ಮುನಿಸಿಪಲ್ ಮೈದಾನದಲ್ಲಿ ಮತ್ಸ್ಯಲೋಕ ಅನಾವರಣ ; ದೇಶಿ ಹಾಗೂ ವಿದೇಶಿ ಮೂಲದ ಮೀನುಗಳ ಪ್ರದರ್ಶನ

0
126

ಬಳ್ಳಾರಿ,ಜ.21: ಸ್ವಚ್ಛ ತಿಳಿ ನೀರಿನ ತೊಟ್ಟಿಯಲ್ಲಿ ವಿವಿಧ ವರ್ಣದ ಮತ್ಸ್ಯಗಳು ಅತ್ತಿಂದ ಇತ್ತ, ಇತ್ತಿಂದ ಅತ್ತ ಈಜುವುದನ್ನು ನೋಡುವದೇ ಆಹ್ಲಾದಕರ. ಬಳ್ಳಾರಿ ಉತ್ಸವದ ಅಂಗವಾಗಿ ಮುನಿಸಿಪಲ್ ಮೈದಾನದಲ್ಲಿ ಮೀನುಗಾರಿಕೆ ಇಲಾಖೆ ವತಿಯಿಂದ ಆಯೋಜಿಸಲಾಗಿರುವ ಮತ್ಸ್ಯಮೇಳ ಸಾಗರದ ಆಳದಲ್ಲಿನ ಮತ್ಸ್ಯ ಸಂಪತ್ತಿನ ಸೋಜಿಗ ಹಾಗೂ ಕುತೂಹಲವನ್ನು ನೋಡುಗರ ಎದುರು ಅನಾವರಣಗೊಳಿಸಿತು.
ವರ್ಣ ಚಿತ್ತಾರದ ವಿಂಡೋಸ್: ಬಿಳಿ, ತಿಳಿ ಗುಲಾಬಿ, ಹಸಿರು ವರ್ಣ ಚಿತ್ತಾರದ ವಿಂಡೋಸ್ ಮೀನುಗಳ ಆಕಾರದಲ್ಲಿ ಚಿಕ್ಕವು. ಗುಂಪು ಗುಂಪಾಗಿ ಇರುವ ಈ ಮೀನುಗಳು ಸಂಯೋಜಿತವಾಗಿ ನೀರಿ ತೊಟ್ಟಿಲ್ಲಿ ಈಜುತ್ತವೆ.
ವಿದೇಶಿ ಮತ್ಸ್ಯಗಳು: ಥೈಲ್ಯಾಂಡ್‍ನ ಲೆಮನ್ ಆಸ್ಕರ್, ಜಪಾನೀಸ್ ಕೋಯಿ ಕಾರ್ಟ್, ಸಿಂಗಾಪುರ ಆಮೆ, ಮಾರಕ ದಂತ ಪಕ್ತಿಯಿಂದ ಕುಖ್ಯಾತವಾಗಿರುವ ಪಿರಾನಾ ಸೇರಿದಂತೆ ಹಲವು ವಿದೇಶಿ ಮೂಲದ ಮೀನಿನ ತಳಿಗಳು ಮತ್ಸ್ಯ ಲೋಕದಲ್ಲಿ ಗಮನ ಸೆಳೆಯುತ್ತಿವೆ.
ಜಲ ದೇವತೆ ಮತ್ತು ಜಲ ಪುಷ್ಪ: ಸಾಗರ ಆಳದ ಏಂಜಲ್(ದೇವತೆ) ಹಾಗೂ ಫೆÇ್ಲೀರಾ(ಪುಷ್ಪ) ಮೀನುಗಳು ವಿವಿಧ ಬಣ್ಣಗಳಲ್ಲಿವೆ. ಗೃಹ ಬಳಕೆಯ ಅಕ್ವೇರಿಯಂನಲ್ಲಿ ಕಂಗೊಳಿಸುವ ಈ ಮೀನುಗಳು ಮನೆಯ ಅಂದ ಹೆಚ್ಚಿಸಲು ಸಹಾಯಕಾರಿಯಗಿವೆ.
ಕ್ಯಾಟ್, ಕೋಯಿ ಕಾರ್ಮ್, ಟೈಗರ್ ಆಸ್ಕರ್, ಕ್ಲಾನ್ , ರೆಡ್ ಕ್ಯಾಪ್ ಗೋಲ್ಡ್, ಲಯನ್ ಹೆಡ್, ಫೈಟರ್, ರೆಡ್ ಸ್ಪಾಟ್ ಸ್ಪೋರಮ್, ಚಿಚಲಟ್ಸ್, ಸ್ಟಾಲ್, ಮಲಾಬಿ ಗೊರಮೆ, ಕ್ಲಾನ್, ಶಕರ್ ಕ್ಯಾಟ್, ಸ್ನೇಕ್ ಹಡ್, ಡಿಸ್ಕಸ್, ಪೈರ್ ರೆಡ್ ಆಶಲರ್, ಹನಿ(ಜೇನು) ಹಾಗೂ ಪರ್ಲ್ (ಮುತ್ತಿ) ಬಣ್ಣದ ಗ್ರೂಮೆ ಹಾಗೂ ನಕ್ಷತ್ರ ಮೀನು ಸೇರಿ ಒಟ್ಟು 48ಕ್ಕೂ ಹೆಚ್ಚಿನ ತಳಿಯ ಮೀನುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ಇವುಗಳ ಜೊತೆ ಮೀನುಗಾರಿಕೆ ಇಲಾಖೆ ವತಿಯಿಂದ ಒಳನಾಡು ಹಾಗೂ ಕರಾವಳಿ ಮೀನು ಅಭಿವೃದ್ಧಿಗಾಗಿ ಜಾರಿಗೆ ತಂದಿರುವ ಯೋಜನೆಗಳು, ಆಹಾರಕ್ಕಾಗಿ ಬಳಕೆಯಲ್ಲಿರುವ ಮೀನುಗಳ ಕುರಿತು ಮಾಹಿತಿ ನೀಡುವ ಭಿತ್ತಿ ಚಿತ್ರಗಳು ಮತ್ಸ್ಯ ಪ್ರದರ್ಶನದಲ್ಲಿವೆ.

LEAVE A REPLY

Please enter your comment!
Please enter your name here