ಬಂಡ್ರಿ ಶಾಲೆಗಳಲ್ಲಿ ಮಕ್ಕಳಿಗೆ ಸಿಗುತ್ತಿಲ್ಲ ಕ್ಷೀರಭಾಗ್ಯ..!!

0
104

ಸಂಡೂರು:ನ:18:-ಸಂಡೂರು ತಾಲೂಕಿನ ಬಂಡ್ರಿ ಶಾಲೆಗಳಲ್ಲಿ ಮಕ್ಕಳಿಗೆ ಕ್ಷೀರಬಾಗ್ಯ ಪಡೆಯುವ ಅವಕಾಶವೇ ಇಲ್ಲದಂತಾಗಿದೆ,

ಶಾಲೆಗಳು ಪ್ರಾರಂಭವಾಗಿ ಹಲವು ದಿನಗಳು ಕಳೆದರು ಶಾಲಾ ಮುಖ್ಯಗುರುಗಳು ನಮಗೆ ಇಲಾಖೆಯಿಂದ ಮಕ್ಕಳಿಗೆ ಹಾಲು ಕಾಯಿಸಿ ಕೊಡಲು ಯಾವುದೇ ಆದೇಶ ಬಂದಿಲ್ಲ ಎಂದು ಹಾರಿಕೆಯ ಹಾಗೂ ಬೇಜಾಬ್ದಾರಿತನದ ಉತ್ತರವನ್ನು ಕೊಡುತ್ತಿದ್ದಾರೆ

ಶಾಲೆಗಳಿಗೆ ಇಲಾಖೆಯಿಂದ ಹಾಲಿನ ಪುಡಿಯ ಪಾಕೇಟ್ ಗಳು ಬಂದು ವಾರಗಳೇ ಕಳೆಯುತ್ತಿವೆ ಆದರೂ ಅದನ್ನು ಪೂರೈಸುವ ಬಗ್ಗೆ ಯಾರೂ ಸಹ ಕಾಳಜಿಯನ್ನು ವಹಿಸುತ್ತಿಲ್ಲ, ಮಕ್ಕಳ ಪೋಷಕರು ಶಾಲಾ ಮುಖ್ಯಗುರುಗಳನ್ನು ಕೇಳಿದರೆ ಶಾಲೆಯ ಗ್ಯಾಸ್ ಸಿಲಿಂಡರ್ ಖಾಲಿಯಾಗಿದೆ ಹಾಗಾಗಿ ಮಕ್ಕಳಿಗೆ ಕಾಯಿಸಿ ಕೊಟ್ಟಿಲ್ಲ ಎನ್ನುತ್ತಾರೆ, ಗ್ಯಾಸ್ ಸಿಲಿಂಡರ್ ಇಲ್ಲದಿದ್ರೆ ಅದಕ್ಕೊಂದು ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಂಡು ಮಕ್ಕಳಿಗೆ ಬಂದಂತಹ ಕ್ಷೀರಭಾಗ್ಯವನ್ನು ಸಮರ್ಪಕವಾಗಿ ನಿಬಾಯಿಸಬವುದಲ್ವಾ..! ಅಷ್ಟನ್ನೂ ಮಾಡಿಕೊಳ್ಳಲಾಗದೆ ಎಲ್ಲವನ್ನು ಇಲಾಖೆಯ ಆದೇಶ ಬರಲಿ ಅವರ ಗ್ಯಾಸ್ ಸಿಲಿಂಡರ್ ಕೊಡಲು ಎನ್ನುವ ದಿನದವರೆಗೂ ಕಾಯುತ್ತಿದ್ದರೆ ಎಂದರೆ ಇವರು ಇನ್ನು ಯಾವ ರೀತಿಯಾಗಿ ಶಾಲೆಯನ್ನು ಮಕ್ಕಳನ್ನು ನಿಭಾಯಿಸುತ್ತಿರಬವುದು ಊಹಿಸಿಕೊಳ್ಳಿ

ಸಂಬಂಧಪಟ್ಟ ಬಿಇಓ ಹಾಗೂ ಅಕ್ಷರ ದಾಸೋಹದ ಅಧಿಕಾರಿಗಳು ಕ್ಷೀರಭಾಗ್ಯ ಯೋಜನೆಯು ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಯಾಕೇ ಪೂರೈಕೆ ಆಗುತ್ತಿಲ್ಲ ಎಂಬುದರ ಬಗ್ಗೆ ಪರಿಶೀಲನೆ ಮಾಡಿ ಸೂಕ್ತ ಕ್ರಮವನ್ನು ಕೈಗೊಳ್ಳಿ,ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಕ್ಷೀರಭಾಗ್ಯ ಯೋಜನೆ ಮಕ್ಕಳಿಗೆ ಸಿಗುವಂತಾಗಲಿ

LEAVE A REPLY

Please enter your comment!
Please enter your name here