ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆ

0
189

ಸಂಡೂರು:ಜ:15:- ಸಂಡೂರು ಮಹಾರಾಜ ಶ್ರೀಯುತ ಕಾರ್ತಿಕೇಯ ಘೋರ್ಪಡೆ ಯವರ ಕೃತಿಕಾ ಫಾರಂ ಹೌಸ್ ನಲ್ಲಿ ತಾಲೂಕಿನ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಕೆ. ಆರ್. ಕುಮಾರಸ್ವಾಮಿ ಮತ್ತು ತಾಲೂಕು ರೈತ ಸಂಘದ ಅಧ್ಯಕ್ಷರಾದ ಧರ್ಮಾನಾಯ್ಕ್ ಹಲವಾರು ಕಾರ್ಯಕರ್ತರು ಸಂಡೂರು ಮಂಡಲ ಅಧ್ಯಕ್ಷರಾದ ಜಿ.ಟಿ.ಪಂಪಾಪತಿ ಅವರ ನೇತೃತ್ವದಲ್ಲಿ ಬಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು.

ಪಕ್ಷ ಸೇರ್ಪಡೆ ನಂತರ ಕೆ. ಆರ್. ಕುಮಾರಸ್ವಾಮಿ ಮಾತನಾಡುತ್ತ… ಮಕರಸಂಕ್ರಮಣ ಹಬ್ಬದ ಈ ಶುಭದಿನದಲ್ಲಿ ಬಿಜೆಪಿ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿ ಯಾವುದೇ ಷರತ್ತುಗಳನ್ನು ಹಾಗೂ ಅಧಿಕಾರದ ಪದವಿಯ ಆಮಿಷಕ್ಕೆ ಒಳಗಾಗದೇ ಸ್ವ-ಇಚ್ಛೆಯಿಂದ ಬಿಜೆಪಿ ಪಕ್ಷಕ್ಕೆ ನಾನು ಹಾಗೂ ರೈತ ಸಂಘದ ತಾಲೂಕು ಅಧ್ಯಕ್ಷರಾದ ಧರ್ಮನಾಯ್ಕ್ ಸೇರ್ಪಡೆಯಾಗಿದ್ದು, ನಾವು ಪಕ್ಷ ಸೂಚಿಸಿದ ಯಾವುದೇ ಘಟಕಗಳಲ್ಲಿ ಕಾರ್ಯಕರ್ತರಂತೆ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತೇವೆ ಎಂದರು

ಪಕ್ಷಕ್ಕೆ ಸೇರ್ಪಡೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಂಡಲ ಅಧ್ಯಕ್ಷ ಜಿ.ಟಿ. ಪಂಪಾಪತಿ, ನಮ್ಮ ಪಕ್ಷವು ಸಮಾಜದಲ್ಲಿ ಯಾರಾದರೂ ನಿಷ್ಠೆ-ಪ್ರಾಮಾಣಿಕತೆಯಿಂದ ಕೆಲಸದಲ್ಲಿ ತೊಡಗಿರುತ್ತಾರೋ ಅವರೊಂದಿಗೆ ದಿನನಿತ್ಯ ಜನರ ಸಂಪರ್ಕವನ್ನು ಹೊಂದಿರುವವರೊ ಅವರನ್ನು ನಮ್ಮ ಪಕ್ಷ ಗುರುತಿಸುತ್ತೆ.

