ಮಹಾಗಣೇಶ ದೇವಸ್ತಾನದ ಆವರಣದಲ್ಲಿ ಮಹಾಶಿವರಾತ್ರಿ ಮಹೋತ್ಸವದ ಪ್ರಯುಕ್ತ ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ ಹಾಗೂ ಆಧ್ಯಾತ್ಮಿಕ ಚಿತ್ರ ಪ್ರದರ್ಶನ,

0
27

ಸಂಡೂರು: ಮಾ: 09: ತಾಲೂಕಿನ ಜಿಂದಾಲ್ ಕಂಪನಿಯ ವಿದ್ಯಾನಗರದಲ್ಲಿರುವ ಗಣೇಶ ದೇವಸ್ಥಾನದ ಆವರಣದಲ್ಲಿ ಮಹಾಶಿವರಾತ್ರಿಯ ಮಹೋತ್ಸವನ್ನು ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಂದಾಲ್ ಕಂಪನಿಯ ಸುನಿಲ್ ರಾಲ್ಫ್ ವಿ ಪಿ ಅವರು ಭಾಗವಹಿಸಿ ಕಾರ್ಯಕ್ರಮದ ಶಿವ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಅವರು ಒಂದೇ ಸ್ಥಳದಲ್ಲಿ ದ್ವಾದಶ ಜ್ಯೋತಿರ್ಲಿಂಗದ ಪ್ರದರ್ಶನ ಅನೇಕ ಭಕ್ತರ ಪೂಜೆಗೆ, ಭಾವನೆಗೆ, ಭಕ್ತಿಗೆ ಅನುಕೂಲವಾಗಿದೆ, ಮಹಾಶಿವರಾತ್ರಿ ಎಲ್ಲರಿಗೂ ಮಂಗಳವಾಗಲಿ ಶುಭವಾಗಲಿ ಎಂದು ಹಾರೈಸು ಹಾರೈಸಿದರು. ಹಾಗೂ ಈ ಕಾರ್ಯಕ್ರಮದ ಮತ್ತೋರ್ವ ಅತಿಥಿಗಳಾದಂತಹ ಜಿಂದಾಲ್ ಲೇಡೀಸ್ ಕ್ಲಬನ ಮುಖ್ಯ ಅಧ್ಯಕ್ಷರು ನೀತಾ ನಾವೆಲ್ ಅವರು ಮಾತನಾಡಿ ಇಂದು ವಿಶೇಷವಾಗಿ ಮಹಾಶಿವರಾತ್ರಿ ಮತ್ತು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಾರಿ ಶಕ್ತಿ ಒಬ್ಬರೇ ಇಲ್ಲ ಶಿವನ ಜೊತೆಗೆ ಶಕ್ತಿಯು ಕೂಡ ಇದೆ. ಶಿವನ ಶಕ್ತಿಯನ್ನು ಇಂದು ನಾವು ಪ್ರತಿನಿತ್ಯವು ನಾವು ಶಿವನ ಶಕ್ತಿಯೊಂದಿಗೆ ಪ್ರತಿಯೊಂದು ಕರ್ಮ ಮಾಡಿದಾಗ, ನಮ್ಮ ದಿನಚರಿ ಮತ್ತು ನಮ್ಮ ಜೀವನ ಮಹಾನ್ ಆಗುತ್ತದೆ, ಎಲ್ಲರಿಗೂ ಶುಭವಾಗಲಿ, ಎಲ್ಲರ ಮನೋಕಾಮನೆ ಪೂರ್ಣವಾಗಿರಲಿ ಎಂದು ಹಾರೈಸಿದರು.

ಮತ್ತೋರ್ವ ಅತಿಥಿಯಾದ ಲೇಡೀಸ್ ಕ್ಲಬ್‌ನ ಅಧ್ಯಕ್ಷರಾದ ಸ್ವರ್ಣ ರಾಜಶೇಖರ್ ಪಟ್ಟಣ್ ಶೆಟ್ಟಿ ಅವರು ಮಾತನಾಡಿ ದ್ವಾದಶ ಜ್ಯೋತಿರ್ಲಿಂಗ ಎಲ್ಲರಿಗೂ ಖುಷಿ ಸಂತೋಷವನ್ನು ತಂದು ಕೊಟ್ಟಿದೆ ಎಂದು ಶುಭ ಹಾರೈಸಿದರು.

