ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಒಳಾಂಗಣ ಕೀಟನಾಶಕ ಸಿಂಪರಣೆ: ಶಿವಪ್ಪ

0
277

ಸಂಡೂರು:ಫೆ:10: ಸೊಳ್ಳೆಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯಿಂದ ಆಯ್ದ ಗ್ರಾಮಗಳಲ್ಲಿ ಒಳಾಂಗಣ ಕೀಟನಾಶಕ ಸಿಂಪರಣೆ ಕಾರ್ಯ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು

ತಾಲೂಕಿನ ತೋರಣಗಲ್ಲು, ತೋರಣಗಲ್ಲು ರೈಲ್ವೆ ನಿಲ್ದಾಣ, ಮತ್ತು ವಡ್ಡು ಗ್ರಾಮಗಳಲ್ಲಿ ಸೋಮವಾರದಿಂದ ಸೊಳ್ಳೆಗಳ ನಿಯಂತ್ರಣಕ್ಕೆ ಒಳಾಂಗಣ ಕೀಟ ನಾಶಕ ಸಿಂಪರಣೆ ಕಾರ್ಯ ಹಮ್ಮಿಕೊಳ್ಳಲಾಗುವುದು, ಸಿಂಪರಣೆ ಕಾರ್ಯ ಯಶಸ್ವಿಯಾಗಲು ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಲಾಗುತ್ತಿದೆ, ಈಗಾಗಲೇ ಸಂಬಂಧಿಸಿದ ಗ್ರಾಮ ಪಂಚಾಯತಿ ಸಭೆಗಳಲ್ಲಿ ಮಾಹಿತಿಯನ್ನು ನೀಡಲಾಗಿದ್ದು, ಸಿಬ್ಬಂದಿ ಮನೆಗಳಿಗೆ ಸಿಂಪರಣೆಗೆ ಬಂದಾಗ ಸಹಕಾರ ನೀಡಿದರೆ ಸೊಳ್ಳೆಗಳ ನಿಯಂತ್ರಣ ಮಾಡಲು ಸಾಧ್ಯ, ಸಿಂಪರಣೆ ಸಿಬ್ಬಂದಿ ಬಂದಾಗ ಮನೆ ಬಾಗಿಲು ಹಾಕಿಕೊಂಡು ಹೋಗ ಬಾರದು, ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ತಿಳಿಸಿದರು,

ಆರು ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ, ಚಿಕೂನ್ ಗುನ್ಯಾ, ಮಲೇರಿಯಾ, ಮೆದುಳು ಜ್ವರ,ಆನೆಕಾಲು ರೋಗ ಮತ್ತು ಝೀಕಾ ಕಾಯಿಲೆ ತಡೆಯಲು ಸೊಳ್ಳೆಗಳ ನಿಯಂತ್ರಣ ಭಾಗವಾದ ಒಳಾಂಗಣ ಕೀಟ ನಾಶಕ ಸಿಂಪರಣೆ ಕಾರ್ಯವನ್ನು ಯಶಸ್ವಿಗೊಳಿಸಲು ಅವರು ಮನವಿ ಮಾಡಿದರು,

ಚಿತ್ರದಲ್ಲಿ ಆಶಾ ಕಾರ್ಯಕರ್ತೆ ಮೇಘನಾ, ಎರ್ರಮ್ಮ ಸಾರ್ವಜನಿಕರಿಗೆ ಸಿಂಪರಣೆ ಕಾರ್ಯ ಕುರಿತು ಅರಿವು ಮೂಡಿಸುತ್ತಿರುವುದು.

LEAVE A REPLY

Please enter your comment!
Please enter your name here