ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಜನರ ಕಾಳಜಿ ಇದ್ದರೆ ಹಗರಿಬೊಮ್ಮನಹಳ್ಳಿ ಕ್ಷೇತ್ರದ 22 ಕೆರೆಗೆ ನೀರು ತುಂಬಿಸುವ 379 ಕೋಟಿ.ಅನುದಾನ ಬಿಡುಗಡೆ ಮಾಡಲಿ: ಶಾಸಕ ಭೀಮಾನಾಯ್ಕ್ ಸವಾಲ್

0
403

ಕೊಟ್ಟೂರು:ಪೆ:9:- ಕೊಟ್ಟೂರು ಭಾಗದ ಜನರ ಮತ್ತು ರೈತರ ಬಗ್ಗೆ ಸ್ವಲ್ಪವು ಕಾಳಜಿ ಇಲ್ಲದೆ, ಸನ್ಮಾನ್ಯ ಮುಖ್ಯಮಂತ್ರಿಗಳು ಬಸವರಾಜ್ ಬೊಮ್ಮಾಯಿ ಅವರು ತರಳಬಾಳು ಹುಣ್ಣಿಮೆಯ 4ನೇ ತಾರೀಖಿನ ಕಾರ್ಯಕ್ರಮದಲ್ಲಿ ಸುಳ್ಳು ಭರವಸೆಗಳನ್ನು ನೀಡಿ ಇಲ್ಲಿನ ಜನರನ್ನು ದಾರಿ ತಪ್ಪಿಸುವ ಕಾರ್ಯಮಾಡಿದ್ದಾರೆ ಎಂದು ಕ್ಷೇತ್ರದ ಶಾಸಕ ಎಸ್.ಭೀಮಾನಾಯ್ಕ್ ಕಿಡಿಕಾರಿದರು.

ಮಂಗಳವಾರ ಶ್ರೀ ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವದ ಪೂರ್ವಬಾವಿ ಸಿದ್ದತಾ ಸಭೆಗೆ ಆಗಮಿಸಿದ ವೇಳೆ, ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ತರಳಬಾಳು ಹುಣ್ಣಿಮೆಗೆ ಹೋಗಿದ್ದ ಸಂದರ್ಭದಲ್ಲಿ ನನ್ನೊಡನೆ ಖುದ್ದಾಗಿ ಪ್ರಸ್ತಾಪಿಸಿದ ಸಿರಿಗೇರಿ ಜಗದ್ಗುರುಗಳು ಸಿದ್ಧರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ನನ್ನದೊಂದು ಪೋನ್ ಕಾಲ್ ಮೂಲಕ ಭರಮಸಾಗರ ಮತ್ತು ಜಗಳೂರು ತಾಲೂಕಿನ 57 ಕೆರೆಗಳಿಗೆ ನೀರು ತುಂಭಿಸಲು 1200 ಕೋಟಿ ಶೀಘ್ರ ಬಿಡುಗಡೆ ಮಾಡಿದ್ದರು ಎಂದು ಹೇಳಿದ್ದಾರೆ ಅಂತಹ ಮಹತ್ತರ ಕೊಡುಗೆ ಬಗ್ಗೆ ತರಳಬಾಳು ವೇದಿಕೆಯಲ್ಲಿ ಬಸವರಾಜ್ ಬೊಮ್ಮಾಯಿ ಅವರಿಗೆ ಮಾತನಾಡುವ ನೈತಿಕತೆ ಇದಿಯೇ ಎಂದು ಭೀಮಾನಾಯ್ಕ್ ಪ್ರಶ್ನಿಸಿದರು.

ಸನ್ಮಾನ್ಯ ಮುಖ್ಯಮಂತ್ರಿಗಳಿಗೆ
ಸರಿಯಾದ ಮಾಹಿತಿ ಇಲ್ಲದೆ ಇಲ್ಲಿ ಬಂದು ಸಂಗಮೇಶ್ವರ ಮತ್ತು ಬಳಿಗನೂರು ಸೇತುವೆಗೆ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಿಸುವೆ ಎಂದು ಹೇಳಿದರು ಆದರೆ ಅದರ ನಿರ್ಮಾಣಕ್ಕೆ ಯಾವ? ಅನುದಾನ, ಮತ್ತು ಎಷ್ಟು? ಅನುದಾನ ಬಿಡುಗಡೆ ಮಾಡಿರುವೆ ಎಂದು ಹೇಳದೆ, ತಾವೇ ನಿರ್ಮಿಸುವ ರೀತಿಯಲ್ಲಿ ಇಲ್ಲಿನ ಜನರನ್ನು ದಾರಿತಪ್ಪಿಸುವ ಸುಳ್ಳು ಭರವಸೆ ನೀಡಿದ್ದಾರೆ.

