ಹದಿಹರೆಯದ ಮಕ್ಕಳಿಗೆ ಹೆಚ್ಚಿನ ಪೌಷ್ಟಿಕಾಹಾರ ಅವಶ್ಯಕತೆ ಅಗತ್ಯ

0
401

ಸಂಡೂರು:ಪೆ:08:- ಅನಿಮಿಯಾ ಮತ್ತು ಅಪೌಷ್ಟಿಕತೆ ಮುಕ್ತ ಗ್ರಾಮ ರೂಪಿಸಲು ಫಣ ತೊಡೋಣ: ಆರ್.ಡಿ.ಪಿ.ಆರ್ ಸಹಾಯಕ ನಿರ್ದೇಶಕ ದುರುಗಪ್ಪ, ಹೇಳಿದರು
ತಾಲೂಕಿನ ವಡ್ಡು ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾದ ಆರೋಗ್ಯ ಅಮೃತ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಜನರ ಆರೋಗ್ಯ ಕಾಪಾಡಲು ಸಾಧ್ಯವಾಗುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು, ಸಾರ್ವಜನಿಕರ ಸಹಕಾರ ಮುಖ್ಯ ಎಂದು ಸಭೆಯನ್ನುದ್ದೇಶಿಸಿ ಅವರು ತಿಳಿಸಿದರು,

ಈ ಸಂದರ್ಭದಲ್ಲಿ ಅಂಗವಾಡಿ ಮೇಲ್ವಿಚಾರಕಿ ಲಕ್ಷ್ಮಿ ಪರಸಣ್ಣನವರ್ ಮಾತನಾಡಿ ಹೆಣ್ಣು ಗಂಡು ಭೇದ ಭಾವ ಇಲ್ಲದೇ ಪೌಷ್ಟಿಕ ಆಹಾರ ಸೇವಿಸ ಬೇಕು,ಹಿಂದಿನ ಕಾಲದಂತೆ ಎಲ್ಲರೂ ಒಂದೇ ಸಾರಿ ಕುಳಿತು ಕುಟುಂಬ ಭೋಜನ ಮಾಡುವುದನ್ನು ಮತ್ತೆ ಮುಂದುವರೆಸಬೇಕು, ಹದಿಹರೆಯ ಮಕ್ಕಳಿಗೆ ಹೆಚ್ಚಿನ ಪೌಷ್ಟಿಕಾಹಾರ ಅವಶ್ಯಕತೆ ಇರುತ್ತದೆ, ಲಭ್ಯ ಇರುವ ಆಹಾರ ಧಾನ್ಯಗಳನ್ನು ಬಳಸಿಕೊಂಡು ಪೋಷಕ ಆಹಾರ ತಯಾರಿಸಬಹುದು, ಬೆಳೆಯುವ ಮಕ್ಕಳಿಗೆ ಹೆಚ್ಚು ಆಹಾರ ಸೇವಿಸುವಂತೆ ಪ್ರೋತ್ಸಾಹಿಸಬೇಕು, ಜೀರೋ ಸೈಜ್ ಎನ್ನುವ ಭಾವನೆಯನ್ನು ತೆಗೆದು ಬಿಡೋಣ ಮಕ್ಕಳು ಉಂಡು ತಿಂದು ದುಂಡಾಗಿರಲಿ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಅಸಾಂಕ್ರಾಮಿಕ ರೋಗಗಳ ತಡೆ, ಕ್ಷಯ ಮುಕ್ತ ಭಾರತ ನಿರ್ಮಾಣ, ಮಾನಸಿಕ ಆರೋಗ್ಯ ಕುರಿತು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಹದಿಹರೆಯದವರ ಆರೋಗ್ಯ, ಮುಟ್ಟಿನ ನೈರ್ಮಲ್ಯತೆ ಕುರಿತು ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್ ಮಾತನಾಡಿದರು, ಕೆ.ಹೆಚ್.ಪಿ.ಟಿ ಸಂಯೊಜಕ ಗಣೇಶ್ ನಡೆಸಿಕೊಟ್ಟರು,

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಿದ್ದಪ್ಪ,ಕಾರ್ಯದರ್ಶಿ ಜುಬೇರ್ ಅಹಮದ್, ಸದಸ್ಯರಾದ ಸತೀಶ್ ಕುಮಾರ್, ರಾಜಣ್ಣ,ಹನುಮಂತಪ್ಪ, ತಿಪ್ಪೇಸ್ವಾಮಿ, ಬಸಪ್ಪ,ಬಸವರಾಜ,ಸಣ್ಣ ರುದ್ರಗೌಡ,ನಾಗರಾಜ,ದೊಡ್ಡ ಬಸಪ್ಪ,ಅಳ್ಳಪ್ಪ,ಮಲಿಯಪ್ಪ, ಶಾಲೆಯ ಮುಖ್ಯ ಶಿಕ್ಷಕರಾದ ಭಾರತಿ,ಷಡಕ್ಷರಿ, ಆಶಾ ಕಾರ್ಯಕರ್ತೆ ಭಾರತಿ,ಲಕ್ಷ್ಮಿ,ಮಂಜುಳಾ, ವಿಜಯಲಕ್ಷ್ಮಿ,ಸುಮಂಗಳಾ, ಅಂಗನವಾಡಿ ಕಾರ್ಯಕರ್ತೆ ಜ್ಯೋತಿ, ಪಾರ್ವತಿ,ಪ್ರೇಮಾ, ನಾಗರತ್ನ,ಗಂಗಮ್ಮ, ಯಶೋಧ, ಶಿವರುದ್ರಮ್ಮ,ಎನ್.ಅರ್.ಎಲ್.ಎಮ್ ಸಂಯೋಜಕಿ ಉಷಾ, ಕುಸುಮಾ, ಮಾಬುನ್ನಿ, ರಮೀಜಾ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here