿನ ಆಟೋ ಡ್ರೈವರ್ ಹಿರಿಯ ಚಾಲಕರಾದ ಬಂಡಿ ಕೊಟ್ರೇಶ್, ವಡೇರಹಳ್ಳಿ ದೊಡ್ಡಪ್ಪ, ಜೋಳ್ಳಿ ಪರಶುರಾಮ್, ಬೇವೂರ್ ಅಜ್ಜಯ್ಯ, ಕನ್ನಕಟ್ಟೆ ಪರಶುರಾಮ್, ರಮೇಶಣ್ಣ, ರಾಮಜ್ಜ, ವಿ ಸಿದ್ದೇಶ್, ಹೆಚ್ ಅನಿಲ್ ಕುಮಾರ್, ಚಂದ್ರಶೇಖರ್, ಹಾಲೇಶ್, ಅಭಿಷೇಕ್, ಕಾರ್ತಿಕ್ ,ಕೊಟ್ರೇಶ್, ಚೌಡೇಶ್, ಹಾಗೂ ಗುಲಾಬಿ ಪ್ರದೀಪ್, ಎಲ್ಲಾ ಆಟೋ ಚಾಲಕರು ಸಾರ್ವಜನಿಕರು ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here