ಕೆಪಿಸಿಸಿ ಸದಸ್ಯರಾಗಿ ಗೂಳಿ ಮಲ್ಲಿಕಾರ್ಜುನ ನೇಮಕ

0
400

ಕೊಟ್ಟೂರು:ಪೆ :25:- ಕೊಟ್ಟೂರು ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಕೆ.ಪಿ.ಸಿ.ಸಿ ಸದಸ್ಯರನ್ನಾಗಿ ಜಿ.ಮಲ್ಲಿಕಾರ್ಜುನ (ಗೂಳಿ) ರವರನ್ನು ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಆದೇಶ ಹೊರಡಿಸಿರುವ ಪತ್ರವನ್ನು ಶಾಸಕ ಎಸ್.ಭೀಮಾನಾಯ್ಕ ಮಲ್ಲಿಕಾರ್ಜುನರಿಗೆ ಶನಿವಾರ ವಿತರಣೆ ಮಾಡಿ ಅಭಿನಂದಿಸಿದ್ದಾರೆ.

ಕಾಂಗ್ರೇಸ್ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ಕೆಪಿಸಿಸಿ ಸದಸ್ಯ ತೊಡಗಿಸಿಕೊಂಡು ಪಕ್ಷದ ಸಬಲೀಕರಣ ಕಾರ್ಯದಲ್ಲಿ ಸಮರ್ಪಣ ಭಾವದಿಂದ ತೊಡಗಿಸಿಕೊಳ್ಳುವಂತೆ ಕೆಪಿಸಿಸಿ ಅಧ್ಯಕ್ಷರು ಸೂಚಿಸಿದ್ದು ಈ ದಿಸೆಯಲ್ಲಿ ಕೂಡಲೇ ಕಾರ್ಯಪ್ರವೃತ್ತರಾಗುವಂತೆ ಶಾಸಕರು ಗೂಳಿ ಮಲ್ಲಿಕಾರ್ಜುನಗೆ ಸೂಚಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಕೊಟ್ಟೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐ.ದಾರುಕೇಶ, ಕಂದಗಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಪರುಸಪ್ಪ, ಕಾರ್ಯಕರ್ತರುಗಳಾದ ಮೇಘರಾಜ್, ರಾಜೀವ್, ಕೊಪ್ಪ ಕೊಟ್ರೇಶ್ ಭತ್ತನಹಳ್ಳಿ .ಕಾಸಲ ಪ್ರಕಾಶ ಮತ್ತಿರರು ಇದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here