ರಾಜ್ಯದಲ್ಲಿಯೇ ಸರ್ಕಾರಕ್ಕೆ ಅತೀ ಹೆಚ್ಚು ತೆರಿಗೆಯನ್ನು ಕಟ್ಟುವ ತಾಲೂಕು ಎಂದರೆ ಅದು ಸಂಡೂರು ವಿಧಾನಸಭಾ ಕ್ಷೇತ್ರ.ಸಂಡೂರು ಮಹಾರಾಜ ಹಾಗೂ ಬಿಜೆಪಿ ಮುಖಂಡರಾದ ಶ್ರೀ ಕಾರ್ತಿಕೇಯ ಘೋರ್ಪಡೆ ಯವರ ದೂರದೃಷ್ಟಿಯ ಮತ್ತು ಅಪೇಕ್ಷೆಯ ಮನವಿಯಂತೆ ಈಗಿನ ಮಾನ್ಯ ಬಸವರಾಜ್ ಬೊಮ್ಮಾಯಿ ಸರ್ಕಾರ ಸಂಡೂರು ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 900 ಕೋಟಿ ರೂಪಾಯಿಗಳ ಪ್ರಾಜೆಕ್ಟ್ ನ್ನು ಡಿಪಿಆರ್ ಗೆ ಕಳುಹಿಸಿದೆ ಇನ್ನೇನೂ ಒಂದು ಅಥವಾ ಎರಡು ತಿಂಗಳಲ್ಲಿ ಅನುಮೋದನೆಗೊಂಡು ಚಾಲನೆ ಸಿಗುತ್ತೆ.

ಮಾನ್ಯ ಶಾಸಕರು ಸಂಡೂರು ಜನಕ್ಕೆ ಸರ್ಕಾರದ ಎಲ್ಲಾ ತಾಲೂಕುಗಳಿಗೆ ನಿಯಮಾನುಸಾರ ನೀಡುವ ಯೋಜನೆಗಳಾದ ಪ್ರವಾಸಿ ಮಂದಿರ-ಮುರಾರ್ಜಿ ಶಾಲೆಗಳು-ಯುಜಿಡಿ ಹೀಗೆ ಬೇರೆ ತಾಲ್ಲೂಕುಗಳಿದ್ದಂತೆಯೇ ಇಲ್ಲಿ ಇವೇ ಅದರಲ್ಲಿ ವಿಭಿನ್ನವಾಗಿ ಏನು ಹೊಸತನ ಇಲ್ಲ.

ಅರಣ್ಯ ಹಕ್ಕು ಸಮಿತಿಯ ಈ ಹಿಂದೆ ಕಾಗೋಡು ತಿಮ್ಮಪ್ಪ ಕಂದಾಯ ಸಚಿವರಾಗಿದ್ದಾಗ ಎಲ್ಲಾ ಅರ್ಜಿಗಳನ್ನು ತಿರಸ್ಕರಿಸಿದ್ದರು,2006-07 ರಲ್ಲಿ ಕೇಂದ್ರ ಸರ್ಕಾರವು ಒಂದು ಅಮೇಡ್ಮೆಂಟ್ ನ್ನು ಜಾರಿಗೆ ತಂದಿತು ಒಂದರಿಂದ ಏಳು ಸಾಕ್ಷಿಗಳಿದ್ದರೆ ಮತ್ತು1963 ಪಹಣಿಯಲ್ಲಿ ಸಾಗುವಳಿದಾರರಾಗಿದ್ದರೆ,ಹೀಗೆ ಹಲವು ನಿಬಂಧನೆಗಳು ಇದ್ದವು ಇದೆಲ್ಲವನ್ನು ಅರಿತ ಪರಿಶಿಷ್ಟ ಪಂಗಡದ ಕಮಿಷನರ್ ನಾಗಲಾಂಭಿಕ ದೇವಿಯವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಈ 2022ರ ಜನವರಿ 14ನೇ ತಾರೀಖು ಅರ್ಜಿ ಸಲ್ಲಿಸಲು ಕೊನೆ ದಿನವಾಗಿತ್ತು,ಸಾಗುವಳಿ ಮಾಡುವ ರೈತರನ್ನು ಅಧಿಕಾರಿಗಳು ಒಕ್ಕಲೆಬ್ಬಿಸುವ ಸಮಯದಲ್ಲಿ ಆನಂದ್ ಸಿಂಗ್ ಹಾಗೂ ಸಂಸದ ವೈ. ದೇವೇಂದ್ರಪ್ಪ ಕರೆದೊಯ್ದು ನಾವುಗಳು, ಪಕ್ಷದವರೆಲ್ಲರೂ ತಡೆದಿದ್ದು