ಈ ಕಾರ್ಯಕ್ರಮದ ಪ್ರವಚನಕಾರರಾದಂತಹ ರಾಜ ಯೋಗಿನಿ ಬ್ರಹ್ಮಕುಮಾರಿ ರಾಜೇಶ್ವರಿ ಅಕ್ಕನವರು ಮಹಾಶಿವರಾತ್ರಿಯ ಪ್ರಯುಕ್ತ ವಿಶೇಷವಾಗಿ ಇಂದು ಉಪವಾಸ ಜಾಗರಣೆ ದಾನವನ್ನು ಮಾಡುತ್ತಾರೆ, ಸತ್ಯವಾದ ಆಧ್ಯಾತ್ಮಿಕ ರಹಸ್ಯವನ್ನು ತಿಳಿದುಕೊಂಡು ನಿತ್ಯ ಉಪವಾಸ ಮತ್ತು ಜಾಗರಣೆ ಮಾಡುವುದು ಅರ್ಥಾತ್ ಸ್ವಯಂ ನಮ್ಮನ್ನು ನಿರಾಕರಿ ಅಜರ ಅಮರ ಅವಿನಾಶಿ ಚೈತನ್ಯ ಆತ್ಮಗಳೆಂದು ತಿಳಿದು ಈ ಭಾರತಕ್ಕೆ ಭಗವಂತ ಪರಮಾತ್ಮನ ಅವತರಣೆ ಈ ಭೂಮಿಯ ಮೇಲೆ ಆಗಿ 88 ವರ್ಷಗಳಾಗಿದೆ, ಎಲ್ಲಾ ಮನುಕುಲದ ಉದ್ಧಾರಕ್ಕಾಗಿ ಎಲ್ಲಾ ಮಾನವರ ಪಾಪಗಳನ್ನು ಭಸ್ಮ ಮಾಡಿ ತಮ್ಮನ್ನು ಆತ್ಮ ಎಂದು ತಿಳಿದು ಮನಸ್ಸು ಬುದ್ಧಿಯನ್ನ ತಂದೆ ಜೊತೆಗೆ ಏಕಾಗ್ರ ಮಾಡುವುದೇ ಉಪವಾಸ ವ್ರತ, ಉಪ ಎಂದರೆ ನೆನಪು ವಾಸ ಎಂದರೆ ಹತ್ತಿರ ಸ್ವಯಂ ನಿಮ್ಮನ್ನು ಆತ್ಮ ಎಂದು ತಿಳಿದು ತಂದೆ ಜೊತೆಗೆ ಸಂಬಂಧವನ್ನು ಜೋಡಿಸುದೆ ನಿರಂತರ ಉಪವಾಸವಾಗಿದೆ. ನಮ್ಮಲ್ಲಿರುವಂತಹ ಲೋಪದೋಷಗಳನ್ನ ದುರ್ಬಲತೆಗಳನ್ನು ಪರಮಾತ್ಮನಿಗೆ ಸೂಕ್ಷ್ಮವಾಗಿ ದಾನವಾಗಿ ಕೊಡುವುದೇ ದಾನವಾಗಿದೆ, ಚಿಕ್ಕ ಪುಟ್ಟ ನಿತ್ಯ ಜೀವನದಲ್ಲಿ ಸಾಂಸಾರಿಕ ಜೀವನದಲ್ಲಿ ಬದಲಾವಣೆಗಳನ್ನು ಮಾಡಿಕೊಂಡು ಸರಳ ಜೀವನ ನಡೆಸುವುದೇ ಉಪವಾಸ ವ್ರತವಾಗಿದೆ, ನಮ್ಮ ಪ್ರತಿಯೊಂದು ಕರ್ಮಗಳ ಮೇಲೆ, ಆಲೋಚನೆಗಳ ಮೇಲೆ, ವಿಚಾರಗಳ ಮೇಲೆ ಗಮನಹರಿಸುವುದೇ ಜಾಗರಣೆಯಾಗಿದೆ, ಇಂತಹ ಒಂದು ಸತ್ಯ ಶಿವರಾತ್ರಿಯ ರಹಸ್ಯವನ್ನು ತಿಳಿದುಕೊಂಡು ಭಕ್ತಿಯ ಮಾರ್ಗದಲ್ಲಿ ಪರಮಾತ್ಮನನ್ನು ಈಶ್ವರ ದೇವಸ್ಥಾನದಲ್ಲಿ ಶಿವಲಿಂಗ ರೂಪದಲ್ಲಿ ನಾವು ದರ್ಶನವನ್ನು ಮಾಡುತ್ತೇವೆ, ಕಾರಣ ಪರಮಾತ್ಮ ತನ್ನದೇ ಆದಂತಹ ದೇಹವಿಲ್ಲ ಅವರು ನಿರಾಕಾರ ಸರ್ವಶಕ್ತಿವಂತ ಪತಿತ ಪಾವನ ಕಲ್ಯಾಣ ಕಾಲಿ ಶುಭಕಾರಿ ಮಂಗಳಕಾರಿ ದುಃಖ ಹರ್ಥ ಸುಖ ಕರ್ತ ಆಗಿದ್ದಾರೆ, ತಮ್ಮ ಪರಿಚಯವನ್ನು ಕೊಟ್ಟು ನಮ್ಮ ಜನ್ಮಜನ್ಮಾಂತರದ ಪಾಪಗಳಿಂದ ಮುಕ್ತಿ ಮಾಡಿ ಇದೇ ಕಲಿಯುಗದ ಜಗತ್ತು ಪರಿವರ್ತನೆಯಾಗಿ ಮುಂದೆ ಹೊಸ ಜಗತ್ತು ಸತ್ಯಯುಗಿ ದೇವಭೂಮಿ ದೇವಲೋಕ ಬರಲಿದೆ, ಆ ಸ್ಥಾನದಲ್ಲಿ ನಾವು ಜನ್ಮ ತೆಗೆದುಕೊಳ್ಳಲು ಪ್ರತಿನಿತ್ಯ ರಾಜಯೋಗದ ಅಭ್ಯಾಸವನ್ನು ಮಾಡಬೇಕಾಗಿದೆ, ನಮ್ಮಿಂದ ಎಷ್ಟು ಸಾಧ್ಯವಾಗುತ್ತದೆ ಅಷ್ಟು ತಮ್ಮ ಸಂಬಂಧಿಕರಿಗೆ ಮತ್ತು ಸ್ನೇಹಿತರಿಗೆ ಖುಷಿ ಸಂತೋಷ ಮತ್ತು ಆನಂದ ಕೊಡುವಂತಹ ಕರ್ಮಗಳನ್ನು ಮಾಡುವುದೇ ಉಪವಾಸ ಪ್ರತಿಜ್ಞೆ ಮಾಡುವುದಾಗಿದೆ, ಹೀಗೆ ಮಹಾಶಿವರಾತ್ರಿಯ ಪ್ರಯುಕ್ತ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಸಂಸ್ಥೆಯವರಿಗೆ ಜಿಂದಾಲ್ ಕಂಪನಿಯು ಸಹಕಾರ ಕೊಟ್ಟು ಸೇವೆ ಮಾಡಲು ಸಹಯೋಗ ಕೊಟ್ಟಿರುವ ಕಾರಣ ಜಿಂದಾಲ್ ಕಂಪನಿಯ ವಿದ್ಯಾನಗರದ ಅಡ್ಮಿನ್ ಆಫೀಸ್ ಹಾಗೂ ದೇವಸ್ಥಾನದ ಕಮಿಟಿಯವರು ಸಹಕಾರ ಕೊಟ್ಟು ಈ ಒಂದು ಸೇವೆಯನ್ನು ಯಶಸ್ವಿಯಾಗಿ ಮಾಡಿರುವುದಕ್ಕೆ ಮಹಾಶಿವರಾತ್ರಿಯ ಸಂದರ್ಭದಲ್ಲಿ ಕಂಪನಿಯು ನಿರ್ವಿಘ್ನವಾಗಿ ನಡೆಯಲಿ, ಕಂಪನಿಯಲ್ಲಿ ಕೆಲಸ ಮಾಡುವಂತಹ ಎಲ್ಲಾ ಕುಟುಂಬದವರಿಗೆ ಖುಷಿ ಸಂತೋಷ ಲಭಿಸಲಿ ಎಂದು ಈ ಸಂದರ್ಭದಲ್ಲಿ ರಾಜಯೋಗಿನಿ ಬ್ರಹ್ಮಕುಮಾರಿ ರಾಜೇಶ್ವರಿ ಅಕ್ಕನವರು ತಮ್ಮ ಪ್ರವಚನದಲ್ಲಿ ತಿಳಿಸಿಕೊಟ್ಟರು.