ವಾಸ್ತವವೇನಂದರೆ ಉಭಯ ಗ್ರಾಮಸ್ಥರ ಕೋರಿಕೆ ಮೇರೆಗೆ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣಕ್ಕೆ ನಮ್ಮ ಅನುದಾನದಲ್ಲಿ ಈಗಾಗಲೆ 10 ಕೋಟಿ ರೂ.ಪ್ರಸ್ತಾವನೆ ಕಳಿಸಿರುವೆ ಎಂದು ಹೇಳಿದರು.

ಈ ರೀತಿ ಸರಿಯಾದ ಮಾಹಿತಿ ಇಲ್ಲದೆ ಮುಖ್ಯಮಂತ್ರಿಗಳು ಇಲ್ಲಿ ಬಂದು ಸಂಗಮೇಶ್ವರ ಮತ್ತು ಬಳಿಗನೂರು ಸೇತುವೆಗೆ ಬ್ರಿಡ್ಜ್ ಕಮ್ ಬ್ಯಾರೇಜ್ ಬಗ್ಗೆ ಮತ್ತು ಕೆರೆಗೆ ತುಂಬಿಸಲು ನದಿ ನೀರು ವರ್ಷದಲ್ಲಿ ಕೇವಲ 3 ತಿಂಗಳ ಮಾತ್ರ ದೊರೆಯುತ್ತೆ.

ಕೂಡ್ಲಿಗಿ ಕ್ಷೇತ್ರದ ಕೆರೆಗಳಿಗೆ ಸಂಪೂರ್ಣ ನೀರು ತುಂಬಲು ಸುಮಾರು 3 ವರ್ಷ ಬೇಕು ಅಂತದರಲ್ಲಿ, , ಕೂಡ್ಲಿಗಿ ಕೆರೆಗಳಿಗೆ ಸಾಗುವಂತಹ ಕೊಟ್ಟೂರು ಸಮೀಪದ ಬೈರದೇವರ ಗುಡ್ಡದ ಬಳಿ ಇರುವ ಡಿಲವೆರಿ ಚೇಂಬರ್ ಮೂಲಕ ಕೊಟ್ಟೂರು ಕೆರೆಗೂ ನೀರು ತುಂಬಿಸುವ ಕಾರ್ಯ ಅಸಾಧ್ಯ ಇದನ್ನು ತಿಳಿಯದ ಮುಖ್ಯಮಂತ್ರಿಗಳು ಮುಸುಳೆ ಕಣ್ಣೀರು ವರಿಸುವ ರೀತಿಯಲ್ಲಿ ಜನರಿಗೆ ಸುಳ್ಳು ಭರವಸೆ ನೀಡಿದ್ದಾರೆ ಎಂದು ಚೇಡಿಸಿದರು.

2019 ರಲ್ಲಿ ಸಮ್ಮಿಶ್ರ ಸರ್ಕಾರ ಇದ್ದಂತಹ ವೇಳೆಯಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರದ 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ,379 ಕೋಟಿ. ರೂ. ಕ್ರಿಯಾಯೋಜನೆಯ ಡಿಪಿಆರ್ ಆಗಿ ಸದನದ ಆರ್ಥಿಕ ಇಲಾಖೆಯಲ್ಲಿ ಇದೆ ನಿಜವಾಗಲೂ ಸನ್ಮಾನ್ಯ ಮುಖ್ಯಮಂತ್ರಿ ಅವರಿಗೆ ಈ ಬಾಗದ ಜನರ ಬಗ್ಗೆ ಜವಾಬ್ದಾರಿ ಮತ್ತು ಕಾಳಜಿ ಇದ್ದಿದ್ದೇ ಆದರೆ ಶೀಘ್ರ ಆ ಅನುದಾನ ಬಿಡುಗಡೆ ಮಾಡಿ ಜನ ಪರ ನಾಯಕ ಎಂಬುದನ್ನು ಸಾಬೀತು ಪಡಿಸಲಿ ಎಂದು ಸವಾಲು ಹಾಕಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಎಂ.ಎಂ.ಜೆ ಸತ್ಯಪ್ರಕಾಶ್, ಕೊಟ್ಟೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐ.ಧಾರುಕೇಶ್,ಅಡಕಿ ಮಂಜುನಾಥ ಮತ್ತಿತರರು ಇದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here