ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಕುರಿತು ಜಾಗೃತಿ ಕಾರ್ಯಕ್ರಮ,

0
513

ಸಂಡೂರು:ಸೆ:01:- ತಾಲೂಕಿನ ‌ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದ ಅಂಕಲಮ್ಮ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾದ ವಿಶ್ವ ಹಿರಿಯ ನಾಗರೀಕರ ದಿನಾಚರಣೆಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು,

ಕಾರ್ಯಕ್ರಮ ಕುರಿತು ಮಾತನಾಡಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಎಲ್ಲರಿಗೂ ವಯಸ್ಸಾಗುತ್ತೆ ಅರವತ್ತು ವರ್ಷ ತುಂಬಿದರೆ ಹಿರಿಯ ನಾಗರೀಕರೇ, ಹಿರಿಯ ನಾಗರೀಕರನ್ನು ಗೌವರಯುತವಾಗಿ ಕಾಣಬೇಕು, ಅವರ ಜ್ಞಾನ ಮತ್ತು ಅನುಭವವನ್ನು ಯವಕರು ಬಳಸಿಕೊಳ್ಳಬೇಕು, ಹಿರಿಯ ನಾಗರೀಕರ ಆರೋಗ್ಯ ನೋಡಿಕೊಳ್ಳುವುದು ಅತೀ ಮುಖ್ಯ, ಕಾಲಕಾಲಕ್ಕೆ ಅವರನ್ನು ಆಸ್ಪತ್ರೆಗೆ ಕರೆ ತಂದು ಕಣ್ಣುಗಳ ಪರೀಕ್ಷೆ, ರಕ್ತದೊತ್ತಡ, ಸುಗರ್ ಲೆವೆಲ್ ಪರೀಕ್ಷೆ ಮಾಡಿಸಬೇಕು ಹಾಗೆ ಉತ್ತಮ ಆಹಾರ ಕೊಡುವುದು ಸಹಾ ಅಷ್ಟೇ ಮುಖ್ಯ, ವಿಟಮಿನ್, ಖನಿಜಾಂಶಗಳ ಯುಕ್ತ ಆಹಾರ, ಹಾಲು, ಹಣ್ಣು ಕೊಡುವುದು ಮುಖ್ಯವಾಗಿದೆ, ಕ್ಯಾಲ್ಸಿಯಂ ಮಾತ್ರೆಗಳನ್ನು ನಿಯಮಿತವಾಗಿ ನೀಡಬೇಕಾಗುತ್ತದೆ, ಹಾಗೇ ಮುಖ್ಯವಾಗಿ ಹಿರಿಯರ ಮೇಲೆ ನಡೆಯುವ ದೌರ್ಜನ್ಯ ತಡೆಯಬೇಕು, ವೃದ್ಧಾಪ್ಯದಲ್ಲಿ ಹಣದ ಅವಶ್ಯಕತೆ ಇರುತ್ತದೆ ಅಂತ ಸ್ವಲ್ಪ ಹಣ ಕೂಡಿಟ್ಟಿರುತ್ತಾರೆ, ಆದರೆ ಕೆಲವರು ಹೊಡೆದು, ಬಡೆದು ಕಿತ್ತುಕೊಂಡವರ ಸುದ್ದಿಯನ್ನು ಕೇಳಿದ್ದೇವೆ, ಆಸ್ತಿಗಾಗಿ, ಆರೈಕೆಗಾಗಿ ಹಲ್ಲೆಗಳು ನಡೆದ ಸುದ್ಧಿ ಕೇಳಿ ಬೇಸರ ತರಿಸುತ್ತವೆ, ಅದಕ್ಕಾಗಿ ಸರ್ಕಾರ ಕಾನೂನು ಜಾರಿಮಾಡಿದೆ, ಶಿಕ್ಷೆ ಮತ್ತು ದಂಡವನ್ನು ವಿಧಿಸುತ್ತದೆ ಎಂಬುದನ್ನು ಅರಿಯ ಬೇಕು, 1090 ಸಹಾಯ ವಾಣಿ ಅಥವಾ ರಾಷ್ಟ್ರ ಮಟ್ಟದ 14567 ಸಹಾಯವಾಣಿಗೆ ಕರೆ ಮಾಡಿ ರಕ್ಷಣೆ ಪಡೆಯುವ ಅವಕಾಶವೂ ಇದೆ ಎಂಬುದನ್ನು ತಿಳಿಸಿದರು,