ಈ ಕಾರ್ಯಕ್ರಮಕ್ಕೆ ರಾಜಯೋಗಿ ಸಾಧಕರದಂತಹ ಬಿ.ಕೆ ವಾಸುದೇವ, ಹಾಗೂ ಬಿ.ಕೆ ಸಿದ್ದಪ್ಪ, ಬಿ.ಕೆ ಬಸವರಾಜಣ್ಣ, ಬಿ.ಕೆ ಸುವರ್ಣ, ಬಿಕೆ ಸರಸ್ವತಿ, ಬಿ.ಕೆ ರೂಪಾ, ಆಗಮಿಸಿದ್ದರು. ಈ ಸಂದರ್ಭದಲ್ಲಿ ಕು|| ಸುನಂದ ಇವರು ಮಾಡಿದ ಶಿವ ತಾಂಡವ ನೃತ್ಯದ ಮುಖಾಂತರ ಎಲ್ಲರನ್ನ ಶಿವಾಪರಮಾತ್ಮನ ಜೊತೆಗೆ ಮನ ಒಲಿಯುವಂತೆ ಮಾಡಿ ನೆರೆದವರ ಮನಮೆಚ್ಚಿಗೆ ಯಾಯಿತು.

ಈ ಕಾರ್ಯಕ್ರಮಕ್ಕೆ ಜಿಂದಾಲ್ ಕಂಪನಿಯ ಅಡ್ಮಿನ್ ಇಂಚಾರ್ಜ್ ಆದಂತಹ ಸಂಜಯ್ ಹಿರೇಮಠ್, ಎ. ವಿ. ಪಿ ಅಡ್ಮಿನ್, ಸಿ. ಪಿ ಸಿಂಗ್ ಡಿ.ಜಿ.ಎಂ ಅವರು ಹಾಗೂ ಸಾವಿರಾರು ಸದ್ಭಕ್ತರು ದ್ವಾದಶ ಜ್ಯೋತಿರ್ಲಿಂಗ ದರ್ಶನವನ್ನು ಮಾಡಿ ಬಹಳಷ್ಟು ಖುಷಿ ಆನಂದವನ್ನು ಸಂಭ್ರಮಿಸಿದರು

LEAVE A REPLY

Please enter your comment!
Please enter your name here