ಸಂದೇಹವಿಲ್ಲದೆ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಬಂದು ಕರೋನಾ ಲಸಿಕೆ ಪಡಿಯಿರಿ: ಕ್ಷೇತ್ರಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ,

0
140

ಸಂಡೂರು ತಾಲೂಕಿನ ಮೆಟ್ರಿಕಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಂಗ್ಲಾಪುರ,ಗುಂಡ್ಲಹಳ್ಳಿ,ರಾಮಸಾಗರ,
ಬಸಾಪುರ,ಲಕ್ಕಲಳ್ಳಿ ಗ್ರಾಮಗಳಲ್ಲಿ ಲಸಿಕೆ ಪಡೆಯಲು ಮನವೊಲಿಸುವ ಕಾರ್ಯ ಹಮ್ಮಿಕೊಳ್ಳಲಾಗಿತ್ತು,

ಎಪ್ರಿಲ್ 1 ರಿಂದ 45 ವರ್ಷ ಮೇಲ್ಪಟ್ಟ ಎಲ್ಲಾ ವಯಸ್ಸಿನವರಿಗೆ ಲಸಿಕೆ ನೀಡುವ ಅವಕಾಶವನ್ನು ಸರ್ಕಾರ ಕಲ್ಪಿಸಲಾಗಿದ್ದು
45 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆದು ಕರೋನಾ ವಿರುದ್ಧದ ಹೋರಾಟವನ್ನು ಮುಂದುವರಿಸೋಣ, ಲಸಿಕೆ ಪಡೆದ ನಂತರವೂ ಮಾಸ್ಕ್ ಧರಿಸುವುದು, ಆಗಾಗ ಕೈಗಳನ್ನು ಸ್ಯಾನಿಟೈಸ್ ಅಥವಾ ಸೋಪಿನಿಂದ ಸ್ವಚ್ಛ ಗೊಳಿಸುವುದು, ಮತ್ತು ಸಾಮಾಜಿಕ ಅಂತರ ಕಾಪಾಡುವುದು ಮುಂದುವರಿಸಬೇಕಿದೆ,
ಲಸಿಕೆಯನ್ನು ಹಾಕಿಸಿಕೊಂಡ 56 ದಿನಗಳ ನಂತರ ನಿರೋಧಕ ಶಕ್ತಿಯನ್ನು ಹೊಂದಲಿದ್ದೇವೆ ಎಂದು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟರು,

ಲಸಿಕೆ ಪಡೆದಾಗ ಕೆಲವರಿಗೆ ಜ್ವರ,ಮೈ-ಕೈ ನೋವು ಬರುವುದು ಸಹಜ ಇದಕ್ಕಾಗಿ ಹೆದರಿ ಲಸಿಕೆ ಪಡೆಯಲು ಹಿಂಜರಿಯುವುದು ಒಳಿತಲ್ಲ ಅದಕ್ಕಾಗಿ ಪ್ಯಾರಾಸಿಟಾಮೋಲ್ ಮಾತ್ರೆ ಹಾಕಿದರೆ ಸಾಕು,ದಯವಿಟ್ಟು ಗಾಳಿಮಾತುಗಳನ್ನು ನಂಬಬೇಡಿ ಸಂದೇಹವಿಲ್ಲದೇ ಲಸಿಕೆಯನ್ನು ಪಡಿಯಿರಿ ಎಂದು ಜನರಿಗೆ ಮನರಿಕೆ ಮಾಡಿದರು,

ಈ ಸಂದರ್ಭದಲ್ಲಿ ಗಂಗ್ಲಾಪುರ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯರಾದ ಯರ್ರಿಸ್ವಾಮಿ, ಗ್ರಾಮದ ಮುಖಂಡರಾದ ಮೊಳ್ಳಪ್ಪ,ಬಸವರಾಜ,ಹೊನ್ನೂರಪ್ಪ,
ಗೌಸಿದ್ದಪ್ಪ, ಕಿರಿಯ ಆರೋಗ್ಯ ಸಹಾಯಕಿ ಶಂಕ್ರಮ್ಮ,ಔಷಧ ತಜ್ಞ ದೇವರಾಜ್,ಚಂದ್ರೆಗೌಡ, ಆಶಾ ಕಾರ್ಯಕರ್ತೆ ಲಕ್ಷ್ಮೀ, ಅನುಪಮಾ, ರುದ್ರಮ್ಮ ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here