ಎನ್.ಸಿ.ಡಿ ತಂಡದವರು ವಾರ್ಡುಗಳಿಗೆ ಬಂದು ಆರೋಗ್ಯ ತಪಾಸಣೆ ನಡೆಸುವರು, ಸ್ಥಳದಲ್ಲೇ ಚಿಕಿತ್ಸೆ ನೀಡುವರು,ಇದರ ಸೌಲಭ್ಯ ಪಡೆದುಕೊಳ್ಳಬೇಕು, ಮತ್ತು ವೃದ್ಧಾಪ್ಯ ವೇತನ ಸಂಪೂರ್ಣ ಅವರಿಗೆ ಬಳಕೆಗೆ ನೋಡಿಕೊಳ್ಳಬೇಕು, ಎಲ್ಲಾ ಹಿರಿಯ ನಾಗರೀಕರು ಸೇವಾಸಿಂಧು ಮೂಲಕ ಗುರುತಿನ ಚೀಟಿ ಪಡೆಯಬೇಕು, ರಿಯಾಯಿತಿ ಬಸ್ ಪಾಸ್ ಸೌಲಭ್ಯ ಪಡೆಯಬೇಕು, ಬಸ್ಸುಗಳಲ್ಲಿ ಆಸನಗಳನ್ನು ಅವರಿಗೆ ಬಿಟ್ಟುಕೊಡಬೇಕು, ಮತ್ತು ಮನೆಯಲ್ಲಿ ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು ಪ್ರೀತಿಯ ಮಾತುಗಳಿಂದ ಅವರನ್ನು ನೋಡಿಕೊಂಡರೆ ಸಾಕು ಹಿರಿಯರು ಸಂತೋಷದಿಂದ ಇರುವರು, ಯಾರು ಸಂಬಂಧಿಕರು ಇಲ್ಲದೇ ಇದ್ದರೆ ಸರ್ಕಾರದ ಮತ್ತು ಅನುದಾನಿತ ವೃದ್ಧಾಶ್ರಗಳನ್ನು ಅವಲಂಭಿಸ ಬೇಕಾಗಬಹುದು ಎಂದು ಮಾಹಿತಿ ನೀಡಿದರು,ಹಾಗೆ ವಿಶೇಷವಾಗಿ ಹಿರಿಯ ನಾಗರೀಕರ ಆರೋಗ್ಯ ತಪಾಸಣೆಯನ್ನು ಮಾಡಲಾಯಿತು,

ಈ ಸಂದರ್ಭದಲ್ಲಿ ಎಸ್.ಡಿ.ಎಮ್.ಸಿ ಅಧ್ಯಕ್ಷ ಎಸ್ ನಾರಾಯಣ್, ಶಾಲೆಯ ಮುಖ್ಯಗುರು ಎಸ್.ಎನ್ ಬಾಬು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಎನ್.ಸಿ. ಡಿ ಶುಶ್ರೂಷಣಾಧಿಕಾರಿ ಮಾರೇಶ್, ಆಶಾ ಕಾರ್ಯಕರ್ತೆ ಶ್ರೀದೇವಿ, ರೇಖಾ, ಪದ್ಮಾ, ನಾಗರೀಕರಾದ ಪೆನ್ನಯ್ಯ, ಶ್ರೀರಾಮುಲು, ಅಮೀದ್ ಶೋಹಲ್,ಅಬ್ದುಲ್ಲಾ, ಬೀಮಲಿಂಗಮ್ಮ,ಸಾಲಮ್ಮ,ಚಿಟ್ಟೆಮ್ಮ, ಯಶೋದಮ್ಮ,ಪೆದ್ದಮ್ಮ, ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here