ಅತಂತ್ರ ಸ್ಥಿಯಲ್ಲಿ ಭೂರಹಿತರು :-
ಭೂರಹಿತ ಬಡ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಹಾಗೂ ಹಿಂದುಳಿದ ದಲಿತ ಕುಟುಂಬಗಳಿಗೆ ಭೂಮಿಯನ್ನು ನೀಡಲು ಸಾಧ್ಯವಾಗುತ್ತಿಲ್ಲ. ಬಳ್ಳಾರಿ ಜಿಲ್ಲೆಯಲ್ಲಿ ಕರ್ನಾಟಕ ಭೂಕಂದಾಯ ಕಾಯ್ದೆ 1964, ಕಲಂ 94 (ಎ) 4 ಅಡಿಯಲ್ಲಿ ಸರ್ಕಾರಿ ಭೂಮಿಯಲ್ಲಿ ಉಳುಮೆಗಾರರು ಫಾರಂ 57 ಅರ್ಜಿ ಸಲ್ಲಿಸಿ ಸಾಗುವಳಿ ಪತ್ರಕ್ಕಾಗಿ ಅನೇಕ ವರ್ಷಗಳಿಂದ ಕಾಯುತ್ತಿದ್ದಾರೆ. ಅನಾಧೀನ, ಬಗರ್ ಹುಕಂ, ಇತ್ಯಾದಿ ಹೆಸರಿನ ಸಾಗುವಳಿ ಭೂಮಿಯಲ್ಲಿನ 43,971 ಉಳುಮೆಗಾರರು ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ 27,649 ಅರ್ಜಿ ಆನ್ ಲೈನ್ ನೋಂದಾವಣೆ ಆಗಿದ್ದು ಇನ್ನೂ 16,322 ಅರ್ಜಿ ಆನ್ ಲೈನ್ ನೊಂದಾವಣೆ ಬಾಕಿ ಉಳಿದಿದೆ. ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ 5272 ಅರಣ್ಯ ಭೂಮಿ ಸಾಗುವಳಿದಾರರಲ್ಲಿ ಇದುವರೆಗೂ ಹಕ್ಕು ಪತ್ರ ನೀಡಿಲ್ಲ. ಸುಮಾರು 50 ಸಾವಿರ ಬಡ ದಲಿತ ಭೂರಹಿತ ಕುಟುಂಬಗಳು ತಲೆತಲಾಂತರಗಳಿಂದ ಸಾಗುವಳಿ ಮಾಡಿಕೊಂಡು ಬಂದ ಕುಟುಂಬಕ್ಕೆ ತುಂಡು ಭೂಮಿ ಪಟ್ಟ ನೀಡಲು ಸಾಧ್ಯವಾಗಿಲ್ಲ. ಸಂಡೂರು ತಾಲೂಕಿನ ಒಂದರಲ್ಲೇ 3689 ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಎಂದು ತಿಳಿಸಿದರು

ಈ ಸಂಧರ್ಭದಲ್ಲಿ ಸಂಡೂರು ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷರಾದ ಜಿ.ಟಿ.ಪಂಪಾಪತಿ, ಕೆ.ಆರ್,ಕುಮಾರಸ್ವಾಮಿ, ಧರ್ಮನಾಯ್ಕ್, ಸತೀಶ್ ಹೆಗಡೆ,ಶಂಕರ್ ಪೋಳ್, ಹಾಗೂ ಯಶವಂತನಗರ, ಬಂಡ್ರಿ, ಸುಶೀಲಾನಗರದ ಕಾರ್ಯಕರ್ತರು, ಮುಖಂಡರು ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here